ಮಂಗಳೂರು, ಮೇ 16 : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ‘ಅಂಫಾನ್’ ಎಂಬ ಹೆಸರಿನ ಚಂಡಮಾರುತ ಸೃಷ್ಟಿಯಾಗಿದೆ.
ಸದ್ಯದ ಮಾಹಿತಿ ಪ್ರಕಾರ ಚಂಡಮಾರುತ ಮೇ. 18ರಂದು ತೀವ್ರ ಸ್ವರೂಪ ಪಡೆಯಲಿದ್ದು, ಕರಾವಳಿ ಭಾಗದಲ್ಲಿ ಭೀತಿ ಉಂಟಾಗಿದೆ. ಈಗಾಗಲೇ ರಾಜ್ಯದ ಕರಾವಳಿಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಚಂಡಮಾರುತ ಮುಂಬರುವ ಮುಂಗಾರು ಪ್ರವೇಶದ ಮೇಲೆ ಪರಿಣಾಮ ಬೀರಬಹುದು ಎಂದು ಹವಾಮಾನ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗಿದ್ದರೆ, ಅರಬ್ಬಿ ಸಮುದ್ರದಲ್ಲಿ ನಿಮ್ನ ಒತ್ತಡ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಮೂರು ದಿನಗಳ ಕಾಲ ದಕ್ಷಿಣ ಒಳನಾಡು, ಕರಾವಳಿ ಭಾಗದಲ್ಲಿ ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.
ರುಚಿಕರವಾದ ತೊಗರಿಕಾಳಿನ ಬಾತ್ ಮಾಡೋದು ಹೇಗೆ..?
ರುಚಿಕರವಾದ ತೊಗರಿಕಾಳಿನ ಬಾತ್ ಮಾಡೋದು ಹೇಗೆ..ತಿಳಿಯೋಣ ಬನ್ನಿ.. ಬೇಕಾಗುವ ಪದಾರ್ಥಗಳು ತೊಗರಿಕಾಳು: 1 ಕಪ್ ಬಾಸುಮತಿ ಅಕ್ಕಿ: 1 ಕಪ್ ರುಚಿಗೆ ಉಪ್ಪು ನಿಂಬೆರಸ: 4 ಚಮಚ...