ದೆಹಲಿಯ ಏಮ್ಸ್ ನಲ್ಲಿ ಮೊದಲ ಸ್ವದೇಶಿ ಕೋವಿಡ್-19 ಲಸಿಕೆಯ ಮಾನವ ಕ್ಲಿನಿಕಲ್ ಪ್ರಯೋಗ
ಹೊಸದಿಲ್ಲಿ, ಜುಲೈ 25: ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ ಕೋವಿಡ್ -19 ಲಸಿಕೆಯಾದ ಕೊವಾಕ್ಸಿನ್ ನ ಮಾನವ ಕ್ಲಿನಿಕಲ್ ಪ್ರಯೋಗ ದೆಹಲಿಯ ಏಮ್ಸ್ ನಲ್ಲಿ ಶುಕ್ರವಾರ ಪ್ರಾರಂಭವಾಯಿತು.
30 ವರ್ಷದ ಯುವಕನಿಗೆ ಭಾರತದ ಮೊದಲ ಕೋವಿಡ್ -19 ಲಸಿಕೆಯಾದ ಕೊವಾಕ್ಸಿನ್ ನ ಲಸಿಕೆಯ ಮೊದಲ ಶಾಟ್ ಕೊಡಲಾಯಿತು.
ಎರಡು ಗಂಟೆಗಳ ಕಾಲ ಸ್ವಯಂಸೇವಕರನ್ನು ಆಸ್ಪತ್ರೆಯಲ್ಲಿ ವೀಕ್ಷಣೆಯಲ್ಲಿ ಇರಿಸಿ ಬಳಿಕ ಅವರನ್ನು ಮನೆಗೆ ಕಳುಹಿಸಲಾಗುವುದು.ಅಲ್ಲದೇ ಮುಂದಿನ ಏಳು ದಿನಗಳವರೆಗೆ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಏಮ್ಸ್ ಮೂಲಗಳು ತಿಳಿಸಿವೆ.

ಲಸಿಕೆಯ ಮಾನವ ಕ್ಲಿನಿಕಲ್ ಪ್ರಯೋಗಗಳಿಗಾಗಿ ಹಲವಾರು ಸ್ವಯಂಸೇವಕರ ಮೇಲೆ ನಡೆಸಿದ ಆರಂಭಿಕ ತಪಾಸಣೆ ಮತ್ತು ಪರೀಕ್ಷೆಗಳ ನಂತರ 30 ವರ್ಷದ ಆರೋಗ್ಯವಂತ ಪುರುಷನನ್ನು ಆಯ್ಕೆ ಮಾಡಲಾಯಿತು ಮತ್ತು ಆತನಿಗೆ ಲಸಿಕೆಯ ಮೊದಲ ಶಾಟ್ ಅನ್ನು ನೀಡಲಾಯಿತು.
ಐಸಿಎಂಆರ್ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದೊಂದಿಗೆ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ಕೋವಾಕ್ಸಿನ್, ಇತ್ತೀಚೆಗೆ ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ನಿಂದ ಮಾನವ ಕ್ಲಿನಿಕಲ್ ಪ್ರಯೋಗಗಳಿಗೆ ಅನುಮತಿ ಪಡೆದಿದೆ.
ಮೊದಲ ಹಂತದಲ್ಲಿ, ಲಸಿಕೆಯನ್ನು 375 ಸ್ವಯಂಸೇವಕರ ಮೇಲೆ ಪರೀಕ್ಷಿಸಲಾಗುವುದು ಮತ್ತು ಅವರಲ್ಲಿ 100 ಮಂದಿ ಏಮ್ಸ್ ನಿಂದ ಬಂದವರಾಗಿರುತ್ತಾರೆ. ಎರಡನೇ ಹಂತದಲ್ಲಿ, ಇತರ ಕಡೆಯಿಂದ ಸುಮಾರು 750 ಸ್ವಯಂಸೇವಕರನ್ನು ಒಳಗೊಂಡಿರುತ್ತದೆ.
ಪ್ರಯೋಗದ ಮೊದಲ ಹಂತದಲ್ಲಿ 18 ರಿಂದ 55 ವರ್ಷ ವಯಸ್ಸಿನ ಆರೋಗ್ಯವಂತ ಜನರ ಮೇಲೆ ನಡೆಸಲಾಗುವುದು. ಯಾವುದೇ ಅಸ್ವಸ್ಥ ಸ್ಥಿತಿಯಲ್ಲಿಲ್ಲದ, ಗರ್ಭವತಿಯಲ್ಲದ ಮಹಿಳೆಯರನ್ನು ಸಹ ಮೊದಲ ಹಂತದಲ್ಲಿ ಪ್ರಯೋಗಕ್ಕೆ ಆಯ್ಕೆ ಮಾಡಲಾಗುತ್ತದೆ.
ಎರಡನೇ ಹಂತದಲ್ಲಿ 750 ಜನರನ್ನು ನೇಮಕ ಮಾಡಲಾಗುವುದು ಮತ್ತು ಅವರು 12 ರಿಂದ 65 ವರ್ಷ ವಯಸ್ಸಿನವರಾಗುತ್ತಾರೆ








