ಅನೇಕ ತಜ್ಞರು ಮಾನವನ ಮೂತ್ರದ ಬಳಕೆ ಕುರಿತಂತೆ ವ್ಯಾಪಕವಾಗಿ ಮಾತನಾಡಿರುವುದು ಅಂತರಜಾಲದಲ್ಲಿ ದಾಖಲಾಗಿದೆ. ಇದರಲ್ಲಿ ಯುರೋಪಿಯನ್ ಸ್ಪೇಸ್ ಏಜೆನ್ಸಿ ಅಭಿಪ್ರಾಯಗಳು ಈಗ ಸಾರ್ವತ್ರಿಕವಾಗಿ ಸಾಕಷ್ಟು ಚರ್ಚೆಯಾಗುತ್ತಿದೆ.
ಮಾನವನ ಮೂತ್ರವು ಗಾಯ, ಮೊಡವೆ, ಅಲರ್ಜಿಗಳಿಗೆ ಚಿಕಿತ್ಸಕ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಯುರೋಪಿಯನ್ ಸ್ಪೇಸ್ ಏಜೆನ್ಸಿ ಅಭಿಪ್ರಾಯಪಟ್ಟಿದೆ. ಆದರೆ ಇಂತಹ ಪ್ರಸ್ತಾಪಗಳನ್ನು ಹಲವರು ನಿರಾಕರಿಸಿದ್ದಾರೆ.
ಇದಲ್ಲದೆ ಚಂದ್ರನ ಮೇಲೆ ಪ್ರಯೋಗಕ್ಕೆ ಮಾನವನ ಮೂತ್ರವನ್ನು ಬಳಸಲಾಗುತ್ತಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಚಂದ್ರನ ಮೇಲೆ ಕಾಂಕ್ರೀಟ್ ಮಿಶ್ರಣವನ್ನು ಮಾಡುವುದಕ್ಕೆ ಮಾನವನ ಮೂತ್ರವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಸಂಶೋಧಕರು ಹೇಳಿದ್ದಾರೆ.
‘ಭವಿಷ್ಯದ ಚಂದ್ರನ ಮೇಲೆ ನಿವಾಸಿಗಳಿಗೆ ಧನ್ಯವಾದಗಳು, ಒಬ್ಬ ವ್ಯಕ್ತಿಯು ಪ್ರತಿದಿನ ಉತ್ಪಾದಿಸುವ ಒಂದುವರೆ ಲೀಟರ್ ದ್ರವ ತ್ಯಾಜ್ಯವು ಬಾಹ್ಯಾಕಾಶ ಸಂಶೋಧನೆಗೆ ಭರವಸೆಯ ಉಪ ಉತ್ಪನ್ನವಾಗಬಹುದು’ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.
ಚಂದ್ರನ ಮೇಲ್ಮೈ ಮೇಲೆ ದೊರಕುವ ಪೌಡರ್ ರೀತಿಯ ಮಣ್ಣನ್ನು ಬಳಸಿ ಕಾಂಕ್ರೀಟ್ ತಯಾರಿಕೆಯಲ್ಲಿ ಮಿಶ್ರಣಕ್ಕೆ ಮನುಷ್ಯನ ಮೂತ್ರದಲ್ಲಿರುವ ಸಾವಯವ ಸಂಯುಕ್ತವಸ್ತು ಯೂರಿಯಾ ಸಹಾಯ ಮಾಡಬಹುದು ಎನ್ನಲಾಗಿದೆ.








