ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ಚಾಲನಾ ಪರವಾನಗಿ (ಡಿಎಲ್) ನವೀಕರಿಸಿ – ಇಲ್ಲಿದೆ ಮಾಹಿತಿ
ಹೊಸದಿಲ್ಲಿ, ಜನವರಿ19: ನೀವು ವಾಹನವನ್ನು ಚಲಾಯಿಸುತ್ತೀರಿ ಎಂದಾದರೆ ನಿಮಗೆ ಚಾಲನಾ ಪರವಾನಗಿ ಎಷ್ಟು ಮುಖ್ಯ ಎಂಬುದನ್ನು ವಿವರಿಸುವ ಅಗತ್ಯವಿಲ್ಲ. ವಾಹನ ಚಾಲಕರು ತಮ್ಮೊಂದಿಗೆ ಕೊಂಡೊಯ್ಯಬೇಕಾದ ಪ್ರಮುಖ ದಾಖಲೆ ಇದು, ಇಲ್ಲದಿದ್ದರೆ ಭಾರಿ ದಂಡವನ್ನು ತೆರಬೇಕಾಗಬಹುದು .
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665

ಭಾರತದಲ್ಲಿ ನೀಡಲಾಗುವ ಚಾಲನಾ ಪರವಾನಗಿ (ಡಿಎಲ್) 20 ವರ್ಷಗಳವರೆಗೆ ಅಥವಾ ವಾಹನ ಚಾಲಕರು 50 ವರ್ಷ ತಲುಪುವವರೆಗೆ ಮಾನ್ಯವಾಗಿರುತ್ತದೆ. ಪ್ರತಿ ಕೆಲವು ವರ್ಷಗಳ ನಂತರ ಡಿಎಲ್ ಅನ್ನು ನವೀಕರಿಸಬೇಕಾಗುತ್ತದೆ. ಮುಕ್ತಾಯದ ನಂತರ, ಚಾಲನಾ ಪರವಾನಗಿ 30 ದಿನಗಳವರೆಗೆ ಮಾನ್ಯವಾಗಿರುತ್ತದೆ. ನಂತರ ಡಿಎಲ್ ಅನ್ನು ನವೀಕರಿಸುವಾಗ ದಂಡ ವಿಧಿಸಲಾಗುತ್ತದೆ.
ಒಂದು ವೇಳೆ ನೀವು ಡಿಎಲ್ ಅವಧಿ ಮುಗಿದ ಐದು ವರ್ಷಗಳ ನಂತರ ನವೀಕರಣಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದರೆ, ನಂತರ ನೀವು ಡಿಎಲ್ ಪಡೆಯಲು ಚಾಲನಾ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಈ ಮೊದಲು, ಪರವಾನಗಿಯನ್ನು ನವೀಕರಿಸಲು ನಿಮ್ಮ ಪ್ರದೇಶದ ಆರ್‌ಟಿಒ (ಪ್ರಾದೇಶಿಕ ಸಾರಿಗೆ ಕಚೇರಿ) ಗೆ ಭೇಟಿ ನೀಡಿ, ಅರ್ಜಿ ನಮೂನೆಯನ್ನು ಪಡೆದುಕೊಳ್ಳುವುದು, ವಯಸ್ಸಿನ ಪುರಾವೆ, ವಿಳಾಸ ಪುರಾವೆ, ಅಸ್ತಿತ್ವದಲ್ಲಿರುವ ಪರವಾನಗಿ ಮುಂತಾದ ಅಗತ್ಯ ಪೋಷಕ ದಾಖಲೆಗಳೊಂದಿಗೆ ಅದನ್ನು ಸಲ್ಲಿಸಬೇಕಿತ್ತು. ಆದರೆ ಭಾರತದಲ್ಲಿ ಕೋವಿಡ್-19 ಸೋಂಕಿನ ನಂತರ ಈ ನಿಯಮಗಳು ಬದಲಾಗಿದೆ. ಕೆಲವು ಸರಳ ಹಂತಗಳನ್ನು ಅನುಸರಿಸುವ ಮೂಲಕ ಡಿಎಲ್ ಅನ್ನು ನೀವು ಆನ್‌ಲೈನ್‌ನಲ್ಲಿ ನವೀಕರಿಸಬಹುದು. ಅದಕ್ಕಾಗಿ ನೀವು ಆನ್‌ಲೈನ್‌ನಲ್ಲಿ ಅಪ್ಲಿಕೇಶನ್ ಅನ್ನು ಭರ್ತಿ ಮಾಡಬೇಕು.
ಕಡಿಮೆ ವಾರ್ಷಿಕ ಬಡ್ಡಿ ದರಕ್ಕೆ ಗೃಹ ಸಾಲ ನೀಡುವ 15 ಬ್ಯಾಂಕ್ ಗಳು
ಸಾರಿಗೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡಿ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಚಾಲಿತ ವೆಬ್‌ಸೈಟ್ – https://sarathi.parivahan.gov.in/ ಗೆ ಲಾಗ್ ಇನ್ ಮಾಡಿ ಮತ್ತು ನಂತರ ‘ಚಾಲನಾ ಪರವಾನಗಿ’ ಆಯ್ಕೆಯನ್ನು ಕ್ಲಿಕ್ ಮಾಡಿ. ಆಗ ಕಾಣಿಸುವ ಡ್ರಾಪ್-ಡೌನ್ ಪಟ್ಟಿಯಿಂದ ನೀವು ‘ಡಿಎಲ್‌ನಲ್ಲಿನ ಸೇವೆಗಳು’ ಕ್ಲಿಕ್ ಮಾಡಬೇಕಾಗುತ್ತದೆ.
ಸೂಚನೆಗಳು ಮತ್ತು ಅಪ್ಲಿಕೇಶನ್‌ನ ಹಂತಗಳನ್ನು ಪರಿಶೀಲಿಸಿ
ಅಪ್ಲಿಕೇಶನ್ ಭರ್ತಿ ಪ್ರಕ್ರಿಯೆಯ ವಿವಿಧ ಹಂತಗಳನ್ನು ಮತ್ತು ನೀವು ಪಡೆಯಬಹುದಾದ ಸೇವೆಗಳನ್ನು ಪ್ರದರ್ಶಿಸುವ ಪುಟಕ್ಕೆ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ. ಈಗ ‘ಮುಂದುವರಿಸು’ ಕ್ಲಿಕ್ ಮಾಡಿ.
ಡಿಎಲ್ ವಿವರಗಳನ್ನು ನಮೂದಿಸಿ
ನಿಮ್ಮ ಚಾಲನಾ ಪರವಾನಗಿ ಸಂಖ್ಯೆ, ಹುಟ್ಟಿದ ದಿನಾಂಕವನ್ನು ನಮೂದಿಸಬೇಕಾಗುತ್ತದೆ. ಇದರ ನಂತರ, ಚಾಲನಾ ಪರವಾನಗಿ ನೀಡಿದ ರಾಜ್ಯ ಮತ್ತು ಆರ್‌ಟಿಒ ಆಯ್ಕೆಮಾಡಿ.
ಅಗತ್ಯವಿರುವ ಸೇವೆಯನ್ನು ಆರಿಸಿ
ನಿಮ್ಮ ಚಾಲನಾ ಪರವಾನಗಿಗೆ ಸಂಬಂಧಿಸಿದ ಸೇವೆಗಳನ್ನು ಪ್ರದರ್ಶಿಸುವ ಪುಟ ತೆರೆದುಕೊಳ್ಳುತ್ತದೆ. ಈ ಪಟ್ಟಿಯಿಂದ, ನೀವು ‘ನವೀಕರಣ’ ಆಯ್ಕೆಯನ್ನು ಆರಿಸಬೇಕಾಗುತ್ತದೆ.
ಹೆಚ್ಚಿನ ವಿವರಗಳನ್ನು ನಮೂದಿಸಿ
ಒಮ್ಮೆ ನೀವು ‘ನವೀಕರಣ’ ಆಯ್ಕೆ ಮಾಡಿದರೆ, ಹೆಚ್ಚುವರಿ ವೈಯಕ್ತಿಕ ವಿವರಗಳು ಮತ್ತು ವಾಹನಕ್ಕೆ ಸಂಬಂಧಿಸಿದ ಮಾಹಿತಿಯನ್ನು ನಮೂದಿಸಿ.
ಛಾಯಾಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
ಕೆಲವು ರಾಜ್ಯಗಳ ಅರ್ಜಿದಾರರು ಛಾಯಾಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡುವ ಅಗತ್ಯವಿದೆ.

ಸಮಯ ಕಾಯ್ದಿರಿಸಿ
ನಿಮ್ಮ ವೈದ್ಯಕೀಯ ಪ್ರಮಾಣಪತ್ರದಲ್ಲಿ ಬದಲಾವಣೆಗಳಿದ್ದರೆ, ನೀವು ಆರ್‌ಟಿಒನಲ್ಲಿ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಈ ಮೂಲಕ ನೀವು ಸಮಯ ಕಾಯ್ದಿರಿಸಬಹುದಾಗಿದೆ
ಸ್ವೀಕೃತಿ
ನಿಮ್ಮ ಅಪ್ಲಿಕೇಶನ್ ಐಡಿಯನ್ನು ನೋಡಲು ನಿಮಗೆ ಸಾಧ್ಯವಾಗುವ ಸ್ವೀಕೃತಿ ಪುಟ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ಇದನ್ನು ಮುದ್ರಿಸಲು ಶಿಫಾರಸು ಮಾಡಲಾಗಿದೆ. ನಿಮ್ಮ ಅರ್ಜಿಯ ವಿವರಗಳನ್ನು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ SMS ಮೂಲಕ ಕಳುಹಿಸಲಾಗುತ್ತದೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ಪಾವತಿ
ಡಿಎಲ್ ಮುಕ್ತಾಯದ 30 ದಿನಗಳ ಮೊದಲು ಅಥವಾ ನವೀಕರಣಕ್ಕಾಗಿ ನೀವು ಅರ್ಜಿ ಸಲ್ಲಿಸುತ್ತಿದ್ದರೆ, ನೀವು 200 ರೂ ಪಾವತಿಸಬೇಕಾಗುತ್ತದೆ. ಇದಕ್ಕಾಗಿ ನಿಮ್ಮ ಡೆಬಿಟ್ / ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಅನ್ನು ಬಳಸಬಹುದಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
https://twitter.com/SaakshaTv/status/1350836625282981890?s=19
https://twitter.com/SaakshaTv/status/1351192252895408133?s=19








