ಹೃತಿಕ್ ರೋಷನ್ ಜೊತೆ ಕಾಣಿಸಿಕೊಂಡ ಬೆಡಗಿ ಯಾರು…??
ಬಾಲಿವುಡ್ ನಟ ಹೃತಿಕ್ ರೋಷನ್ ಜನವರಿ 28 ರ ರಾತ್ರಿ ಮುಂಬೈನ ರೆಸ್ಟೋರೆಂಟ್ನ ಹೊರಗೆ ಕಾಣಿಸಿಕೊಂಡಿದ್ದಾರೆ, ಅಷ್ಟೆ ಆಗಿದ್ದರೆ ಸುದ್ದಿಯಾಗುತ್ತಿರಲಿಲ್ಲ. ಹೃತಿಕ್ ರೆಸ್ಟೊರೆಂಟ್ ನಿಂದ ಹೊರಗೆ ಬಂದಾಗ ಅವರ ಜೊತೆ ಒಬ್ಬ ಮಿಸ್ಟರಿ ಗರ್ಲ್ ಕೂಡ ಕಾಣಿಸಿಕೊಂಡಿದ್ದಾಳೆ. ಹೃತಿಕ್ ಈ ಹುಡುಗಿಯ ಕೈ ಹಿಡಿದು ತನ್ನ ಕಾರಿನೊಳಗೆ ಕೂರಿಸುತ್ತಿದ್ದ ವೀಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಹೃತಿಕ್ ಈ ಹುಡುಗಿಯನ್ನು ಪೋಟೋ ತೆಗೆಯದಂತೆ ರಕ್ಷಿಸುವುದನ್ನು ನೋಡಬಹುದು. ಈ ಸಮಯದಲ್ಲಿ, ಹೃತಿಕ್ ಜೊತೆ ಕಾಣಿಸಿಕೊಂಡ ಹುಡುಗಿ ಮುಖಕ್ಕೆ ಮಾಸ್ಕ್ ಧರಿಸಿದ್ದರಿಂದ ಯಾರು ಎನ್ನುವುದು ತಿಳಿದುಬಂದಿಲ್ಲ.
ಹೃತಿಕ್ ಜೊತೆ ಕಾಣಿಸಿಕೊಂಡ ಹುಡುಗಿ ಯಾರೆಂದು ತಿಳಿಯಲು ಸಾಮಾಜಿಕ ಜಾಲತಾಣಿಗರು ಹತಾಶರಾಗಿದ್ದಾರೆ? ಈ ವಿಡಿಯೋ ನೋಡಿದ ಬಳಿಕ ಸಾಮಾಜಿಕ ಜಾಲತಾಣದ ಬಳಕೆದಾರರು ಹೃತಿಕ್ ಮತ್ತೆ ಡೇಟಿಂಗ್ ಮಾಡುತ್ತಿದ್ದಾರೆಯೇ? ಎನ್ನುವ ಗುಮಾನಿ ಹರಿದಾಡುತ್ತಿದೆ.
ಹೃತಿಕ್ 2000 ರಲ್ಲಿ, ಅವರು ಸುಸ್ಸಾನ್ನೆ ಖಾನ್ ಅವರೊಂದಿಗೆ ಮದುವೆಯಾಗಿದ್ದರು. ಅದೇ ವರ್ಷದಲ್ಲಿ ಹೃತಿಕ್ ‘ಕಹೋ ನಾ ಪ್ಯಾರ್ ಹೈ…’ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಅವರು 2006 ರಲ್ಲಿ ರಿಹಾನ್ ಮತ್ತು 2008 ರಲ್ಲಿ ರಿಡಾನ್ಗೆ ಎಂಬ ಮಕ್ಕಳಿಗೆ ತಂದೆಯಾಗಿದ್ದಾರೆ. ಸುಸ್ಸಾನ್ನೆ ಖಾನ್ ಅವರೊಂದಿಗೆ 31 ಅಕ್ಟೋಬರ್ 2014 ರಂದು 17 ವರ್ಷಗಳ ಸಂಬಂಧವನ್ನು ಕೊನೆಗೊಳಿಸಿ ವಿಚ್ಛೇದನ ಪಡೆದಿದ್ದಾರೆ. ವಿಚ್ಛೇದನದ ನಂತರವೂ ಹೃತಿಕ್ ಮತ್ತು ಸುಸಾನೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.
ಹೃತಿಕ್ ಅವರ ಮುಂದಿನ ಚಿತ್ರ ವಿಕ್ರಮವೇದ, ಇದನ್ನು ಅವರ 48 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಘೋಷಿಸಲಾಗಿದೆ. ಚಿತ್ರದಲ್ಲಿ ಹೃತಿಕ್ ‘ವೇದ’ ಪಾತ್ರದಲ್ಲಿ ಮತ್ತು ಸೈಫ್ ‘ವಿಕ್ರಮ್’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ರಾಧಿಕಾ ಆಪ್ಟೆ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು 30 ಸೆಪ್ಟೆಂಬರ್ 2022 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರ 2017 ರಲ್ಲಿ ಬಿಡುಗಡೆಯಾಗಿದ್ದ, ಮಾಧವನ್ ಮತ್ತು ವಿಜಯ್ ಸೇತುಪತಿ ಅಭಿನಯದ ತಮಿಳಿನ ವಿಕ್ರಮ್ ವೇದಾ ಚಿತ್ರದ ಹಿಂದಿ ರಿಮೇಕ್ ಆಗಿದೆ.