ಟಿ20 ವಿಶ್ವಕಪ್ (T20 World Cup 2024) ಸೂಪರ್-8 ಸುತ್ತಿಗೆ ಎಲ್ಲ 8 ತಂಡಗಳು ಆಯ್ಕೆಯಾಗಿವೆ. ಭಾರತ ತಂಡ ಕೂಡ ಸೂಪರ್ 8ರಲ್ಲಿ ತನ್ನ ಅಭಿಯಾನ ಮುಂದುವರೆಸಲಿದೆ.
ಈ ಬಾರಿ ವಿಶ್ವಕಪ್ನಲ್ಲಿ 20 ತಂಡಗಳು ಭಾಗವಹಿಸಿವೆ. ಹಲವು ತಂಡಗಳು ಮೊದಲ ಬಾರಿಗೆ ವಿಶ್ವಕಪ್ ಆಡಿವೆ. ಈಗಾಗಲೇ 12 ತಂಡಗಳು ಮೊದಲ ಸುತ್ತಿನಲ್ಲಿಯೇ ತಮ್ಮ ಪಯಣ ಮುಗಿಸಿ ಹೊರ ನಡೆದಿವೆ. ಉಳಿದ 8 ತಂಡಗಳ ನಡುವೆ ಸೂಪರ್-8 ಪಂದ್ಯಗಳು ನಡೆಯಲಿವೆ. ಸೂಪರ್-8 ರ ಎಲ್ಲ ಪಂದ್ಯಗಳು ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿವೆ.
ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಅಮೆರಿಕ, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ, ಇಂಗ್ಲೆಂಡ್, ಬಾಂಗ್ಲಾದೇಶ ತಂಡಗಳು ಸೂಪರ್-8ರಲ್ಲಿ ಅರ್ಹತೆ ಪಡೆದಿವೆ. ಈ ಎಲ್ಲ ತಂಡಗಳನ್ನು ತಲಾ ನಾಲ್ಕರಂತೆ ಎರಡು ಗುಂಪುಗಳಾಗಿ ಮಾಡಲಾಗಿದೆ.
ಮೊದಲ ಗುಂಪಿನಲ್ಲಿ ಭಾರತ, ಆಸ್ಟ್ರೇಲಿಯಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಸ್ಥಾನ ಪಡೆದಿವೆ. ಎರಡನೇ ಗುಂಪಿನಲ್ಲಿ ಯುಎಸ್ಎ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಸ್ಥಾನ ಪಡೆದಿವೆ. ಭಾರತವು ಸೂಪರ್ 8ರಲ್ಲಿ ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಮೊದಲ ಪಂದ್ಯವನ್ನು ಜೂನ್ 20 ರಂದು ಅಫ್ಘಾನಿಸ್ತಾನ ವಿರುದ್ಧ, ಜೂನ್ 22 ರಂದು ಬಾಂಗ್ಲಾದೇಶ ವಿರುದ್ಧ, ಜೂನ್ 24 ರಂದು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಎಲ್ಲ ಪಂದ್ಯಗಳು ಭಾರತೀಯ ಕಾಲಮಾನದಂತೆ ರಾತ್ರಿ 8ಕ್ಕೆ ನಡೆಯಲಿವೆ. ಈಗಾಗಲೇ ಉತ್ತಮ ಪ್ರದರ್ಶನ ನೀಡಿರುವ ಭಾರತ ತಂಡ ಸೂಪರ್ 8ರಲ್ಲಿಯೂ ಉತ್ತಮ ಪ್ರದರ್ಶನ ನೀಡಿ, ಕಪ್ ಗೆಲ್ಲುವ ಬಯಕೆಯಲ್ಲಿದೆ.