Iran : ಶಾಲೆಗೆ ಹೋಗುವುದನ್ನ ತಡೆಯಲು ನೂರಾರು ವಿದ್ಯಾರ್ಥಿನಿಯರಿಗೆ ವಿಷ….
ಬಾಲಕಿಯರ ಶಿಕ್ಷಣವನ್ನ ಸ್ಥಗಿತಗೊಳಿಸುವ ದುರುದ್ದೇಶದಿಂದ ಕೆಲವರು ಶಾಲಾ ಬಾಲಕಿಯರಿಗೆ ವಿಷವನ್ನು ನೀಡುತ್ತಿದ್ದಾರೆ ಎಂದು ಇರಾನ್ ಉಪ ಮಂತ್ರಿಯೊಬ್ಬರು ಭಾನುವಾರ ಹೇಳಿದ್ದಾರೆ.
ಮಹಿಳೆಯ ಮೇಲೆ ಶರಿಯಾ ಕಾನೂನು ವಿಧಿಸಿಲು ನವೆಂಬರ್ ಅಂತ್ಯದಿಂದ, ಟೆಹ್ರಾನ್ನ ದಕ್ಷಿಣದ ಕೋಮ್ ನಗರದಲ್ಲಿ ನೂರಾರು ಶಾಲಾ ಮಕ್ಕಳ ಮೇಲೆ ಉಸಿರಾಟದ ವಿಷದ ಪ್ರಕರಣಗಳು ವರದಿಯಾಗಿವೆ.
ಭಾನುವಾರ ಆರೋಗ್ಯ ಸಚಿವ ಯುನೆಸ್ ಪನಾಹಿ ಉದ್ದೇಶಪೂರ್ವಕ ವಿಷ ಪ್ರಾಶನ್ನವನ್ನ ದೃಡಪಡಿಸಿದ್ದಾರೆ. ಗುಪ್ತಚರ ಮತ್ತು ಶಿಕ್ಷಣ ಸಚಿವಾಲಯಗಳು ವಿಷದ ಕಾರಣವನ್ನ ಕಂಡುಹಿಡಿಯಲು ಪ್ರಯತ್ನಿಸುತ್ತಿವೆ ಸರ್ಕಾರದ ವಕ್ತಾರ ಅಲಿ ಬಹದೋರಿ ಜಹ್ರೋಮಿ ತಿಳಿಸಿದ್ದಾರೆ.
ಕಳೆದ ವರ್ಷ ಹಿಜಾಬ್ ಧರಿಸದ ಕಾರಣ ಯುವತಿಯೊಬ್ಬಳ ಮೇಲೆ ಆಡಳಿತಾಧಿಕಾರಿಗಳು ಹಲ್ಲೆ ನಡಿಸಿದ್ದರಿಂದ ಯುವತಿ ಸಾವನ್ನಪ್ಪಿದ್ದಳು. ಆಕೆಯ ಸಾವಿನಿಂದಾಗಿ ಇರಾನ್ ಆದ್ಯಂತ ಪ್ರತಿಭಟನೆಗಳು ವ್ಯಾಪಕವಾಗಿ ನಡೆದಿದ್ದವು.
Hundreds Of Girls Poisoned In Iran To Stop Them From Going To School