Hrithik Roshan : ಯುವ ನಟಿ ಜೊತೆಗೆ ಪ್ರೀತಿಯಲ್ಲಿದ್ದಾರಾ ಹೃತಿಕ್..???
ಬಾಲಿವುಡ್ ನ ಸ್ಟಾರ್ ನಟ ಹೃತಿಕ್ ರೊಷನ್ ಇತ್ತೀಚೆಗೆ ರೆಸ್ಟೋರೆಂಟ್ ಹೊರಗಡೆ ಒಂದು ಹುಡುಗಿಯ ಕೂಹಿಡಿದು ಬಂದು ತಮ್ಮ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ..
ಹೌದು.. ಆ ಹುಡುಗಿ ಮಾಸ್ಕ್ ಹಾಕಿದ್ದರೂ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಸಿಕ್ಕಾಪಟ್ಟೆ ಹಲ್ ಚಲ್ ಸೃಷ್ಟಿ ಮಾಡಿಬಿಟ್ಟಿದ್ದರು…
ಅಲ್ದೇ ಯಾರೀಕೆ ಅನ್ನೋ ಪ್ರಶ್ನೆಗಳು ಸಿಕ್ಕಾಪಟ್ಟೆ ಕಾಡಲಾರಂಭಿಸಿತ್ತು.. ಇದೀಗ ನೆಟ್ಟಿಗರಿಗೆ ಕಡೆಗೂ ದು ಉತ್ತರ ಸಿಕ್ಕಿದೆ.. ಈ ಹುಡುಗಿ ಮತ್ಯಾರೂ ಅಲ್ಲ ಯುವ ನಟಿ , ಸಿಂಗರ್ ಸಭಾ ಆಜಾದ್…
ಮ್ಯಾಡ್ ಬಾಯ್ ಮಿಂಕ್ ಬ್ಯಾಂಡ್ ನ ಮೆಂಬರ್ ಸಹ ಆಗಿದ್ದವರು ಸಭಾ ಆಜಾದ್ ಹೃತಿಕ್ ಅವರ ಹಿಂದೆ ನಡೆದುಕೊಂಡು ಹೋಗುತ್ತಿರುವುದು ಅವರ ಕೈ ಹಿಡಿದು ಕಾರ್ ನೊಳಗೆ ಹೃತಿಕ್ ಕರೆದುಕೊಂಡು ಹೋದ ಫೋಟೋ ವಿಡಿಯೋಗಳು ವೈರಲ್ ಆಗಿವೆ..
#HrithikRoshan snapped holding hands with mystery woman is musician and actress #SabaAzad pic.twitter.com/cKwi7PJPSP
— Pinkvilla (@pinkvilla) January 30, 2022
hrithik roshan spots while holding hands of mysterious woman
ಇದೀಗ ಹೃತಿಕ್ ಮತ್ತು ಸಬಾ ಡೇಟಿಂಗ್ ಮಾಡುತ್ತಿದ್ದಾರಾ ಅಥವಾ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದಾರಾ…??? ಅಥವ ಮುಂಬರುವ ಪ್ರಾಜೆಕ್ಟ್ ಕುರಿತು ಚರ್ಚಿಸಲು ಇಬ್ಬರೂ ಭೇಟಿಯಾಗಿದ್ದಾರಾ ಎಂಬ ಚರ್ಚೆಗಳು , ಊಹಾಪೋಹಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿವೆ..
ಸಬಾ ಕೊನೆಯದಾಗಿ ನೆಟ್ಫ್ಲಿಕ್ಸ್ ಒರಿಜಿನಲ್ ಫೀಲ್ಸ್ ಲೈಕ್ ಇಷ್ಕ್ ನಲ್ಲಿ ಕಾಣಿಸಿಕೊಂಡಿದ್ದರು. ಮತ್ತು ಮುಂಬರುವ ವೆಬ್ ಸರಣಿ ರಾಕೆಟ್ ಬಾಯ್ಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹೃತಿಕ್ ರೋಷನ್ ಕೆಲವು ವರ್ಷಗಳ ಹಿಂದೆ ಮಾಜಿ ಪತ್ನಿ ಸುಸೇನ್ ಖಾನ್ ಅವರಿಂದ ಡಿವೋರ್ಸ್ ಪಡೆದು ಪ್ರತ್ಯೇಕವಾಗಿದ್ದಾರೆ.