ಆಧಾರ್ ಕಾರ್ಡ್ ನ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಆನ್‌ಲೈನ್ ನಲ್ಲಿ ಬದಲಾಯಿಸಲು ಇಲ್ಲಿದೆ ಮಾಹಿತಿ – Aadhaar change address
ಮಂಗಳೂರು, ಅಕ್ಟೋಬರ್18: ಇಂದಿನ ಕಾಲದಲ್ಲಿ, ಆಧಾರ್ ಕಾರ್ಡ್ ನ ಅಗತ್ಯ ಬಹಳ. Aadhaar change address
ಆದರೆ ಆಧಾರ್ ಕಾರ್ಡ್‌ನಲ್ಲಿ ಸರಿಯಾದ ವಿಳಾಸ ಅಥವಾ ಮೊಬೈಲ್ ಸಂಖ್ಯೆಯನ್ನು ನೀಡದಿದ್ದರೆ ಅನೇಕ ಬಾರಿ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂದು, ನಾವು ಆಧಾರ್ ಕಾರ್ಡ್ ನ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಬದಲಾಯಿಸುವ ಪ್ರಕ್ರಿಯೆಯ ಬಗ್ಗೆ ತಿಳಿಸಲು ಪ್ರಯತ್ನಿಸುತ್ತೇವೆ.
1. ಆಧಾರ್ ಕಾರ್ಡ್‌ನಲ್ಲಿ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು, ನೀವು ವೆಬ್‌ಸೈಟ್ ಲಿಂಕ್ https://ssup.uidai.gov.in/aadhaar-home/ ಗೆ ಭೇಟಿ ನೀಡಬೇಕು.
2. ಇದರ ನಂತರ ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ.
3. ಇದರ ನಂತರ ಕೆಳಗಿನ ಪೆಟ್ಟಿಗೆಯಲ್ಲಿ ಪರಿಶೀಲನಾ ಕೋಡ್ ಅನ್ನು ನಮೂದಿಸಿ ಮತ್ತು ‘ಒಟಿಪಿ ಕಳುಹಿಸಿ’ ಕ್ಲಿಕ್ ಮಾಡಿ .
ಮೊಬೈಲ್ ಕದ್ದು ಹೋದರೆ ಮರಳಿ ಪಡೆಯುವುದು ಹೇಗೆ – ಇಲ್ಲಿದೆ ಮಾಹಿತಿ
4. ಈ ಒಟಿಪಿ ನಿಮ್ಮ ಮೊಬೈಲ್ ಸಂಖ್ಯೆಗೆ ಬರುತ್ತದೆ. ಅದನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿ.
5. ನಿಮ್ಮ ವಿಳಾಸವನ್ನು ಆಧಾರ್‌ನಲ್ಲಿ ಬದಲಾಯಿಸಲು ನೀವು ಬಯಸಿದರೆ, ವಿಳಾಸ ಆಯ್ಕೆಯನ್ನು ಕ್ಲಿಕ್ ಮಾಡಿ.
ಅಥವಾ,
ನೀವು ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ಬಯಸಿದರೆ, ಮೊಬೈಲ್ ಸಂಖ್ಯೆ ಆಯ್ಕೆಯನ್ನು ಕ್ಲಿಕ್ ಮಾಡಿ.
6. ಈಗ ನೀವು ನಿಮ್ಮ ವಸತಿ ವಿಳಾಸವನ್ನು ನಮೂದಿಸಿ. ಆದರೆ ನೀವು ವಿಳಾಸದ ಪುರಾವೆ ಹೊಂದಿರಬೇಕು ಎಂಬುವುದು ನೆನಪಿರಲಿ. ಆಗ ಮಾತ್ರ ನಿಮ್ಮ ವಿಳಾಸವನ್ನು ಬದಲಾಯಿಸಲು ಸಾಧ್ಯ.
ಮೊಬೈಲ್ ಪ್ಯಾಟರ್ನ್ ಅನ್ನು ಮರೆತು ಹೋಗಿದ್ದರೆ, ಈ ರೀತಿ ಮಾಡಿ
7. ವಿಳಾಸ ಪ್ರಮಾಣಪತ್ರದ ಸ್ಕ್ಯಾನ್ ನಕಲನ್ನು ಅಪ್‌ಲೋಡ್ ಮಾಡಿ ಮತ್ತು ಸಲ್ಲಿಸಿ. ಸ್ವಲ್ಪ ಸಮಯದ ನಂತರ, ನಿಮ್ಮ ವಿಳಾಸವನ್ನು ನವೀಕರಿಸಲಾಗುತ್ತದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ