ಇಂದು ಎವರ್ ಯಂಗ್ ಹೀರೋ ಹೃತಿಕ್ ರೋಷನ್ ಗೆ ಹುಟ್ಟುಹಬ್ಬದ ಸಂಭ್ರಮ. 48 ನೇ ವರ್ಷಕ್ಕೆ ಕಾಲಿಟ್ಟಿರುವ ಹೃತಿಕ್ ಗೆ ಅಭಿಮಾನಿಗಳು , ಸಿನಿಮಾ ತಾರೆಯರು , ಆಪ್ತರು ಶುಭಾಷಯ ಕೋರುತ್ತಿದ್ದಾರೆ.. ಈ ನಡುವೆ ಹೃತಿಕ್ ರೋಷನ್ ಅವರ ಮುಂದಿನ ಸಿನಿಮಾ ‘ವಿಕ್ರಮ್ ವೇದ’ದಲ್ಲಿನ ಅವರ ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಸಿನಿಮಾ ತಂಡವು ಹೃತಿಕ್ ಗೆ ವಿಷ್ ಮಾಡಿದೆ.. ಜೊತೆಗೆ ಅವರ ಅಭಿಮಾನಿಗಳನ್ನೂ ಖುಷಿ ಪಡಿಸಿದೆ..
ಪೋಸ್ಟರ್ ಅನ್ನ ಹೃತಿಕ್ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿಯೂ ಶೇರ್ ಮಾಡಿಕೊಂಡಿದ್ದಾರೆ.. ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ. ತಮಿಳಿನ ‘ವಿಕ್ರಮ್ ವೇದ’ ಸಿನಿಮಾದ ರೀಮೇಕ್ ಆಗಿದೆ.. ತಮಿಳಿನಲ್ಲಿ ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಮತ್ತು ಮಾಧವನ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು.. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ತಮಿಳಿನಲ್ಲಿ ಈ ಸಿನಿಮಾ ನಿರ್ದೇಶಿಸಿದ್ದ ಗಾಯತ್ರಿ ಹಾಗೂ ಪುಷ್ಕರ್ ಅವರೇ ಈ ಸಿನಿಮಾವನ್ನೂ ಕೂಡ ಜಂಟಿಯಾಗಿ ನಿರ್ದೇಶಿಸಲಿದ್ದಾರೆ.
ಟಿ ಸೀರೀಸ್ ಬ್ಯಾನರ್ ನ ಅಡಿ ಸಿನಿಮಾ ಮೂಡಿಬರಲಿದೆ. ಈ ಸಿನಿಮಾದ ಶೂಟಿಂಗ್ ಆರಂಭವಾಗಿದ್ದು ಸೆಪ್ಟೆಂಬರ್ 30 ರಂದು ರಿಲೀಸ್ ಆಗುವ ಸಾಧ್ಯತೆಯಿದೆ.. ಈ ಸಿನಿಮಾದಲ್ಲಿ ಹೃತಿಕ್ ರೋಷನ್ ಹೊರತಾಗಿ ಸೈಫ್ ಅಲಿ ಖಾನ್ , ರಾಧಿಕಾ ಆಪ್ಟೆ , ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ.. ಈ ಸಿನಿಮಾ ವಿಶ್ವಾದ್ಯಂತ ಅದ್ಧೂರಿಯಾಗಿ ತೆರಕಾಣಲಿದೆ. ಹೃತಿಕ್ ರೋಷನ್ 2000 ದಲ್ಲಿ ಕಹೋ ನಾ ಪ್ಯಾರ್ ಹೇ ಸಿನಿಮಾದ ಮೂಲಕ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ್ದರು..