ಹುಬ್ಬಳ್ಳಿ ಕಿಮ್ಸ್ ನಲ್ಲಿ 2 ವರ್ಷದ ಕಂದಮ್ಮ ಸಾವು Saaksha Tv
ಹುಬ್ಬಳ್ಳಿ: ಹುಬ್ಬಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 2 ವರ್ಷದ ಮಗು ಸಾವನ್ನಪ್ಪಿದ್ದು, ಸಾವಿಗೆ ಸಿಬ್ಬಂದಿಯ ನಿರ್ಲಕ್ಷ್ಯ ಎಂದು ಆರೋಪ ಕೇಳಿಬರುತ್ತಿದ್ದೆ.
2 ವರ್ಷದ ರಕ್ಷಾ ಚೌದರಿ ಮೃತ ಕಂದಮ್ಮನ. ಸಂಜಯ್ ಹಾಗೂ ಕೀರ್ತಿ ದಂಪತಿಯ ಮಗಳು ರಕ್ಷಾಳನ್ನು ಕಿಮ್ಸ್ ಗೆ ದಾಖಲಿಸಲಾಗಿತ್ತು ಬಾಯಿಯೊಳಗೆ ಗಡ್ಡೆ ಆಗಿದ್ದರಿಂದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದರು. ಸರ್ಜರಿ ಬಳಿ ತೀವ್ರ ರಕ್ತಸ್ರಾವದಿಂದ ಮಗು ಸಾವನ್ನಪ್ಪಿದೆ. ಈ ಸಾವಿಗೆ ವೈದ್ಯರೆ ಕಾರಣವೆಂದು ಪೋಷಕರು ಆರೋಪಿಸುತ್ತಿದ್ದಾರೆ.
ಅಲ್ಲದೇ ವೈದ್ಯರು ಪೋಷಕರ ಅನುಮತಿ ಪಡೆಯದೇ ಆಪರೇಷನ್ ಮಾಡಿದ್ದಾರೆ ಎಂಬ ಆರೋಪಗಳಿ ಕೇಳಿ ಬಂದಿವೆ. ಆದರೆ ಕಿಮ್ಸ್ ಪೋಷಕರ ಆರೋಪವನ್ನು ತಳ್ಳಿ ಹಾಕಿದೆ..ಪೋಷಕರು ಲಿಖಿತವಾಗಿ ಅನುಮತಿ ನೀಡಿರುವ ದಾಖಲೆಗಳು ನಮ್ಮ ಬಳಿಯಲ್ಲಿವೆ ಎಂದು ಕಿಮ್ಸ್ ವೈದ್ಯರು ಸ್ಪಷ್ಟನೆ ನೀಡಿದ್ದಾರೆ.
ಮಗಳು ಆಸ್ಪತ್ರೆಗೆ ದಾಖಲಾದಾಗ ಚೆನ್ನಾಗಿಯೇ ಇತ್ತು. ಸರ್ಜರಿ ಬಳಿಕ ರಕ್ತಸ್ರಾವ ಕಡಿಮೆ ಆಗಲಿಲ್ಲ. ಕಿಮ್ಸ್ ಗೆ ವಾಪಸ್ ಬಂದಾಗ ಮಗು ಸಾವನ್ನಪ್ಪಿದೆ ಎಂದು ಹೇಳಿ ರಕ್ಷಾ ಪೋಷಕರು ವೈದ್ಯರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಎರಡು ವರ್ಷದ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ. ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿಲ್ಲ. ಪೋಷಕರಿಂದ ಅನುಮತಿ ಪಡೆದು ಸರ್ಜರಿ ಮಾಡಲಾಗಿದೆ. ದಾಖಲೆಗಳಿಗೆ ಸಹಿ ಮಾಡಿಸಿಕೊಂಡೆ ಸರ್ಜರಿ ಮಾಡಿದ್ದೇವೆ. ಮಗುವಿನ ಕರುಳಿನಲ್ಲಿ ಗಂಟು ಆಗಿತ್ತು. ಗಂಟು ಬರ್ಸ್ಟ್ ಆಗಿ ತೀವ್ರ ರಕ್ತಸ್ರಾವವಾಗಿದೆ ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಮಾಹಿತಿ ನೀಡಿದ್ದಾರೆ.
ಕರುಳಿನ ಗಂಟಿನ ಸರ್ಜರಿ ವೇಳೆ ಈ ರೀತಿಯ ಘಟನೆಗಳು ಸಂಭವಿಸುತ್ತವೆ. ಇದನ್ನು ಪೋಷಕರಿಗೆ ಮುಂಚಿತವಾಗಿಯೇ ತಿಳಿಸಲಾಗಿತ್ತು. ಅವರ ಒಪ್ಪಿಗೆಯ ನಂತರವೇ ಸರ್ಜರಿ ಮಾಡಲಾಗಿತ್ತು. ದುರದೃಷ್ಟವಶಾತ್ ಮಗು ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದೆ ಎಂದು ರಾಮಲಿಂಗಪ್ಪ ಪ್ರಕರಣದ ಕುರಿತು ಮಾಧ್ಯಮಗಳಿಗೆ ಹೇಳಿದ್ದಾರೆ.








