ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಮತ್ತು ರಾಜಕೀಯೇತರ ಕಾರಣಗಳಿಂದ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ತಮ್ಮ ಬಿಗಿಭದ್ರತೆಯ ನಡುವೆಯೂ ಶಿಷ್ಟಾಚಾರ ಬದಿಗೊತ್ತಿ ಜನರತ್ತ ಧಾವಿಸುವುದು, ಅವರ ಕೈಕುಲುಕುವುದು, ಮಕ್ಕಳನ್ನು ಮಾತನಾಡಿಸುವುದು ಕೂಡ ಆಗಾಗ ಸುದ್ದಿಯಾಗುವುದುಂಟು.
ಇದೀಗ ಪ್ರಧಾನಿ ಮೋದಿ ಉತ್ತರ ಪ್ರದೇಶದ ಖಾದ್ಯವಾದ ‘ಲಿಟ್ಟಿ-ಚೋಖಾ’ ಸವಿದು, ಮಣ್ಣಿನ ಕುಡಿಕೆಯಲ್ಲಿ ಚಹಾ ಕುಡಿದು ಸುದ್ದಿಯಾಗಿದ್ದಾರೆ.
ಬುಧವಾರ ಬೆಳಗಿನ ಸಚಿವ ಸಂಪುಟ ಸಭೆಯ ನಂತರ ಪ್ರಧಾನಿ ಮೋದಿ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯ ದೆಹಲಿಯ ರಾಜ್ಪಥ್ ಬಳಿ ಆಯೋಜಿಸಿದ್ದ ‘ಹುನಾರ್ ಹಾತ್’ ಎಂಬ ಕರಕುಶಲ ಮೇಳಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದರು.50 ನಿಮಿಷಗಳ ಕಾಲ ಅಲ್ಲಿಯೇ ಕಾಲ ಕಳೆದ ಅವರು, ಅಲ್ಲಿದ್ದ ಮಳಿಗೆಗಳ ಮಾಲೀಕರ ಜೊತೆಗೆ ಮಾತುಕತೆ ನಡೆಸಿದರಲ್ಲದೆ ಹಲವರ ಸೆಲ್ಫಿಗೆ ಮುಖವೊಡ್ಡಿದರು. ಕುರುಕು ತಿಂಡಿಯ ಮಳಿಗೆಗೆ ತೆರಳಿ, ತಮಗಿಷ್ಟವಾದ ಉತ್ತರ ಪ್ರದೇಶದ ಖಾದ್ಯವಾದ ‘ಲಿಟ್ಟಿ-ಚೋಖಾ’ ಸವಿದು, ಮಣ್ಣಿನ ಕುಡಿಕೆಯಲ್ಲಿ ಚಹಾ ಕುಡಿದರು.
ನಂತರ, ಅಂಗಡಿಯಾತನಿಗೆ ತಾವು ತಿಂದ ತಿಂಡಿ ಮತ್ತು ಚಹಾಗೆ 120 ರೂ. ಬಿಲ್ ಹಣ ಪಾವತಿಸಿ, ಆತನಿಗೊಂದು ಧನ್ಯವಾದ ಹೇಳಿ ಮುನ್ನಡೆದರು.
ಅಂತ್ಯಸಂಸ್ಕಾರಕ್ಕೆ ಜಾಗ ಹುಡುಕಿ ಸುಸ್ತಾದ ಸರ್ಕಾರ: ಖಾಸಗಿ ಭೂಮಿ ಖರೀದಿಯೇ ಏಕೈಕ ದಾರಿ ; ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಹಾಯಕತೆ!
ಬೆಂಗಳೂರು: ರಾಜ್ಯದಲ್ಲಿ ಬದುಕಿರುವವರಿಗಷ್ಟೇ ಅಲ್ಲ, ಮೃತಪಟ್ಟವರಿಗೂ ಮಣ್ಣಾಗಲು ಜಾಗವಿಲ್ಲದಂತಹ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ. ಲಭ್ಯವಿದ್ದ ಸರ್ಕಾರಿ ಜಮೀನ್ನೆಲ್ಲಾ ಇತರೆ ಉದ್ದೇಶಗಳಿಗೆ ಹಂಚಿಕೆ ಮಾಡಿ, ಇದೀಗ ಸ್ಮಶಾನಕ್ಕೆ ಜಾಗವಿಲ್ಲದೆ...








