7 ತಿಂಗಳ ಒಳಗೆ 3 ರಾಜ್ಯಗಳಿಗೆ ಏಳೇಳು ಬಾರಿ ಮಾರಾಟವಾದ ಯುವತಿ ಆತ್ಮಹತ್ಯೆ
ಮಧ್ಯಪ್ರದೇಶ: 18 ವರ್ಷದ ಬುಡಕಟ್ಟು ಸಮುದಾಯದ ಯುವತಿಯೊಬ್ಬಳನ್ನು ಕಳೆದ 7 ತಿಂಗಳಲ್ಲಿ 3 ರಾಜ್ಯಗಳಿಗೆ ಒಟ್ಟು 7 ಬಾರಿ ಮಾರಾಟ ಮಾಡಿರುವ ಆಘಾತಕಾರಿ ಘಟನೆಯೊಂದು ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಹೌದು ಹೀಗೆ ಪದೇ ಪದೇ ಮಾರಟವಾಗುತ್ತಿದ್ದ ಯುವತಿ 7ನೇ ಬಾರಿಗೆ ಮಾರಾಟವಾದ ಮೇಲೆ ಬುದ್ಧಿಮಾಂದ್ಯ ಯುವಕನ ಜತೆ ಆಕೆಯ ವಿವಾಹ ನಡೆದಿತ್ತು. ಇದಾದ ನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಛತ್ತಿಸಗಢದ ಜಷ್ಟುರ ಜಿಲ್ಲೆಯಲ್ಲಿ ಈಕೆ ತನ್ನ ತಂದೆಯ ಜತೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಳು. ಆದ್ರೆ ಕೆಲಸ ಕೊಡುವ ಆಮಿಷ ಒಡ್ಡಿ ಆಕೆಯನ್ನು ಕರೆದುಕೊಂಡು ಹೋಗಿದ್ದ ಪಾಪಿಗಳು ಆಕೆಯನ್ನ ಬಿಡಲು ಹಣದ ಬೇಡಿಕೆಯಿಟ್ಟಿದ್ದರು. ಆದ್ರೆ ಹಣ ಕೊಡುವ ಶಕ್ತಿ ಯುವತಿಯ ಮನೆಯವಗಿರಲಿಲ್ಲ. ಹಣ ನೀಡದಿದ್ದಲ್ಲಿ ಮಗಳ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.
1009 ಸೋಲು, 65ನೇ ವಯಸ್ಸಿನಲ್ಲಿ ಮಿಲೇನಿಯರ್ ಆದ KFC – ಸಂಸ್ಥಾಪಕ ಹಾರ್ನಾಲ್ಡ್ ಸ್ಯಾಂಡರ್ಸ್ ಸಾಹಸಗಾಥೆ..!
ಇನ್ನೂ ಇಂತಹ ನೀಚ ಕೃತ್ಯದಲ್ಲಿ ಯುವತಿಯ ಸಂಬಂಧಿಕರಾದ ಪಂಚಮ್ ಸಿಂಗ್ ರೈ ದಂಪತಿ ಭಾಗಿಯಾಗಿದ್ದು, ಪೊಲೀಸ್ ತನಿಖೆಯಲ್ಲಿ ಬಯಲಾಗಿತ್ತು. ಈ ಪಾಪಿಗಳು 20 ಸಾವಿರ ರೂಪಾಯಿಗೆ ಯುವತಿಯನ್ನ ಮಾರಾಟ ಮಾಡಿದ್ದ ವಿಚಾರ ಬೆಳಕಿಗೆ ಬಂದಿತ್ತು. ಅಲ್ಲಿಂದ ಯುವತಿಯನ್ನು 7 ತಿಂಗಳಿನಲ್ಲಿ 7ಕ್ಕೂ ಹೆಚ್ಚು ಬಾರಿ ಮಾರಾಟ ಮಾಡಲಾಗಿರೋ ಸತ್ಯ ಗೊತ್ತಾಗಿದೆ. ಛತ್ತಿಸ್ಗಡ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶ ಮೂರು ರಾಜ್ಯಗಳಲ್ಲಿ ಯುವತಿಯ ಮಾರಾಟ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ನಂತರ ಕೊನೆಯದಾಗಿ ಬುದ್ಧಿಮಾಂದ್ಯ ವ್ಯಕ್ತಿ ಬಬ್ಲು ಎಂಬಾತನ ಜತೆ ಈಕೆಯ ವಿವಾಹ ಮಾಡಲಾಗಿತ್ತು. ತನಗಾಗಿರುವ ಅನ್ಯಾಯದಿಂದ ಬೇಸತ್ತು ಹೋಗಿದ್ದ ಯುವತಿ, ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪಾಲಕರು ನೀಡಿದ್ದ ದೂರಿನ ಮೇಲೆ ತನಿಖೆ ಕೈಗೊಂಡಿರುವ ಪೊಲೀಸರಿಗೆ ಯುವತಿ ಮೃತಪಟ್ಟಿರುವುದು ತಿಳಿದುಬಂದಿದ್ದು, ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ. ಈಕೆಯನ್ನು ಮಾರಾಟ ಮಾಡಿದ ದಂಪತಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಅವರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಲ್ಲದೇ ಪ್ರಕರಣ ಸಂಬಂಧ ಒಟ್ಟು 8 ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಸಂಬಂಧಿಸಿದಂತೆ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel