ಸಿಎಂ ಬದಲಾವಣೆ ಬಗ್ಗೆ ಮಾತಾಡಿದ್ರೆ ಸರ್ಕಾರದ ಇಮೇಜಿಗೆ ಧಕ್ಕೆ : ಜಗದೀಶ್ ಶೆಟ್ಟರ್
ಹುಬ್ಬಳ್ಳಿ : ಪದೇ ಪದೇ ನಾಯಕತ್ವ ಬದಲಾವಣೆ ಚರ್ಚೆ ನಡೆಯುವುದರಿಂದ ಸರ್ಕಾರದ ಇಮೇಜಿಗೆ ಧಕ್ಕೆ ಬರಲಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಸಿಎಂ ರಾಜೀನಾಮೆ ಕುರಿತ ಹೇಳಿಕೆ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ನಾಯಕತ್ವ ಬದಲಾವಣೆ ಚರ್ಚೆಯಿಂದ ಸಿಎಂ ಬಿಎಸ್ ಯಡಿಯೂರಪ್ಪ ಮನಸ್ಸಿಗೆ ಬೇಸರವಾಗಿದೆ.
ಅಲ್ಲದೇ ಪದೇ ಪದೇ ನಾಯಕತ್ವ ಬದಲಾವಣೆ ಚರ್ಚೆ ನಡೆಯುವುದರಿಂದ ಸರ್ಕಾರದ ಇಮೇಜಿಗೆ ಧಕ್ಕೆ ಬರಲಿದೆ. ಯಡಿಯೂರಪ್ಪರಿಗೆ ವಯಸ್ಸಾದ್ರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.
ಅವರ ಕೆಲಸಕ್ಕೆ ವಯಸ್ಸು ಅಡ್ಡಿ ಬಂದಿಲ್ಲ. ಹೈಕಮಾಂಡ್ ಮಟ್ಟದಲ್ಲೂ ನಾಯಕತ್ವ ಬದಲಾವಣೆ ವಿಚಾರ ಚರ್ಚೆಗೆ ಬಂದಿಲ್ಲ. ಹೀಗಾಗಿ ಪದೇ ಪದೇ ನಾಯಕತ್ವ ಬದಲಾವಣೆ ಪ್ರಶ್ನೆ ಕೇಳಿ ಬರುತ್ತಾ ಇರುವುದರಿಂದ ಸಿಎಂ ನಿನ್ನೆ ಆ ರೀತಿ ಹೇಳಿಕೆ ನೀಡಿದ್ದಾರೆ. ಆದರೆ ಸದ್ಯಕ್ಕೆ ಯಾವುದೇ ರೀತಿಯ ಬದಲಾವಣೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಇದೇ ವೇಳೆ ಅನ್ ಲಾಕ್ ಬಗ್ಗೆ ಮಾತನಾಡಿ, ಜೂನ್ 14 ರಂದು ರಾಜ್ಯದಲ್ಲಿ ಲಾಕಡೌನ್ ಮುಕ್ತಾಯವಾಗಲಿದೆ. ಆದರೆ ಶೇ.5ಕ್ಕಿಂತ ಕಡಿಮೆ ಪಾಸಿಟಿವ್ ರೇಟ್ ಬರೋ ಮುನ್ನ ಅನ್ ಲಾಕ್ ಮಾಡೋದು ಅಸಾಧ್ಯವಾಗುತ್ತೆ. ಹೀಗಾಗಿ ಹಂತಹಂತವಾಗಿ ಅನ್ ಲಾಕ್ ಮಾಡಲಾಗುವುದೆಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.