Hubballi | ಕ್ಷುಲ್ಲಕ ಕಾರಣಕ್ಕೆ ಗುಂಪಿನ ನಡುವೆ ಗಲಾಟೆ
ಹುಬ್ಬಳ್ಳಿ : ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ನಡುವೆ ಗಲಾಟೆ ನಡೆದು ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. hubballi-fight-between-youths saaksha tv
ಉಣಕಲ್ ನಿವಾಸಿ ಕಿರಣ್ ಪವಾರ್, ಅನಿಸ್ ಪವಾರ ಹಾಗೂ ಹರ್ಷ, ನಿತಿನ್ ಅಭಿಷೇಕ ಮಧ್ಯೆ ಜಗಳ ನಡೆದಿದೆ.
ಈ ಗಲಾಟೆಯಲ್ಲಿ ಕಿರಣ್ ಪವಾರ್ ಸಂಗಡಿಗರು ಹರ್ಷ, ಅಭಿಷೇಕ ಎಂಬ ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಈ ಘಟನೆಯಲ್ಲಿ ಅಭಿಷೇಕ ಹಾಗೂ ಇನ್ನಿಬ್ಬರಿಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









