KGF 3 ನಲ್ಲಿ ಹೃತಿಕ್ ರೋಷನ್..?!
ನಿರ್ದೇಶಕ ಪ್ರಶಾಂತ್ ನೀಲ್ ಸಲಾರ್ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ನಟ ಯಶ್ ಮತ್ತೊಂದು ಪ್ರಾಜೆಕ್ಟ್ ನತ್ತ ಗಮನ ಹರಿಸಿದ್ದಾರೆ. ಆದ್ರೂ ಅವರಿಬ್ಬರನ್ನ ಕೆಜಿಎಫ್ 2 ಬಿಡುತ್ತಿಲ್ಲ.
ಈಗಿಂದೀಗಲೇ ಕೆಜಿಎಫ್ 3 ಸಿನಿಮಾ ಇಲ್ಲ ಅಂತಾ ಗೊತ್ತಿದ್ದರೂ ಆ ಸಿನಿಮಾ ಬಗ್ಗೆ ರೋಮರ್ಸ್ ಬರುತ್ತಲೇ ಇವೆ.
ಕೆಜಿಎಫ್ 2 ಕ್ಲೈಮ್ಯಾಕ್ಸ್ ನಲ್ಲಿ ಪ್ರಶಾಂತ್ ನೀಲ್ ಕೆಜಿಎಫ್ 3 ಸಿನಿಮಾಗೆ ಲೀಡ್ ಕೊಟ್ಟಿದ್ದೇ ತಡ ಅಭಿಮಾನಿಗಳು ಕೌಟ್ ಡೌನ್ ಶುರು ಮಾಡಿದ್ದಾರೆ.
ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಕೆಜಿಎಫ್ 3 ಸಿನಿಮಾ ಟ್ರೆಂಡ್ ಆಗುತ್ತಲೇ ಇದೆ. ಅದಾಗ್ಯೂ ಆಗಿಂದ್ದಾಗೆ ಕೆಜಿಎಫ್ 3 ಸಿನಿಮಾ ಬಗ್ಗೆ ರೋಮರ್ಸ್ ಭಾರಿ ಹೈಪ್ ಕ್ರಿಯೇಟ್ ಮಾಡುತ್ತಿವೆ.
ಅದರಂತೆ ಇದೀಗ ಕೆಜಿಎಫ್ 3 ಸಿನಿಮಾದ ಪ್ರಾಜೆಕ್ಟ್ ಗೆ ಬಾಲಿವುಡ್ ಗ್ರಿಕ್ ಗಾಡ್ ಹೃತಿಕ್ ರೋಷನ್ ಕಾಲಿಡಲಿದ್ದಾರೆ ಎಂಬ ಸುದ್ದಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಈ ಹಿಂದೆ ತೆರೆಕಂಡಿದ್ದ ಕೆಜಿಎಫ್ 2 ಸಿನಿಮಾದಲ್ಲಿ ಬಾಲಿವುಡ್ ಡಾಮಿನೇಷನ್ ಎದ್ದು ಕಾಣುತ್ತಿತ್ತು. ರವಿನಾ ಟಾಂಡನ್, ಸಂಜಯ್ ದತ್ ಪ್ರಮುಖ ಪಾತ್ರವಹಿಸಿದ್ದರು.
ಇವರಿಬ್ಬರ ಕಾಂಬಿನೇಷನ್, ಕೆಜಿಎಫ್ ನಲ್ಲಿ ರಾಕಿಭಾಯ್ ಎಲಿವೇಷನ್ ಗೆ ನಾರ್ಥ್ ನಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಅಲ್ಲದೇ ಹಿಂದಿಯಲ್ಲಿ 430 ಕೋಟಿ ಕಲೆಕ್ಷನ್ ಮಾಡಿದೆ.
ಅಂದಹಾಗೆ ಕೆಜಿಎಫ್ ಸಿರೀಸ್ ಗೆ ಬಾಲಿವುಡ್ ನಲ್ಲಿ ಭಾರಿ ಕ್ರೇಜ್ ಇದೆ.
ಇದನ್ನ ಬಳಸಿಕೊಳ್ಳಲು ಪ್ರಶಾಂತ್ ನೀಲ್ ಕೆಜಿಎಫ್ 3 ಸಿನಿಮಾದಲ್ಲಿ ಡೈರೆಕ್ಟ್ ಆಗಿ ಬಾಲಿವುಡ್ ಸ್ಟಾರ್ ನಟನಿಗೆ ಮಣೆ ಹಾಕಲಿದ್ದಾರಂತೆ.
ನಿರ್ಮಾಪಕ ವಿಜಯ್ ಕಿರಂಗದೂರ್ ಮಾತ್ರ ಈ ವರ್ಷ ಕೆಜಿಎಫ್ 3 ಸಿನಿಮಾ ಇರೋದಿಲ್ಲ ಅಂತಾ ಸ್ಪಷ್ಟ ಪಡಿಸಿದ್ದಾರೆ.
ಅಲ್ಲದೇ ಈ ಸಿನಿಮಾದಲ್ಲಿ ಹೃತಿಕ್ ನಟಿಸುತ್ತಾರೋ ಇಲ್ಲವೋ ಅನ್ನೋದನ್ನ ಈಗಲೇ ಹೇಳಲು ಸಾಧ್ಯವಿಲ್ಲ.
ಸಲಾರ್ ಸಿನಿಮಾದಲ್ಲಿ ಪ್ರಶಾಂತ್ ನೀಲ್ ಬ್ಯೂಸಿಯಾಗಿದ್ದಾರೆ.
ಅತ್ತ ಯಶ್ ಕೂಡ ಹೊಸ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿದ್ದಾರೆ.
ಎಲ್ಲರಿಗೂ ಟೈಮ್ ಬಂದಾಗ ಕೆಜಿಎಫ್ 3 ಸಿನಿಮಾ ಬಗ್ಗೆ ಆಲೋಜನೆ ಮಾಡುತ್ತೇವೆ ಎಂದಿದ್ದಾರೆ.