ಈ ಹಿಂದೆ ಕೆಲ ವಿಚಾರಗಳ ಬಗ್ಗೆ ಯದ್ವಾತದ್ವಾ ಮಾತನಾಡಿ ವಿಡಿಯೋ ಹರಿಬಿಡುತ್ತಿದ್ದ ಹುಚ್ಚಾ ವೆಂಕಟ್ ಕೆಲ ದಿನಗಳಿಂದ ಸೈಲೆಂಟ್ ಆಗಿದ್ರು. ಈಗ ಲಾಕ್ ಡೌನ್ ಸಮಯದಲ್ಲಿ ಮತ್ತೆ ವೆಂಕಟ್ ಪ್ರತ್ಯಕ್ಷವಾಗಿದ್ದು, ಒಂದೊಳ್ಳೆ ಕೆಲಸ ಮಾಡಿ ಅದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೀಡಾಗಿರುವ ಜನರಿಗೆ ಹುಚ್ಚಾ ವೆಂಕಟ್ ದಿನಸಿ ಕಿಟ್ ಗಳನ್ನು ವಿತರಿಸಿದ್ದಾರೆ. ಅಲ್ಲದೆ ಎಲ್ಲಾ ಗಣ್ಯರೂ ಸಹ ಕೊರೊನಾ ದಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಸಹಾಯ ಮಾಡಬೇಕು ಎಂದು ಕೋರಿದ್ದಾರೆ.
ತಮ್ಮ ಸಹಾಯದ ಬಗ್ಗೆ ವೆಂಕಟ್ ವಿಡಿಯೋ ಮಾಡಿದ್ದು, ‘ನಾನೂ ಸಹ ಬಡವ, ನನ್ನ ಪರಿಸ್ಥಿತಿಯೂ ಬಹಳ ಕೆಟ್ಟದಾಗಿದೆ ಆದರೆ ನಾನು ಜನರಿಗೆ ಸಹಾಯ ಮಾಡಬೇಕು ಎಂದು ನಿರ್ಣಯಿಸಿದ್ದೇನೆ. ಸಮಾಜಕ್ಕೆ ಕೊಟ್ಟು-ಕೊಟ್ಟು ನಾನು ಬಡವನಾದೆ ಆದರೆ ಸಹಾಯ ಮಾಡಬೇಕು ಎಂಬ ತುಡಿತ ಹೋಗಿಲ್ಲ’ ಎಂದಿದ್ದಾರೆ.
ಇನ್ನು ಹುಚ್ಚಾ ವೆಂಕಟ್ ‘ತಿಕ್ಲ ಹುಚ್ಚಾ ವೆಂಕಟ್’ ಎಂಬ ಹೊಸ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾವು ಇಸ್ರೋ ಹಾಗೂ ಇನ್ನಿತರೆ ವಿಜ್ಞಾನಿಗಳ ಆಶೀರ್ವಾದದಿಂದ ನಿರ್ಮಿಸಲ್ಪಡುತ್ತಿದೆ ಎಂದು ಪೋಸ್ಟರ್‌ನಲ್ಲಿ ಬರೆದುಕೊಂಡಿದ್ದಾರೆ








