ADVERTISEMENT
Thursday, November 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಡಿಸೆಂಬರ್ 11ಕ್ಕೆ ‘ಹುಬ್ಬಳ್ಳಿ ಹಂಟರ್ಸ್’ ರಿಲೀಸ್: ರಾಜ್ಯಾದ್ಯಂತ ಚಿತ್ರ ವಿತರಣೆಗೆ ಕೈಜೋಡಿಸಿದ ಖ್ಯಾತ ವಿತರಕ ಜಯಣ್ಣ!

admin by admin
November 19, 2026
in Cinema, Newsbeat, ಮನರಂಜನೆ
hubballi-hunters-kannada-movie-release-december-11-jayanna-films

hubballi-hunters-kannada-movie-release-december-11-jayanna-films

Share on FacebookShare on TwitterShare on WhatsappShare on Telegram

ಬೆಂಗಳೂರು: ಉತ್ತರ ಕರ್ನಾಟಕದ ವಿಶಿಷ್ಟ ಭಾಷಾ ಸೊಗಡು ಮತ್ತು ಹಾಸ್ಯದ ಹಿನ್ನೆಲೆಯನ್ನಿಟ್ಟುಕೊಂಡು ತಯಾರಾಗಿರುವ ಬಹುನಿರೀಕ್ಷಿತ ‘ಹುಬ್ಬಳ್ಳಿ ಹಂಟರ್ಸ್’ ಸಿನಿಮಾದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ಬರುವ ಡಿಸೆಂಬರ್ 11ರಂದು ಈ ಚಿತ್ರ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ. ಇತ್ತೀಚೆಗಷ್ಟೇ ‘ರಿಷಬ್ ಶೆಟ್ಟಿ ಮ್ಯೂಸಿಕ್’ ಆಡಿಯೋ ಸಂಸ್ಥೆಯ ಮೂಲಕ ಬಿಡುಗಡೆಯಾಗಿದ್ದ ಚಿತ್ರದ ಮೊದಲ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿ ಪ್ರೇಕ್ಷಕರ ಗಮನ ಸೆಳೆದಿದೆ. ಇದರ ಬೆನ್ನಲ್ಲೇ ಚಿತ್ರತಂಡದಿಂದ ಮತ್ತೊಂದು ಮಹತ್ವದ ಅಪ್‌ಡೇಟ್ ಹೊರಬಿದ್ದಿದ್ದು, ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ವಿತರಕ ಜಯಣ್ಣ ಅವರು ಈ ಚಿತ್ರವನ್ನು ರಾಜ್ಯಾದ್ಯಂತ ವಿತರಣೆ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಬ್ಲಾಕ್‌ಬಸ್ಟರ್ ‘ಪ್ರೇಮದ ಊರಲಿ’ ಸಿನಿಮಾವನ್ನು ವಿತರಣೆ ಮಾಡಿ ಭರ್ಜರಿ ಯಶಸ್ಸು ಕಂಡಿರುವ ಜಯಣ್ಣ ಅವರು, ಇದೀಗ ‘ಹುಬ್ಬಳ್ಳಿ ಹಂಟರ್ಸ್’ ತಂಡದೊಂದಿಗೆ ಕೈಜೋಡಿಸಿರುವುದು ಚಿತ್ರಕ್ಕೆ ದೊಡ್ಡ ಬಲ ತಂದಂತಾಗಿದೆ. ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಹಾಗೂ ವಿತರಕರಾಗಿ ದಶಕಗಳಿಂದ ದೊಡ್ಡ ಹೆಸರು ಮಾಡಿರುವ ಜಯಣ್ಣ ಫಿಲ್ಮ್ಸ್ ಸಂಸ್ಥೆಯ ಮೂಲಕ ಈ ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ, ರಾಜ್ಯದ ಮೂಲೆಮೂಲೆಗೂ ಚಿತ್ರವನ್ನು ಅತ್ಯುತ್ತಮವಾಗಿ ತಲುಪಿಸುವಲ್ಲಿ ಯಾವುದೇ ಅನುಮಾನವಿಲ್ಲ ಎಂಬ ವಿಶ್ವಾಸ ಚಿತ್ರತಂಡದಲ್ಲಿದೆ.

Related posts

friends-and-families-kannada-movie-first-look-title-launch-dia-combo

ದಿಯಾ’ ಜೋಡಿಯೊಂದಿಗೆ ಮತ್ತೆ ಬಂದ ನಿರ್ದೇಶಕ ಕೆ. ಎಸ್. ಅಶೋಕ: ‘ಫ್ರೆಂಡ್ಸ್ & ಫ್ಯಾಮಿಲಿಸ್’ ಫಸ್ಟ್ ಲುಕ್ & ಟೈಟಲ್ ಅನಾವರಣ

November 19, 2026
yashwanth-kumar-samudra-manthana-kannada-movie-hero-entry

ಕಿರುತೆರೆಗೆ ಅಲ್ಪವಿರಾಮ, ಬೆಳ್ಳಿತೆರೆಯತ್ತ ಯಶ್ವಂತ್ ಕುಮಾರ್ ಪಯಣ: ‘ಸಮುದ್ರ ಮಂಥನ’ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ

November 19, 2026

ಗೋಲ್ಡನ್ ಹಾರ್ಸ್ ಸಿನಿಮಾ ಬ್ಯಾನರ್ ಅಡಿಯಲ್ಲಿ ಸಂತೋಷ್ ಕುಮಾರ್ ಕೆ.ಸಿ. ನಿರ್ಮಿಸಿರುವ ಈ ಚಿತ್ರಕ್ಕೆ ಸಮರ್ಥ್ ಬಿ. ಕಡಕೋಳ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿಭಿನ್ನ ಶೈಲಿಯ ಮೂಲಕ ಜನಪ್ರಿಯತೆ ಗಳಿಸಿರುವ ಪ್ರತಿಭಾವಂತ ಕಂಟೆಂಟ್ ಕ್ರಿಯೇಟರ್ಸ್‌ ತಂಡವೊಂದು ಈ ಸಿನಿಮಾದ ಮೂಲಕ ಬೆಳ್ಳಿತೆರೆಯಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದೆ.

‘ಹುಬ್ಬಳ್ಳಿ ಹಂಟರ್ಸ್’ ಚಿತ್ರದಲ್ಲಿ ಖ್ಯಾತ ನಟ ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ರಮೇಶ್ ಭಟ್ ಅವರಂತಹ ಅನುಭವಿ ಕಲಾವಿದರ ಜೊತೆಗೆ ನಮನ್ ಅರೋರ, ಚೇತನ್ ಮಾರಂಬೀಡ್, ಪವನ್ ಕೃಷ್ಣರಾವ್ ಕುಲಕರ್ಣಿ, ಸುಮಿತ್ ಸಂಕೋಜಿ, ಧನ್ಯಶ್ರೀ ಸುಜಿತ್, ದೀಪಕ್ ರಾವ್, ಶಿವು ಎನ್.ಜಿ., ವನು ಪಾಟೀಲ್, ಪವನ್ ಆನೆಗೇರಿ, ವಿನಯ್ ದೊಡ್ಡಮನಿ ಸೇರಿದಂತೆ ದೊಡ್ಡ ತಾರಾಗಣವೇ ಬಣ್ಣ ಹಚ್ಚಿದೆ.

ಧಾರವಾಡ ಮತ್ತು ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಈ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದ್ದು, ಉತ್ತರ ಕರ್ನಾಟಕದ ನೈಜ ಸೊಗಡನ್ನು ತೆರೆಯ ಮೇಲೆ ತರಲಾಗಿದೆ. ಚಿತ್ರಕ್ಕೆ ಪ್ರಸನ್ನ ಕೇಶವ ಕೆ.ಎಸ್. ಅವರ ಇಂಪಾದ ಸಂಗೀತ ಸಂಯೋಜನೆಯಿದ್ದು, ಅಭಿಮನ್ಯು ಸದಾನಂದನ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ರಾಹುಲ್ ವಿ. ಪಾರ್ವತಿಕರ್, ಅಮಿತ್ ಕಾರ್ವರ್ ಹಾಗೂ ಚೇತನ್ ಮರಂಬೀದ್ ಚಿತ್ರಕ್ಕೆ ಸಂಭಾಷಣೆ ಹೆಣೆದಿದ್ದಾರೆ. ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಪ್ರಚಾರ ಕಾರ್ಯಕ್ಕೆ ವೇಗ ನೀಡಿರುವ ಚಿತ್ರತಂಡ, ಶೀಘ್ರದಲ್ಲೇ ಚಿತ್ರದ ಟೀಸರ್ ಹಾಗೂ ಉಳಿದ ಹಾಡುಗಳನ್ನು ಬಿಡುಗಡೆ ಮಾಡಲು ಸಕಲ ಸಿದ್ಧತೆ ನಡೆಸುತ್ತಿದೆ.

Tags: #ಹುಬ್ಬಳ್ಳಿಹಂಟರ್ಸ್ #HubballiHunters #KannadaCinema #Sandalwood #JayannaFilms #Jayanna #PramodShetty #SamarthBKadakol #December11Release #KannadaMovie #KannadaMovieNews #NorthKarnataka #SandalwoodNews
ShareTweetSendShare
Join us on:

Related Posts

friends-and-families-kannada-movie-first-look-title-launch-dia-combo

ದಿಯಾ’ ಜೋಡಿಯೊಂದಿಗೆ ಮತ್ತೆ ಬಂದ ನಿರ್ದೇಶಕ ಕೆ. ಎಸ್. ಅಶೋಕ: ‘ಫ್ರೆಂಡ್ಸ್ & ಫ್ಯಾಮಿಲಿಸ್’ ಫಸ್ಟ್ ಲುಕ್ & ಟೈಟಲ್ ಅನಾವರಣ

by admin
November 19, 2026
0

ಬೆಂಗಳೂರು: ‘6-5=2’ ಹಾಗೂ ಸೂಪರ್ ಹಿಟ್ ‘ದಿಯಾ’ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ದೇಶಕ ಕೆ. ಎಸ್. ಅಶೋಕ ಇದೀಗ ತಮ್ಮ...

yashwanth-kumar-samudra-manthana-kannada-movie-hero-entry

ಕಿರುತೆರೆಗೆ ಅಲ್ಪವಿರಾಮ, ಬೆಳ್ಳಿತೆರೆಯತ್ತ ಯಶ್ವಂತ್ ಕುಮಾರ್ ಪಯಣ: ‘ಸಮುದ್ರ ಮಂಥನ’ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ

by admin
November 19, 2026
0

  ​ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳ ಮೂಲಕ ಮನೆಮಾತಾಗಿರುವ ನಟ ಯಶ್ವಂತ್ ಕುಮಾರ್, ಇದೀಗ ತಮ್ಮ ಕಿರುತೆರೆ ಪಯಣಕ್ಕೆ ತಾತ್ಕಾಲಿಕ ವಿರಾಮ ನೀಡಿ ಪೂರ್ಣಪ್ರಮಾಣದಲ್ಲಿ ಸಿನಿಮಾರಂಗದಲ್ಲಿ...

lambodara-2-0-grand-red-carpet-premiere-bengaluru-celebrities

ಲಂಬೋದರ 2.0’ ಚಿತ್ರದ ಗ್ರ್ಯಾಂಡ್ ರೆಡ್ ಕಾರ್ಪೆಟ್ ಪ್ರದರ್ಶನ; ಸಿನಿಮಾ ತಾರೆಯರು, ಜಾಗತಿಕ ಉದ್ಯಮಿಗಳ ದಂಡು ಭಾಗಿ!

by admin
November 19, 2026
0

ಬೆಂಗಳೂರು: ಅನಿಲ್ ಶೆಟ್ಟಿ ನಿರ್ಮಿಸಿ, ಪ್ರಮುಖ ಪಾತ್ರದಲ್ಲಿ ನಟಿಸಿರುವ ಹಾಗೂ ‘ಸಿಂಪಲ್’ ಸುನಿ ನಿರ್ದೇಶನದ ಬಹುನಿರೀಕ್ಷಿತ ‘ಲಂಬೋದರ 2.0’ ಸಿನಿಮಾದ ಭವ್ಯ ರೆಡ್ ಕಾರ್ಪೆಟ್ ಪ್ರದರ್ಶನ ನಗರದ...

draupadi-kannada-movie-muhurtha-rohith-raghavendra

‘ದ್ರೌಪದಿ’ ಸಿನಿಮಾಗೆ ಅದ್ಧೂರಿ ಮುಹೂರ್ತ: ಅನ್ಯಾಯ ಮತ್ತು ಪ್ರತೀಕಾರದ ರಕ್ತಸಿಕ್ತ ಕಥೆಗೆ ಚಾಲನೆ

by admin
November 19, 2026
0

ಬೆಂಗಳೂರು: ಅನ್ಯಾಯ, ಆಕ್ರೋಶ ಹಾಗೂ ಪ್ರತೀಕಾರದ ರೋಚಕ ಕಥಾಹಂದರವನ್ನು ಒಳಗೊಂಡಿರುವ ನೂತನ ಕನ್ನಡ ಚಲನಚಿತ್ರ ‘ದ್ರೌಪದಿ’ (DRAUPADI) ಸಿನಿಮಾಗೆ ಶುಭ ಮುಹೂರ್ತ ನೆರವೇರಿದೆ. "ಒಂದು ಸೀರೆಯ ಸೆರಗು,...

bhavantara-kannada-movie-karthik-sharma-audience-response-review

ಕಂಟೆಂಟ್‌ ಸಿನಿಮಾಗಳಿಗೆ ಕನ್ನಡಿಗರ ಜೈಕಾರ; ಕಾರ್ತಿಕ್‌ ಶರ್ಮಾ ನಿರ್ದೇಶನದ ‘ಭಾವಾಂತರ’ ಚಿತ್ರಕ್ಕೆ ಪ್ರೇಕ್ಷಕರ ಮನದಾಳದ ಮೆಚ್ಚುಗೆ

by admin
November 19, 2026
0

ಬೆಂಗಳೂರು: ಕಮರ್ಷಿಯಲ್ ಚಿತ್ರಗಳ ಅಬ್ಬರದ ನಡುವೆಯೂ, ನೈಜ ಕಥಾವಸ್ತು ಮತ್ತು ಭಾವನಾತ್ಮಕ ನಿರೂಪಣೆಯನ್ನು ಹೊತ್ತು ಬಂದಿರುವ ಕನ್ನಡದ ‘ಭಾವಾಂತರ’ ಸಿನಿಮಾ ಪ್ರೇಕ್ಷಕರ ಮನಸ್ಸನ್ನು ಗಾಢವಾಗಿ ತಟ್ಟುವಲ್ಲಿ ಯಶಸ್ವಿಯಾಗಿದೆ....

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram