ADVERTISEMENT
Wednesday, March 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಮಹಾಭಾರತದ ದುರ್ಯೋಧನ ನಿಜಜೀವನದಲ್ಲಿ ಸುಯೋಧನ..!

admin by admin
July 13, 2020
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಗಾಂಧಾರಿಯ ಗರ್ಭದ ಗಧಾದರ, ಧೃತರಾಷ್ಟ್ರನ ಮಹಾಸುತ ಮಹೀವರ, ಶತಸೋದರರ ಅಗ್ರಜ ಶರವೀರ,  ಹಸ್ತಿನಾಪುರದ ಕೌರಾವಾಧಿಪತಿ, ಕುರುವಂಶದ ಅಧಃಪತನಕ್ಕೆ ಕಾರಣನಾದ ದುರ್ಯೋಧನ ಮಹಾಭಾರತದ ಮಹಾಕಾವ್ಯದಲ್ಲಿ ಬಹುಮುಖ್ಯಪಾತ್ರ. ಮಹಾಭಾರತ ಎಂದ ತಕ್ಷಣವೇ ನೆನಪಾಗೋದೇ ದುರ್ಯೋಧನ. ಅದ್ರಲ್ಲೂ ಕರ್ಣ ಮತ್ತು ಸುಯೋಧನನ ಸ್ನೇಹ ಸಂಬಂಧ ಎಲ್ಲರಿಗೂ ಮಾದರಿಯಾದದ್ದು. ಕೆಲ ಸದ್ಗುಣಗಳ ನಡುವೆ ಅಹಂಕಾರವನ್ನ ಮೈಗೂಡಿಸಿಕೊಂಡು ಶಕುನಿಮಾಮ ಹೆಣೆದ ಕುತಂತ್ರಿ ಬಲೆಗೆ ಬಲಿಯಾದ ದುರ್ಯೋಧನ ಸೂರ್ಯ ಚಂದ್ರರಿರುವ ವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ನಮ್ಮ ಜೊತೆಗೂ ಹಾಗೂ ನಮ್ಮಲ್ಲಿಯೂ ಇರುತ್ತಾನೆ.    

ಇಂತಹ ಅದ್ಭುತ ಪಾತ್ರವನ್ನು ಈಗ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗ್ತಿರುವ, ಅತ್ಯಂತ  ಜನಪ್ರಿಯ ಹಾಗೂ ಜನಮನ್ನಣೆ ಪಡೆದಿರುವ ಪೌರಾಣಿಕ ಮಾಹಾಭಾರತ ಧಾರಾವಾಹಿಯಲ್ಲಿ ನಟ ಅರ್ಪಿತ್ ರಂಕಾ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಒಂದೇ ಮಾತಿನಲ್ಲಿ ಹೇಳೋದಾದ್ರೆ ಅರ್ಪಿತ್ ರಂಕಾ ಪರಕಾಯ ಪ್ರವೇಶ ಮಾಡಿದ್ದಾರೆ. ಅರ್ಥಾತ್ ದುರ್ಯೋಧನನ ಪಾತ್ರಕ್ಕೆ ಅರ್ಪಿತ್ ಅವರನ್ನ ಬಿಟ್ರೆ ಬೇರೇ ಯಾರನ್ನೂ ಕಲ್ಪನೆಯೂ ಮಾಡಿಕೊಳ್ಳಲು ಸಾಧ್ಯವಾಗದಷ್ಟರ ಮಟ್ಟಿಗೆ ದುರ್ಯೋಧನನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಜನರ ಮನದಲ್ಲಿ ಅವರ ನಟನಾ ಛಾಪು ಅಚ್ಚಳಿಯದೆ ಉಳಿದುಬಿಟ್ಟಿದೆ.

ಇಂತಹ ಅಜಾನಬಾಹು, ಅಧಿಕಾರದ ವ್ಯಾಮೋಹಕ್ಕೆ ಸಿಲುಕಿ ಅಹಂಕಾರದ ದಾರಿ ಹಿಡಿದ ದುರ್ಯೋಧನ ನಿಜಜೀವನದಲ್ಲಿ ನಿಜಕ್ಕೂ ಸುಯೋಧನನೇ. ದುರ್ಯೋಧನನ ಪಾತ್ರದಲ್ಲಿ ಜನರ ಮನಗೆದ್ದಿರುವ ಅರ್ಪಿತ್ ರಂಕಾ ಲೈಫ್ ಜರ್ನಿ ಹೇಗಿದೆ ಗೊತ್ತಾ…?

ಕುಟುಂಬ ಮತ್ತು ವಿಧ್ಯಾಭ್ಯಾಸ

ಅರ್ಪಿತ್ ರಂಕಾ ಅವರು ಮೂಲತಹ ರಾಜಸ್ಥಾನದ ಬಿಲ್ವಾರದವರಾಗಿದ್ದು, 1983ರ ಜೂನ್ 30ರಂದು ಜನಿಸಿದ್ರು. ಇವರತಂದೆ ಲಕ್ಷ್ಮಿ ಲಾಲ್ ರಂಕಾ  2018ರಲ್ಲಿ ಇಹಲೋಕ ತ್ಯಜಿಸಿದ್ದಾರೆ. ಆದರೆ ಇಂದಿಗೂ ತಂದೆಯವರೂ ಹೇಳಿಕೊಟ್ಟ ದಾರಿಯಲ್ಲೇ ಅರ್ಪಿತ್ ತಮ್ಮ ಜೀವನ ನಡೆಸುತ್ತಿದ್ದಾರೆ.  ಇವರ ತಮ್ಮ ವಿಕ್ರಮ್ ರಂಕಾ.  2012 ರಲ್ಲಿ ಅರ್ಪಿತ್ ನಿಧಿ ಸೊಮಾನಿಯಾ ಎಂಬುವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅರ್ಪಿತ್ ಅವರಿಗೆ ಒಬ್ಬಳು ಮುದ್ದಾದ ಮಗಳಿದ್ದು, ಅವಳ ಹೆಸರು ಅರ್ನಿಧ್. ಈಗಿನ ಕಾಲದಲ್ಲಿ ಮದುವೆಯಾದ ನಂತರ ಎಷ್ಟೋ ಜನರು ತಂದೆ ತಾಯಿಯಿಂದ ದೂರ ಉಳಿಯೋದೇ ಹೆಚ್ಚು. ಆದ್ರೆ ಅರ್ಪಿತ್ ಅವ್ರು ಇದಕ್ಕೆ ಡಡೆಡ್ ಆಪೋಸಿಟ್. ಅರ್ಪಿತ್ ಈಗಲೂ ರಾಜಸ್ಥಾನದ ತಮ್ಮ ನಿವಾಸದಲ್ಲಿ ಕುಂಬು ಕುಟುಂಬದಲ್ಲೇ ನೆಲೆಸಿದ್ದಾರೆ.

ಅರ್ಪಿತ್ ಬಿಲ್ವಾರದಲ್ಲಿಯೇ ಸೇವಾ ಸಧನ್ ಮಂದಿರ್ ಶಾಲೆ ಹಾಗೂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿಕೊಂಡಿದ್ದಾರೆ. ಅರ ಕುಟುಂಬ ಶ್ರೀಜಿ ಫ್ಯಾಷನ್ ಎಂಬ ಬಟ್ಟೆ ಅಂಗಡಿಯ ವ್ಯವಹಾರ ನಡೆಸುತ್ತಿದ್ದು, ಪ್ರಸ್ತುತ ಅರ್ಪಿತ್ ಅವರ ತಮ್ಮ ಬ್ಯುಸಿನೆಸ್ ನೋಡಿಕೊಳ್ತಿದ್ದಾರೆ. ಅರ್ಪಿತ್ ಸದಾ ತಮ್ಮ ರಂಎ ಅವರು ಹೇಳಿಕೊಟ್ಟ ದಾರಿಯಲ್ಲೇ ನಡೆಯುತ್ತಾರೆ. ಅದ್ರಂತೆ ಆಗಾಗ ರಕ್ತದಾನ ಮಾಡುವಂತಹ ಒಳ್ಳೆ ಗುಣಗಳನ್ನ  ಮೈಗೂಡಿಸಿಕೊಂಡಿದ್ದಾರೆ.  

ಮಾಡಲಿಂಗ್

ಸದಾ ಆಕ್ಟಿಂಗ್ ನಲ್ಲಿ ಆಸಕ್ತಿ ಹೊಂದಿದ್ದ ಅರ್ಪಿತ್ ವಿಧ್ಯಾಭ್ಯಾಸ ಮುಗಿಯುತ್ತಿದ್ದಂತೆ ತಮ್ಮ ಕನಸನ್ನು ಕನಸು ಮಾಡಿಕೊಳ್ಳಲು 2002 ರಲ್ಲಿ ಮಾಯಾನಗರಿ ಮುಂಬೈಗೆ ಎಂಟ್ರಿ ಕೊಟ್ಟು ಮಾಡಲಿಂಗ್ ಜಗತ್ತಿಗೆ ಪಾದಾರ್ಪಣೆ ಮಾಡಿದ್ರು.  ಅರ್ಜುನ್ ರಾಂಪಾಲ್, ಜಾನ್ ಅಬ್ರಹಂ ರಂತೆ ಬಾಡಿ ಬ್ಯುಲ್ಡ್ ಮಾಡಿಕೊಳ್ಳಲು ಶುರುಮಾಡಿದ್ರು. ಪಕ್ಕಾ ಶಾಖಾಹಾರಿಯಾಗಿದ್ದ ಅರ್ಪಿತ್ ಕೇವಲ ವೆಜಿಟೇರಿಯನ್ ಆಹಾರ ಸೇವನೆಯಿಂದಲೇ ಬಾಡಿ ಬ್ಯುಲ್ಡ್ ಮಾಡಿಕೊಳ್ಲಲು ಸಿಕ್ಕಾಪಟ್ಟೆ ಶ್ರಮಿಸಿದ್ರು. ಆರಂಭದಲ್ಲಿ ಅರ್ಪಿತ್ ಕೆಲ ಜೀನ್ಸ್ ಬ್ರ್ಯಾಂಡ್ ಗಳಿಗೆ ಫ್ರೀಯಾಗಿ ಮಾಡಲಿಂಗ್ ಮಾಡಿದ್ರು. ಹೀಗೆ ಇವರ ಶ್ರಮಕ್ಕೆ ಸತತ 4 ವರ್ಗಳ ಬಳಿಕ ಫಲ ಸಿಕ್ಕಿತ್ತು. 2006 ರಲ್ಲಿ ಗ್ಲೆಡ್ ರೆಕ್ಸ್ ಮಿಸ್ಟರ್ ಇಂಡಿಯಾ ಆಗಿ ಅರ್ಪಿತ್ ಆಯ್ಕೆಯಾದ್ರು. ಇನ್ನೂ ಒಂದು ವಿಶೇಷ ಎಂದ್ರೆ ಅರ್ಪಿತ್ ಗೆ ಇನ್ಸ್ಪಿರೇಶನ್ ಆಗಿದ್ದ ನಟ ಅರ್ಜುನ್ ರಾಂಪಾಲ್ ಹಾಗೂ ನಟ ಜಾನ್ ಅಬ್ರಹಂ ಅವರೇ ಈ ಶೋಗೆ ಜಡ್ಜ್ ಆಗಿದ್ರು. ಇದರ ಹೊರತಾಗಿ ಅರ್ಪಿತ್ ಅವರಿಗೆ ಫಿಟ್ ನೆಸ್ ಲೀಗ್ ಎಂಬ ಟೈಟಲ್ ಸಿಕ್ಕಿತ್ತು.

ಆಕ್ಟಿಂಗ್

ಅರ್ಪಿತ್ ಅನೇಕ ತೆಲುಗು, ತಮಿಳು,  ಬೆಂಗಾಳಿ ಸಿನೆಮಾಗಳಲ್ಲಿ ಹೆಚ್ಚಾಗಿ ನೆಗೆಟಿವ್ ರೋಲ್ ಗಳಲ್ಲೇ ನಟಿಸಿದ್ದಾರೆ. ತಮಿಳಿನ ಪೈಯ್ಯಾ ಸಿನೆಮಾದಲ್ಲಿ ಮೊದಲ ಬಾರಿಗೆ ಬಣ್ಣದ ಜಗತ್ತಿಗೆ ಪಾದಾರ್ಪಣೆ ಮಾಡಿದ ಅರ್ಪಿತ್ ಬಳಿಕ ತಮಿಳಿನ ಅಯ್ಯನಾರ್ , ಬೂಲಗಮ್ , ಬೆಂಗಾಳಿಯ ಜಾನೇಮನ್ , ತೆಲುಗಿನ ರುದ್ರಮದೇವಿ, ರೇ ನಂತಹ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸ್ಟಾರ್ ಪಟ್ಟ

ಹಲವಾರು ಸಿನೆಮಾಗಳಲ್ಲಿ ನಟಿಸಿದ್ರೂ  ಅರ್ಪಿತ್ ಗೆ ಅಷ್ಟರ ಮಟ್ಟಿಗೆ ಹೈಪ್ ಸಿಕ್ಕಿರಲಿಲ್ಲ. ಆದ್ರೆ 2013ರಲ್ಲಿ ತೆರೆಕಂಡ ಮಹಾಬಾರತದಲ್ಲಿ ಇವರ ಕೌವರ ಪಾತ್ರ ಸಿಕ್ಕಾಪಟ್ಟೆ ಜನಮನ್ನಣೆ ಗಳಿಸಿತ್ತು. ಕೌರವಾಧಿಪತಿಯ ರಣರೋಚಕ ನಟನಾ ಕೌಸಲ್ಯಕ್ಕೆ ಜನ ಫಿದಾ ಆಗಿದ್ರು. ಮಹಾಭಾರತ ಅರ್ಪಿತ್ ಅವರ ಕಿರುತೆರೆಯ ಪ್ರಥಮ ಧಾರಾವಾಹಿ ಕೂಡ ಆಗಿತ್ತು. ಕೌರವನಾಗಿ ಗುರುತಿಸಿಕೊಂಡ ಅರ್ಪಿತ್ ಬಳಿಕ   ಚಂದ್ರನಂದಿನಿ ಮಹಾಬಲಿ ಹನುಮಾನ್, ಕೌನ್ ಹೇ ಪಾರ್ಟ್ 2 ಹೀಗೆ ಹಲವಾರು ದಾರವಾಹಿಗಳಲ್ಲಿ ನೆಗೆಟಿವ್ ಶೇಡ್ ಗಳಲ್ಲೇ ಹೆಚ್ಚಾಗಿ ಕಾಣಿಸಿಕೊಮಡ್ರು. ಆದ್ರೆ ಮಹಾಬಾರತದಷ್ಟು ದೊಡ್ಡ ಮಟ್ಟಿಗೆ ಫೇಮ್ ಸಿಕ್ಕಿರಲಿಲ್ಲ. ಆದ್ರೆ ಪ್ರಸ್ತುತ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ರಾಧಾ ಕೃಷ್ಣದಲ್ಲಿ ಕಂಸನ ಪಾತ್ರದಲ್ಲಿ ಅರ್ಪಿತ್ ಜನರನ್ನ ರಂಜಿಸುತ್ತಿದ್ದಾರೆ. ಇವರ ಕಂಸಮಾಮನ ಪಾತ್ರವೂ ಸಹ ಅತ್ಯಂತ ಜನಪ್ರಿಯವಾಗಿದೆ. ಒಂದು ಲೆಕ್ಕದಲ್ಲಿ ಕಂಸನೇ ಇರಲಿ, ಕೌರವನೇ ಇರಲಿ ಅರ್ಪಿತ್ ಅವರನ್ನ ಬಿಟ್ರೆ ಬೇರೇ ಯಾರನ್ನೂ ನೆನಪು ಮಾಡಿಕೊಳ್ಲೋದಕ್ಕೆ ಸಾಧ್ಯವಿಲ್ಲ ಅನ್ನುವಷ್ಟರ ಮಟ್ಟಿಗೆ ಅರ್ಪಿತ್ ಈ ಪಾತ್ರಗಳನ್ನ ಮೈಗೂಡಿಸಿಕೊಂಡಿದ್ದಾರೆ.  

Related posts

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (04-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

March 4, 2026
2028ರ ಮೈತ್ರಿ ಚರ್ಚೆ: ಬಿಜೆಪಿ ಜಿಲ್ಲಾ ಘಟಕದಲ್ಲಿ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ

2028ರ ಮೈತ್ರಿ ಚರ್ಚೆ: ಬಿಜೆಪಿ ಜಿಲ್ಲಾ ಘಟಕದಲ್ಲಿ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ

March 3, 2026

ಇದರ ಹೊರತಾಗಿ ನಚ್ ಬಲಿಯೇ 7 ಡ್ಯಾನ್ಸ್ ಶೋನಲ್ಲಿ ಪತ್ನಿ ನಿಧಿ ಅವರೊಂದಿಗೆ ಸ್ಪರ್ಧೆ ಸಹ ಮಾಡಿದ್ದರು. ಅರ್ಪಿತ್ ಮಹಾಭಾರತಕ್ಕಾಗಿ 10 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ. ಹೌದು ಆಗಿನ ಕಾಲದಲ್ಲಿ 6 ಪ್ಯಾಕ್ಸ್ ಗಳೆಲ್ಲ ಇರಲಿಲ್ಲ. ಹೀಗಾಗಿ ಕೌರವನ ಪಾತ್ರಕ್ಕಾಗಿ ಅರ್ಪಿತ್ 6 ಪ್ಯಾಕ್ ಕರಗಿಸಿಕೊಂಡಿದ್ರು ಎನ್ನಲಾಗಿದೆ.

ದ್ರೌಪದಿಗೆ ತುಂಬಿದ ಸಭೆಯಲ್ಲಿ ಅವಮಾನಿಸಿ ಅಹಂಕಾರಕ್ಕೆ ಪ್ರತೀಪ ಎಂದೆಸಿಕೊಂಡ ಕೌರವನ ಪಾತ್ರ ಅರ್ಪಿತ್ ಗೆ ಹೇಳಿ ಮಾಡಿಸಿದ್ದು. ಆದ್ರೆ ರೀಲ್ ಲೈಫ್ ನಲ್ಲಿ ಎಷ್ಟೇ ನೆಗೆಟಿವ್ ಶೇಡ್ ಗಳಲ್ಲಿ ಕಾಣಿಸಿಕೊಂಡು ವಿಲ್ ಎನಿಸಿಕೊಂಡ್ರು, ರಿಯಲ್ ಲೈಫನಲ್ಲಿ ಒಳ್ಳೆಯ ಹಾಗೂ ಸೌಮ್ಯ ಸ್ವಭಾವ ಹೊಂದಿರುವ ಅರ್ಪಿತ್ ನಿಜಕ್ಕೂ ಸುಯೋಧನನೇ.

Tags: actorduryodhanamahabharatha
ShareTweetSendShare
Join us on:

Related Posts

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (04-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 4, 2026
0

ದಿನ ಭವಿಷ್ಯ: 04-03-2026 ಮೇಷ ರಾಶಿ ಇಂದು ನಿಮಗೆ ಮಿಶ್ರ ಫಲಿತಾಂಶಗಳು ದೊರೆಯಲಿವೆ. ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಿರಬಹುದು ಆದರೆ ನಿಮ್ಮ ಪರಿಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದೆ....

2028ರ ಮೈತ್ರಿ ಚರ್ಚೆ: ಬಿಜೆಪಿ ಜಿಲ್ಲಾ ಘಟಕದಲ್ಲಿ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ

2028ರ ಮೈತ್ರಿ ಚರ್ಚೆ: ಬಿಜೆಪಿ ಜಿಲ್ಲಾ ಘಟಕದಲ್ಲಿ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ

by Shwetha
March 3, 2026
0

2028ರ ವಿಧಾನಸಭಾ ಚುನಾವಣೆಗೆ ಜೆಡಿಎಸ್–ಬಿಜೆಪಿ ಮೈತ್ರಿ ವಿಚಾರವಾಗಿ ರಾಜಕೀಯ ಸಂದೇಶಗಳು ಹೊರಬರುತ್ತಿರುವ ಹಿನ್ನೆಲೆ, ಬಿಜೆಪಿಯ ಜಿಲ್ಲಾ ಘಟಕದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಟಿಕೆಟ್ ಆಕಾಂಕ್ಷಿಗಳಲ್ಲಿ ಗೊಂದಲ ಹೆಚ್ಚಾಗಿದೆ...

ಅಪ್ಪನ ಹಾದಿ ಹಿಡಿದ್ರಾ ವಿಜಯೇಂದ್ರ? ಸಮುದಾಯ ಬೆಂಬಲಕ್ಕೆ ಬಿವೈವಿ ಮನವಿ

ಅಪ್ಪನ ಹಾದಿ ಹಿಡಿದ್ರಾ ವಿಜಯೇಂದ್ರ? ಸಮುದಾಯ ಬೆಂಬಲಕ್ಕೆ ಬಿವೈವಿ ಮನವಿ

by Shwetha
March 3, 2026
0

ರಾಜ್ಯ ರಾಜಕೀಯದಲ್ಲಿ ಬದಲಾದ ಸಮೀಕರಣಗಳ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ತಮ್ಮ ರಾಜಕೀಯ ಬಲವನ್ನು ಸಂಘಟಿಸಲು ಮುಂದಾಗಿರುವಂತೆ ಕಾಣುತ್ತಿದೆ. ತಮ್ಮ ತಂದೆ ಮತ್ತು ಹಿರಿಯ...

ಯುದ್ಧ ಭೀತಿ ನಡುವೆ ಭಾರತೀಯ ಷೇರು ಮಾರುಕಟ್ಟೆ ತಲ್ಲಣ: ಸೆನ್ಸೆಕ್ಸ್ 1700 ಪಾಯಿಂಟ್ ಕುಸಿತ

ಯುದ್ಧ ಭೀತಿ ನಡುವೆ ಭಾರತೀಯ ಷೇರು ಮಾರುಕಟ್ಟೆ ತಲ್ಲಣ: ಸೆನ್ಸೆಕ್ಸ್ 1700 ಪಾಯಿಂಟ್ ಕುಸಿತ

by Shwetha
March 3, 2026
0

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್–ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆ ಭಾರೀ ತಲ್ಲಣಕ್ಕೊಳಗಾಗಿದೆ. ಯುದ್ಧ ಭೀತಿ ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದ್ದು, ಮಾರುಕಟ್ಟೆಯಲ್ಲಿ ಮಾರಾಟದ...

ನೀರು ಬೇಕಿದ್ದರೆ 12 ಕೋಟಿ ಕಟ್ಟಿ: ಪ್ರತಿಷ್ಠಿತ ಜೈನ್ ಶಾಲೆಗೆ ಹೈಕೋರ್ಟ್ ಖಡಕ್ ಆದೇಶ

ನೀರು ಬೇಕಿದ್ದರೆ 12 ಕೋಟಿ ಕಟ್ಟಿ: ಪ್ರತಿಷ್ಠಿತ ಜೈನ್ ಶಾಲೆಗೆ ಹೈಕೋರ್ಟ್ ಖಡಕ್ ಆದೇಶ

by Shwetha
March 3, 2026
0

ಬೆಂಗಳೂರು: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಜೈನ್ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆಗೆ ಕರ್ನಾಟಕ ಹೈಕೋರ್ಟ್ ಭಾರಿ ಆಘಾತ ನೀಡಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram