ರಾಜ್ಯ ಸರ್ಕಾರದ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಭಾಜನರಾದ ಬಾಲ ಪ್ರತಿಭೆ ಆಶ್ರಯ ಪಿ Aashraya p
ಪುತ್ತೂರು, ಜನವರಿ27: ಜನವರಿ26 ರಂದು ಮಂಗಳೂರು ನೆಹರು ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪುತ್ತೂರಿನ ಬಾಲಪ್ರತಿಭೆ ಆಶ್ರಯ ಪಿ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ, ವಿಜ್ಞಾನ ಮಾದರಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸುತ್ತದೆ. Aashraya p
ಪುತ್ತೂರಿನ ತೆಂಕಿಲ ವಿವೇಕಾನಂದ ಅಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿರುವ ಆಶ್ರಯ ಪಿ ಚೇತನ ಸ್ಟುಡಿಯೊ ಮಾಲಕ ಆಶೋಕ್ ಕುಂಬ್ಳೆ ಮತ್ತು ಆಶ್ರಯ ಕೋಚಿಂಗ್ ಸೆಂಟರ್ ನ ಮುಖ್ಯಸ್ಥೆ ಶೋಭಾ ದಂಪತಿಗಳ ಸುಪುತ್ರಿ.
ವಿಜ್ಞಾನ, ಸಂಗೀತ, ನೃತ್ಯ, ಕರಾಟೆ, ವೇದಗಣಿತ, ನಾಟಕ, ಸ್ಕೇಟಿಂಗ್, ಅಬಾಕಸ್, ಈಜು ಜೊತೆಗೆ ಓದಿನಲ್ಲೂ ಮುಂದಿದ್ದು ಸಾಧನೆ ತೋರುತ್ತಿರುವ ಬಹುಮುಖ ಪ್ರತಿಭೆ ಆಶ್ರಯ ಇತರರಿಗೆ ಪ್ರೇರಣೆಯಾಗಿದ್ದಾರೆ.
ಆಶ್ರಯ ಪಿ, ರಾಷ್ಟ್ರಮಟ್ಟದ ಕರಾಟೆಯಲ್ಲಿ ಪ್ರಥಮ, ರಾಷ್ಟ್ರ ಮಟ್ಟದ ವೇದಗಣಿತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು, ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರು. ಭರತನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ 91% ಗಳಿಸಿರುವ ಇವರನ್ನು ಸಾಕ್ಷಾಟಿವಿ ಮಾತನಾಡಿಸಿದಾಗ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದು, ಸಂದರ್ಶನದ ಆಯ್ದಭಾಗ ಇಲ್ಲಿದೆ.
Aashraya p
ಸಾಕ್ಷಾ ಟಿವಿ : ರಾಜ್ಯ ಸರ್ಕಾರದ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಭಾಜನರಾಗಿದ್ದೀರಿ. ಸಾಕ್ಷಾಟಿವಿ ವತಿಯಿಂದ ಅಭಿನಂದನೆಗಳು. ಪ್ರಶಸ್ತಿ ಬಂದಿರುವುದು ಹೇಗೆ ಅನಿಸ್ತಾ ಇದೆ.
ಆಶ್ರಯ ಪಿ : ಧನ್ಯವಾದ..
ಪ್ರಶಸ್ತಿ ಬಂದಿರುವುದು ತುಂಬಾ ಖುಷಿಯಾಗುತ್ತಾ ಇದೆ.
ಸಾಕ್ಷಾ ಟಿವಿ : ನಿಮ್ಮ ಸಾಧನೆಗೆ ಪ್ರೇರಣೆ ಯಾರು ?
ಆಶ್ರಯ ಪಿ : ನನ್ನೆಲ್ಲಾ ಸಾಧನೆಗೆ ಪ್ರೇರಣೆ ನನ್ನ ಅಮ್ಮ. ಚಿಕ್ಕಂದಿನಿಂದಲೇ ನನಗೆ ನೃತ್ಯದಲ್ಲಿ ಆಸಕ್ತಿ ಇತ್ತು. ಹಾಗಾಗಿ ನಾಲ್ಕು ವರ್ಷದವಳಿರುವಾಗಲೇ ಅಮ್ಮ ಗುರು ಬಾಲಕೃಷ್ಣ ಮಂಜೇಶ್ವರ ಅವರ ಬಳಿ ಭರತನಾಟ್ಯಕ್ಕೆ ಸೇರಿಸಿದರು.
ನಾನು ಭರತ ನಾಟ್ಯ, ಕೂಚಿಪುಡಿ ಯನ್ನು ಗುರು ಬಾಲಕೃಷ್ಣ ಮಂಜೇಶ್ವರ ‘ನಾಟ್ಯ ನಿಲಯಂ’ ನಲ್ಲಿ ಕಲಿಯುತ್ತಿದ್ದೇನೆ.
ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ವಿದ್ಯಾ ಈಶ್ವರ ಚಂದ್ರ ‘ಉಮಾ ಮಹೇಶ್ವರ’ ದಲ್ಲಿ ಅಭ್ಯಾಸ ಮಾಡುತ್ತಿದ್ದೇನೆ.
ಈಜು – ಶ್ರೀ ಸೀತಾರಾಂ, ಸ್ಕೇಟಿಂಗ್ ಸೆನ್ವಾಯಿ ಟಿ.ಡಿ. ಥೋಮಸ್, ಶ್ರೀ ತಾರಾನಾಥ್, ಶ್ರೀ ಜಗದೀಶ್
ಅಬಾಕಸ್ – ಶ್ರೀಮತಿ ಮಮತಾ ಭಟ್ ಮತ್ತು ಶ್ರೀಮತಿ ವನಮಾಲಾ ಭಟ್
ವೇದಗಣಿತ – ಶ್ರೀಮತಿ ಮಮತಾ ಭಟ್ ಮತ್ತು ಶ್ರೀಮತಿ ಸ್ವಾತಿ ಅವರ ಬಳಿ ಕಲಿಯುತಿದ್ದೇನೆ
ಸಾಕ್ಷಾ ಟಿವಿ : ಹೆಚ್ಚಾಗಿ ಎಲ್ಲರೂ ಯಾವುದಾದರೂ ಒಂದು ಕ್ಷೇತ್ರದಲ್ಲಿ ಅಥವಾ ಎರಡರಲ್ಲಿ ಮುಂದಿರುತ್ತಾರೆ. ಆದರೆ ನೀವು ಸಂಗೀತ, ನೃತ್ಯ, ನಾಟಕ, ಕರಾಟೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಎಲ್ಲದರಲ್ಲೂ ಸಾಧನೆ ಮಾಡುತ್ತಿದ್ದೀರಿ. ಇದು ಹೇಗೆ ಸಾಧ್ಯವಾಯಿತು ?
ಆಶ್ರಯ ಪಿ : ನನ್ನೆಲ್ಲಾ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ನನ್ನ ತಂದೆ ತಾಯಿಯ ಪ್ರೋತ್ಸಾಹ ಮತ್ತು ನಮ್ಮ ಮಿಶ್ರ ಶ್ರಮ ಕಾರಣ. ಶಾಲೆಯ ಶಿಕ್ಷಕರು, ಮುಖ್ಯ ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು ಕೂಡ ತುಂಬಾ ಪ್ರೋತ್ಸಾಹ ನೀಡುತ್ತಾರೆ. ಅವರ ಹಾರೈಕೆ ಮತ್ತು ಎಲ್ಲರ ಪ್ರೋತ್ಸಾಹ ಇನ್ನಷ್ಟು ಸಾಧನೆಗೆ ಪ್ರೇರೇಪಿಸುತ್ತದೆ.
ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡಲು ಒಂದು ಕಾರಣ ಪ್ರೋತ್ಸಾಹವಾಗಿದ್ದರೆ, ಮತ್ತೊಂದು ಕಾರಣ ಪರಿಶ್ರಮ. ನೃತ್ಯ, ನಾಟಕ, ಸಂಗೀತ, ಕರಾಟೆ ಸೇರಿದಂತೆ ಯಾವುದೇ ಕ್ಷೇತ್ರವಿರಲಿ ನಾನು ಒಮ್ಮೆ ಹೆಜ್ಜೆ ಇಟ್ಟ ಮೇಲೆ ಅದನ್ನು ಪುನಃ ಹಿಂದಕ್ಕೆ ಇಡುವುದಿಲ್ಲ ಎಂದು ಧೃಡ ಸಂಕಲ್ಪ ಮಾಡುತ್ತೇನೆ ಮತ್ತು ಅದಕ್ಕೆ ಸಂಪೂರ್ಣ ಗಮನ ನೀಡಿ ಎಲ್ಲೂ ಲೋಪವಾಗದಂತೆ ನೋಡಿಕೊಳ್ಳುತ್ತೇನೆ. ಹಾಗಾಗಿ ಇದು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಲು ಕಾರಣವಾಗಿರಬಹುದು ಎಂಬುವುದು ನನ್ನ ಅನಿಸಿಕೆ.
ಸಾಕ್ಷಾ ಟಿವಿ : ಲಾಕ್ ಡೌನ್ ಸಮಯದಲ್ಲಿ ಏನು ಮಾಡಿದ್ರಿ
ಆಶ್ರಯ ಪಿ : ಲಾಕ್ ಡೌನ್ ಸಂದರ್ಭದಲ್ಲಿ ನಾನು ಸ್ವ ಕಲಿಕೆಯಿಂದ keyboard ನುಡಿಸಲು ಕಲಿತೆ (self taught). ಜೊತೆಗೆ ಭರತ ನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಗೆ ತಯಾರಿ ನಡೆಸಿದೆ. ಮೊನ್ನೆ ತಾನೆ ಅದರ ಫಲಿತಾಂಶ ಬಂದಿದ್ದು, 91% ಗಳಿಸಿದ್ದೇನೆ.
ಸಾಕ್ಷಾ ಟಿವಿ : ಈ ವರ್ಷ sslc ಓದುತ್ತಾ ಇದ್ದೀರಿ. ಇದು ಶೈಕ್ಷಣಿಕವಾಗಿ ಪ್ರಮುಖ ಘಟ್ಟ . ಹೆಚ್ಚಾಗಿ ಎಲ್ಲರೂ ಈ ವರ್ಷ ಬೇರೆ ಯಾವ activities ತೊಡಗಿಸಿಕೊಳ್ಳದೆ sslc ಪರೀಕ್ಷೆ ಗೆ ಅದರ ತಯಾರಿ ಬಗ್ಗೆ ಮಾತ್ರ ಯೋಚಿಸುತ್ತಾರೆ.. ನಿಮಗೆ ಇತರ ಕ್ಷೇತ್ರಗಳಲ್ಲಿ ಗಮನ ಹರಿಸಿರುವುದರಿಂದ ಓದಿನ ಕಡೆ ಗಮನ ಹರಿಸಲಿಕ್ಕೆ ಕಷ್ಟವಾಗಿದೆ ಎಂದು ಅನಿಸಿದೆಯಾ?
ಆಶ್ರಯ ಪಿ : ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನನಗೆ ಓದಿಗೆ ಎಂದೂ ಅಡಚಣೆಯಾಗಿಲ್ಲ. ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಬುದ್ಧಿ ಶಕ್ತಿ, ನೆನಪಿನ ಶಕ್ತಿ, ಏಕಾಗ್ರತೆ ವೃದ್ಧಿಯಾಗುತ್ತದೆ. ಜೊತೆಗೆ ಟಿವಿ, ಮೊಬೈಲ್, ಗೇಮ್ಸ್ ಇತ್ಯಾದಿ ಯಾವುದೇ ಚಟಗಳು ಅಂಟುವುದಿಲ್ಲ. ಸಮಯದ ಸದುಪಯೋಗವೂ ಆಗುತ್ತದೆ.
ನಾನು ಐದು ವರ್ಷದವಳಿದ್ದಾಗ ನಾಟಕ, ಭರತನಾಟ್ಯ solo performanceಗಳನ್ನು ನೀಡುತ್ತಾ ಬಂದಿದ್ದೇನೆ. ಹಾಗಾಗಿ stage fear ಎಂಬುದು ಇಲ್ಲ. ಚಿಕ್ಕ ವಯಸ್ಸಿನಿಂದಲೇ ಬೇರೆ ಬೇರೆ ಸ್ಪರ್ಧೆಗಳಿಗೆ ಹೋಗುತ್ತಿದ್ದು, ಹಲವಾರು ತಿಂಗಳು ತರಗತಿಗಳು ತಪ್ಪುತ್ತಿದ್ದವು. ಆದ್ದರಿಂದ ನಾನು self study ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದು, ಇದರಿಂದಾಗಿ ನನ್ನ ವಿದ್ಯಾಭ್ಯಾಸಕ್ಕೆ ಏನೂ ತೊಂದರೆ ಆಗಿಲ್ಲ.
ವಿವಿಧ ಸ್ಥಳಗಳ ಭೇಟಿ, ಹಲವಾರು ಗಣ್ಯರ, ಜನಸಾಮಾನ್ಯರ ಪರಿಚಯ ನನಗೆ ಹಲವಾರು ವಿಷಯಗಳನ್ನು ಕಲಿಯಲು ನೆರವಾಗಿದೆ.
ಸಾಕ್ಷಾ ಟಿವಿ : ಇತರ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಾ ಓದಿನಲ್ಲೂ ಕೂಡ ಮುಂದಿದ್ದು ಎಲ್ಲರಿಗೂ ತಾವು ಪ್ರೇರಣೆಯಾಗಿದ್ದೀರಿ.. ಉಳಿದ ಮಕ್ಕಳಿಗೆ ಏನು ಹೇಳಲು ಬಯಸುತ್ತೀರಿ..
ಆಶ್ರಯ ಪಿ : ಎಲ್ಲರಲ್ಲೂ ಪ್ರತಿಭೆ ಅಡಗಿದೆ. ಆದರೆ ಅವರೆಲ್ಲರಿಗೂ ಸೂಕ್ತ ತರಬೇತಿ, ಅವಕಾಶಗಳ ಕೊರತೆ ಇರುತ್ತದೆ. ಕೆಲವರು ಕಷ್ಟ ಅಥವಾ ಏನಾದರೂ ಅಡಚಣೆ ಎದುರಾದರೆ ಕಾರ್ಯಪೂರ್ತಿಗೊಳಿಸದೆ ಅರ್ಧಕ್ಕೆ ಕೈಬಿಡುತ್ತಾರೆ. ಹೀಗಾಗಬಾರದು. ಎಲ್ಲರಿಗೂ ಅವಕಾಶ ಮತ್ತು ಸೂಕ್ತ ತರಬೇತಿ ಸಿಗಬೇಕು.
ಸಾಕ್ಷಾ ಟಿವಿ : ನಿಮ್ಮ ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಯ ಗರಿ ನಿಮ್ಮ ಮುಡಿಲಿಗೇರಲಿ ಎಂದು ಸಾಕ್ಷಾಟಿವಿ ಬಳಗ ಹಾರೈಸುತ್ತದೆ. ಧನ್ಯವಾದಗಳು
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಜ್ವರದ ತಾಪಮಾನವನ್ನು ತ್ವರಿತವಾಗಿ ತಗ್ಗಿಸಲು ಪರಿಣಾಮಕಾರಿ ಮನೆಮದ್ದುhttps://t.co/OUsvvIIazS
— Saaksha TV (@SaakshaTv) January 25, 2021
ಅಯೋಧ್ಯೆ ರಾಮ ಮಂದಿರಕ್ಕೆ ದೇಣಿಗೆ ಸಂಗ್ರಹಿಸುತ್ತಿರುವ ಮುಸ್ಲಿಂ ಮಹಿಳೆhttps://t.co/eDpTrg6WcD
— Saaksha TV (@SaakshaTv) January 25, 2021