ಒಂದೆಡೆ ಇಡೀ ದೇಶವೇ ಕೊರೊನಾ ಬಿಕ್ಕಟ್ಟು ಲಾಕ್ ಡೌನ್ ನಿಂದ ಮಾನಸಿಕವಾಗಿ, ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿವೆ. ಆದ್ರೆ ಇಂತಹ ಕಠಿಣ ಪರಿಸ್ಥಿತಿಯಲ್ಲೂ ಕೆಲ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಹಣ ಪೀಕುವ ಮಾರ್ಗ ಹಿಡಿದಿವೆ. ಇದಕ್ಕೆ ಪೂರಕವೆಂಬAತೆ ಕೋಲಾರದ ದೇವರಾಜ್ ಅರಸು ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಲಾಕ್ ಡೌನ್ ಮಧ್ಯೆಯೇ ಫೀಸ್ ಕಟ್ಟುವಂತೆ ಪೋಷಕರಿಗೆ ಒತ್ತಡ ಹೇರುತ್ತಿರುವ ವಿಚಾರ ಬಯಲಾಗಿದೆ. ಜುಲೈ ೧೫ರ ಒಳಗೆ ಲಕ್ಷ ಲಕ್ಷ ರೂಪಾಯಿ ಫೀಸ್ ಭರ್ತಿ ಮಾಡದೆ ಇದ್ದಲ್ಲಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಕಾಲೇಜು ಆಡಳಿತ ಮಂಡಳಿ ಪೋಷಕರಿಗೆ ಎಚ್ಚರಿಸಿದೆ.
ಇದೀಗ ನೂರಾರು ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನ ಸ್ಥಿತಿಯಲ್ಲಿದ್ದು, ಪೋಷಕರು ನೆರವಿಗಾಗಿ ರ್ಕಾದರದ ಮೊರೆ ಹೋಗಿದ್ದಾರೆ. ಹಣ ಕಟ್ಟಲು ಕಾಲಾವಕಾಶ ಮಾಡಿಕೊಡಬೇಕು. ಈ ಕುರಿತಾಗಿ ಸರ್ಕಾರ ಕಾಲೇಜು ಆಡಳಿತ ಮಂಡಳಿಯೊAದಿಗೆ ಚರ್ಚಿಸಿ ಮನವೊಲಿಸಬೇಕು ಎಂಬುದು ಪೋಷಕರ ಮನವಿಯಾಗಿದೆ.