ಪೇಟಿಎಂ ನ ಎಟಿಎಂ ಗೆ ಅರ್ಜಿ ಸಲ್ಲಿಸಬೇಕೆ – ಇಲ್ಲಿದೆ ಮಾಹಿತಿ
ಮಂಗಳೂರು, ಸೆಪ್ಟೆಂಬರ್25: ಇಂದಿನ ದಿನಗಳಲ್ಲಿ, ಅನೇಕರು ಪೇಟಿಎಂನ ಎಟಿಎಂ ಅನ್ನು ಬಳಸುತ್ತಾರೆ. ಆದರೆ ಕೆಲವು ಜನರಿಗೆ ಇದರ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲ. ನೀವು ಪೇಟಿಎಂ (Paytm) ನ ಎಟಿಎಂ(ATM) ಬಳಸಲು ಬಯಸಿದರೆ ಅದಕ್ಕೆ
ಅರ್ಜಿ ಸಲ್ಲಿಸುವುದು ಹೇಗೆ ಎಂಬ ಬಗ್ಗೆ ಇಲ್ಲಿ ನಾವು ವಿವರಿಸಿದ್ದೇವೆ.
ಅಂಚೆ ಕಚೇರಿಯ ಉಳಿತಾಯ ಯೋಜನೆಗಳು – ಹೊಸ ನಿಯಮಗಳ ಮಾಹಿತಿ ಇಲ್ಲಿದೆ
1. Paytm ATM ಗಾಗಿ ನೀವು ಮೊದಲು Paytm ಅಪ್ಲಿಕೇಶನ್ ಅನ್ನು ಕ್ಲಿಕ್ ಮಾಡಿ.
2. ಅದರ ನಂತರ ನೀವು ಪರದೆಯ ಕೆಳಗಿನ ಬಲಭಾಗದಲ್ಲಿ ಬ್ಯಾಂಕ್ ಐಕಾನ್ ಅನ್ನು ಕಾಣುತ್ತೀರಿ. ಈಗ ಅದರ ಮೇಲೆ ಕ್ಲಿಕ್ ಮಾಡಿ.
3. ಅದರ ನಂತರ ನೀವು ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಡಿಜಿಟಲ್ ಡೆಬಿಟ್ ಕಾರ್ಡ್ ಆಯ್ಕೆಯನ್ನು ಆರಿಸಿ.
4. ಇಲ್ಲಿ, ನೀವು ರಿಕ್ವೆಸ್ಟ್ ಎಟಿಎಂ ಕಾರ್ಡ್ ಆಯ್ಕೆಯನ್ನು ಕಾಣುತ್ತೀರಿ.ಅದನ್ನು ಈಗ ಕ್ಲಿಕ್ ಮಾಡಿ.
5. ಇದರ ನಂತರ ನೀವು ನಿಮ್ಮ ವಿತರಣಾ ವಿಳಾಸವನ್ನು ನಮೂದಿಸಿ ಮತ್ತು ಪ್ರೊಸೀಡ್ ಟು ಪೇ ಕ್ಲಿಕ್ ಮಾಡಿ.
ಆರೋಗ್ಯಕರ ಜೀವನಕ್ಕಾಗಿ ದೈನಂದಿನ ಆಹಾರದಲ್ಲಿ ಇರಬೇಕಾದ 10 ತರಕಾರಿಗಳು
6. ಹಾಗೆ ಮಾಡಿದ ನಂತರ, ಪಾವತಿ ಯಶಸ್ವಿಯಾಗುತ್ತದೆ.
7. ನಿಮ್ಮ ಪೇಟಿಎಂ ಅಪ್ಲಿಕೇಶನ್ ಮೂಲಕ ನಿಮ್ಮ ಎಟಿಎಂ ಕಾರ್ಡ್‌ನ ಡೆಲಿವರಿ ಸ್ಟೇಟಸ್ಸ್ ಅನ್ನು ನೀವು ಪರಿಶೀಲಿಸಬಹುದು.
8. ನೀವು ಈ Paytm ಅಪ್ಲಿಕೇಶನ್ ಅನ್ನು ಯಾವುದೇ ಬ್ಯಾಂಕಿನ ಎಟಿಎಂನಲ್ಲಿ ಬಳಸಬಹುದು. ಇದನ್ನು ಸಾಮಾನ್ಯ ಬ್ಯಾಂಕ್ ಎಟಿಎಂನಂತೆ ಬಳಸಲಾಗುತ್ತದೆ.








