ತಮಿಳುನಾಡು ಪ್ರಯಾಣಕ್ಕೆ ಇ-ಪಾಸ್ ಗಾಗಿ ಅರ್ಜಿ ಸಲ್ಲಿಸುವ ವಿಧಾನ
ಚೆನ್ನೈ, ಅಗಸ್ಟ್18: ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅಂತರ ಜಿಲ್ಲೆ ಮತ್ತು ಅಂತರರಾಜ್ಯ ಪ್ರಯಾಣಕ್ಕೆ ಇ-ಪಾಸ್ ಲಭ್ಯವಾಗಲಿದೆ ಎಂದು ಘೋಷಿಸಿದ್ದಾರೆ. ಈ ಮೊದಲು ವೈದ್ಯಕೀಯ ತುರ್ತುಸ್ಥಿತಿ, ಮದುವೆ ಮತ್ತು ಸಾವುಗಳಿಗೆ ಮಾತ್ರ ಇ-ಪಾಸ್ ನೀಡಲಾಗುತ್ತಿತ್ತು.

ಅನಿವಾರ್ಯವಾದ ಪ್ರಯಾಣಕ್ಕಾಗಿ ಮಾತ್ರ ಇ- ಪಾಸ್ ಗಾಗಿ ಅರ್ಜಿ ಸಲ್ಲಿಸಲು ನಾನು ಜನರಿಗೆ ಮನವಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಜೊತೆಗೆ ವೈರಸ್ ಹರಡುವುದನ್ನು ತಡೆಯಲು ಕೋವಿಡ್-19 ಮಾನದಂಡಗಳನ್ನು ಅನುಸರಿಸುವ ಮೂಲಕ ಸರ್ಕಾರದೊಂದಿಗೆ ಸಹಕರಿಸಬೇಕೆಂದು ಸಾರ್ವಜನಿಕರನ್ನು ಅವರು ಒತ್ತಾಯಿಸಿದ್ದಾರೆ
ಇ- ಪಾಸ್ ಗಾಗಿ ಹೇಗೆ ಅರ್ಜಿ ಸಲ್ಲಿಸಬೇಕು:
ಹಂತ 1: ಇ-ಪಾಸ್ ಅರ್ಜಿ ಸಲ್ಲಿಸಲು ತಮಿಳುನಾಡು ಸರ್ಕಾರದ ಅಧಿಕೃತ ವೆಬ್‌ಸೈಟ್ https://tnepass.tnega.org ಗೆ ಭೇಟಿ ನೀಡಿ.
ಹಂತ 2: ಒಟಿಪಿ ಸ್ವೀಕರಿಸಲು ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾವನ್ನು ನಮೂದಿಸಿ.
ಹಂತ 3: ನೀವು ಸ್ವೀಕರಿಸಿದ ಒಟಿಪಿಯನ್ನು ನಮೂದಿಸಿ
ಹಂತ 4: ರಸ್ತೆ (ಖಾಸಗಿ ವಾಹನಗಳು) ಮೂಲಕ ಪ್ರಯಾಣಕ್ಕಾಗಿ ಇ-ಪಾಸ್, ವ್ಯಾಪಾರಕ್ಕಾಗಿ ಪ್ರವಾಸ, ಇತರ ರಾಜ್ಯಗಳ ಅತಿಥಿ ಕೆಲಸಗಾರರು ಮುಂತಾದ ವಿವಿಧ ಆಯ್ಕೆಗಳಿರುವ ಪುಟವನ್ನು ನೀವು ಕಾಣುತ್ತೀರಿ
ಹಂತ 5: ನಿಮಗೆ ಬೇಕಾದ ಪಾಸ್ ಪ್ರಕಾರವನ್ನು ಆಯ್ಕೆ ಮಾಡಿ
ಹಂತ 6: ಹೆಸರು, ವಿಳಾಸ, ಪ್ರಯಾಣದ ವ್ಯಾಪ್ತಿ (ಅಂತರ ಜಿಲ್ಲೆ / ಅಂತರ ರಾಜ್ಯ), ಪ್ರಯಾಣದ ಅವಧಿ ಮುಂತಾದ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
ಹಂತ 5: ಪ್ರಯಾಣಕ್ಕೆ ಅಗತ್ಯವಾದ ದಾಖಲೆಗಳನ್ನು ಒದಗಿಸಿ. ವೈದ್ಯಕೀಯ ತುರ್ತು ಸಂದರ್ಭದಲ್ಲಿ, ವೈದ್ಯಕೀಯ ದಾಖಲೆ ಅಥವಾ ಮದುವೆಗೆ ಸಂಬಂಧಿಸಿದ್ದರೆ ಆಮಂತ್ರಣ ಪತ್ರದ ಅಗತ್ಯವಿದೆ.

ಹಂತ 6: ವಿವರಗಳನ್ನು ನೀಡಿದ ನಂತರ ಪರಿಶೀಲನೆ ಪೂರ್ಣಗೊಳ್ಳುತ್ತದೆ.
ಹಂತ 7: ದಾಖಲೆಗಳು ಮತ್ತು ಐಡಿ ಪ್ರೂಫ್ ಎರಡನ್ನೂ ಸಲ್ಲಿಸಿದ ನಂತರ ಇ-ಪಾಸ್ ಅನ್ನು ಪ್ರಕ್ರಿಯೆಗೊಳಿಸಲಾಗುತ್ತದೆ
ಇ-ಪಾಸ್ ಪಡೆಯಲು ಪ್ರಯಾಣಿಕರು ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ವಿಳಾಸ ಪುರಾವೆ, ವಾಹನ ಪರವಾನಗಿ ಮತ್ತು ಉದ್ಯೋಗ ಐಡಿ ಸಲ್ಲಿಸುವಂತೆ ಕೇಳಲಾಗುತ್ತದೆ.
ಟಿಎನ್ ಇ-ಪಾಸ್ ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು
ಅಧಿಕೃತ ಪುಟ tnepass.tnega.org ಗೆ ಭೇಟಿ ನೀಡಿ
ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಕಳುಹಿಸು ಒಟಿಪಿ ಕ್ಲಿಕ್ ಮಾಡಿ
ಸಲ್ಲಿಸಿದ ಅರ್ಜಿಗಳ ಪಟ್ಟಿಯನ್ನು ನೀವು ನೋಡುತ್ತೀರಿ
ಅಪ್ಲಿಕೇಶನ್ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ ಅಥವಾ ಕರ್ಫ್ಯೂ ಪಾಸ್ ಅನ್ನು ಡೌನ್‌ಲೋಡ್ ಮಾಡಿ

ಟಿಎನ್ ಇ-ಪಾಸ್ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು?
ಆಧಾರ್ ಕಾರ್ಡ್ / ಮತದಾರರ ಗುರುತಿನ ಚೀಟಿ
ಪ್ಯಾನ್ ಕಾರ್ಡ್
ಅರ್ಜಿದಾರರ ವಿಳಾಸ ಪುರಾವೆ
ವಾಹನ ಪರವಾನಗಿ
ಉದ್ಯೋಗ ಐಡಿ
ಅಂತರ ಜಿಲ್ಲೆ ಮತ್ತು ಅಂತರರಾಜ್ಯ ಪ್ರಯಾಣಕ್ಕೆ ಇ-ಪಾಸ್ ಅಗತ್ಯವಿರುವ ಏಕೈಕ ರಾಜ್ಯ ತಮಿಳುನಾಡು ಆಗಿದೆ.








