ಫ್ರಾಂಚೈಸಿಗಳಿಗೆ ಶಾಕ್ : ಐಪಿಎಲ್ ಪ್ರಶಸ್ತಿ ಹಣದಲ್ಲಿ ಭಾರಿ ಇಳಿಕೆ
ಅಬುಭಾಬಿ : ಐಪಿಎಲ್ ತಂಡಗಳ ಫ್ರಾಂಚೈಸಿಗಳಿಗೆ ಬಿಸಿಸಿಐ ಶಾಕ್ ನೀಡಿದ್ದು, ಕೊರೊನಾ ಕಾರಣ ಈ ಬಾರಿಯ ಐಪಿಎಲ್ ನ ಪ್ರಶಸ್ತಿ ಹಣವನ್ನು ಕಡಿಮೆ ಮಾಡಿದೆ.
ಈ ಬಾರಿ ಐಪಿಎಲ್ ಗೆಲ್ಲುವ ತಂಡಕ್ಕೆ ಕಳೆದ ನೀಡಿದ ಪ್ರಶಸ್ತಿ ಹಣದ ಅರ್ಧದಷ್ಟು ಹಣವನ್ನು ನೀಡಲಾಗುತ್ತದೆ ಎಂದು ಬಿಸಿಸಿಐ ತಿಳಿಸಿದೆ.
ಕಳೆದ ವರ್ಷ ಅಂದರೆ 2019 ರ ಐಪಿಎಲ್ ಟೂರ್ನಿಯಲ್ಲಿ ಗೆದ್ದ ತಂಡಕ್ಕೆ ಟ್ರೋಪಿ ಮತ್ತು 20 ಕೋಟಿ ರೂ ನಗದು ಬಹುಮಾನ ನೀಡಲಾಗಿತ್ತು.
ಆದ್ರೆ ಈ ಬಾರಿ ಕೊರೊನಾ ಕಾರಣ ಪ್ರಶಸ್ತಿಯನ್ನು ಅರ್ಧದಷ್ಟು ಕಡಿತ ಮಾಡಿರುವ ಬಿಸಿಸಿಐ, ಐಪಿಎಲ್ 2020ರಲ್ಲಿ ವಿಜೇತ ತಂಡಕ್ಕೆ ಟ್ರೋಫಿ ಮತ್ತು 10 ಕೋಟಿ ರೂಪಾಯಿ ನೀಡುವುದಾಗಿ ಸುತ್ತೋಲೆ ಹೊರಡಿಸಿದೆ.
ಐಪಿಎಲ್ 2020- ಫೈನಲ್ ಗೆ ಎಂಟ್ರಿಕೊಟ್ಟ ಡೆಲ್ಲಿ ಕ್ಯಾಪಿಟಲ್ಸ್.. ಎಸ್ ಎರ್ ಎಚ್ ಹೋರಾಟ ಅಂತ್ಯ..!
ಬಿಸಿಸಿಐ ಸುತ್ತೋಲೆ ಪ್ರಕಾರ.. ಈ ಬಾರಿಯ ಐಪಿಎಲ್ ನಲ್ಲಿ ಗೆದ್ದ ತಂಡಕ್ಕೆ 20 ಕೋಟಿಯ ಬದಲು 10 ಕೋಟಿ ರೂ., ರನ್ನರ್ ಅಫ್ ತಂಡಕ್ಕೆ 12.5 ಕೋಟಿಯ ಬದಲು 6.25 ಕೋಟಿ ರೂ ಮತ್ತು ಪ್ಲೇ ಆಫ್ ಆಡಿದ ತಂಡಗಳಿಗೆ 8.75 ಕೋಟಿಯ ಬದಲು 4.375 ಕೋಟಿ ನೀಡಲಾಗುತ್ತದೆ.
ಇನ್ನು ಪ್ರತಿ ವರ್ಷ ಐಪಿಎಲ್ ಟೂರ್ನಿಯಲ್ಲಿ ರನ್ ಸುನಾಮಿ ಎಬ್ಬಿಸಿ ಅತೀ ಹೆಚ್ಚು ರನ್ ಗಳಿಸಿದ ಆರೆಂಜ್ ಕ್ಯಾಪ್ ವಿಜೇತನಿಗೆ 10 ಲಕ್ಷ, ಅತೀ ಹೆಚ್ಚು ವಿಕೆಟ್ ಪಡೆದ ಪರ್ಪಲ್ ಕ್ಯಾಪ್ ವಿಜೇತ ಬೌಲರಿಗೆ 10 ಲಕ್ಷ ಮತ್ತು ಎಮಜಿರ್ಂಗ್ ಪ್ಲೇಯರ್ ಗೆ 10 ಲಕ್ಷ ನೀಡಲಾಗುತ್ತಿತ್ತು. ಆದರೆ ಈ ಪ್ರಶಸ್ತಿಯ ಹಣದ ಬಗ್ಗೆ ಬಿಸಿಸಿಐ ಯಾವ ಸೂಚನೆಯನ್ನು ಸುತ್ತೋಲೆಯಲ್ಲಿ ಹೊರಡಿಸಿಲ್ಲ.
ಸದ್ಯ ಐಪಿಎಲ್-2020 ಅಂತ್ಯಕ್ಕೆ ಬಂದಿದ್ದು, ನಾಳೆ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡ ಫೈನಲ್ ಅಲ್ಲಿ ಸೆಣಸಾಡಲಿವೆ.
`ಆರ್ ಸಿಬಿ ಕಪ್ ಗೆಲ್ಲಬೇಕಿದ್ದರೇ ನಾಯಕತ್ವ ಬದಲಿಸಿ’ : ಗಂಭೀರ್
ಈಗಾಗಲೇ ನಾಲ್ಕು ಬಾರಿ ಕಪ್ ಗೆದ್ದಿರುವ ಮುಂಬೈ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದರೂ, ಯುವಕರಿಂದಲೇ ಕೂಡಿರುವ ಡೆಲ್ಲಿ ಚೊಚ್ಚಲ ಬಾರಿಗೆ ಕಪ್ ಎತ್ತಿ ಹಿಡಿಯಲು ಭಾರಿ ಕಸರತ್ತು ನಡೆಸುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel