‘ವಿಕ್ರಂ ವೇದ’ ರಿಮೇಕ್ ಸಿನಿಮಾದಿಂದ ಹೊರಬಂದ ಹೃತಿಕ್ ರೋಷನ್…!
ಹಿಂದಿಯಲ್ಲಿ ರೀಮೇಕ್ ಆಗ್ತಿರುವ ತಮಿಳಿನ ಸೂಪರ್ ಹಿಟ್ ಸಸಿನಿಮಾ ‘ವಿಕ್ರಂ ವೇದ’ದಿಂದ ಬಾಲಿವುಡ್ ನ ‘ಕ್ರಿಶ್’ ಹೊರನಡೆದಿದ್ದಾರೆ ಎನ್ನುವ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ. ಹೌದು ಬಾಲಿವುಡ್ ಗೆ ರೀಮೇಕ್ ಆಗ್ತಿರುವ ಈ ಸಿನಿಮಾದಲ್ಲಿ ಹೃತಿಕ್ ರೋಷನ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವುದು ಇತ್ತೀಚೆಗೆ ಫೈನಲ್ ಆಗಿತ್ತು..
ಆದ್ರೆ ಧಿಡೀರನೇ ಹೃತಿಕ್ ರೋಷನ್ ಸಿನಿಮಾದಿಂದ ಹೊರನಡೆದಿದ್ದಾರೆ ಎನ್ನಲಾಗ್ತಿದ್ದು, ಡೇಟ್ ಹೊಂದಾಣಿಕೆ ಸಮಸ್ಯೆಯಿಂದ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.. ಇನ್ನೂ ದಿ ನೈಟ್ ಮ್ಯಾನೇಜರ್ ಚಿತ್ರದಲ್ಲಿ ಹೃತಿಕ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಹೃತಿಕ್ ನಟನೆಯ ಮೊದಲ ಒಟಿಟಿ ಸರಣಿಯಾಗಿದೆ.
ಅಂದ್ಹಾಗೆ 2017ರಲ್ಲಿ ತಮಿಳಿನಲ್ಲಿ ತೆರೆಗೆ ಬಂದ ‘ವಿಕ್ರಂ ವೇದ’ ಚಿತ್ರದಲ್ಲಿ ನಟ ಮಾಧವನ್ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು. ನಟ ಹೃತಿಕ್ ವಿಕ್ರಂ ಪಾತ್ರದಲ್ಲಿ ನಟಿಸಲು ಸಜ್ಜಾಗಿದ್ದರು ಎನ್ನಲಾಗಿತ್ತು. ಹೃತಿಕ್ ಅಭಿಮಾನಿಗಳು ಸಹ ಈ ಸಿನಿಮಾಗಾಗಿ ಕಾತರದಿಂದ ಕಾಯುತ್ತಿದ್ದರು.. ಆದ್ರೆ ಈಗ ಅಭಿಮಾನಿಗಳಿಗೆ ಭಾರೀ ನಿರಾಸೆ ಉಂಟಾಗಿದೆ.