ಮಡದಿಗಾಗಿ ಚಂದ್ರನಲ್ಲಿ 3 ಎಕರೆ ಖರೀದಿಸಿದ ಪತಿ!
ರಾಜಸ್ಥಾನ : ಚಂದ್ರನಿಗೂ ಪ್ರೇಮಿಗಳಿಗೂ ಒಂದು ರೀತಿಯಲ್ಲಿ ಅವಿನಾಭವ ಸಂಬಂಧ ಇದೆ. ಪ್ರಿಯಕರ ಚಂದ್ರನನ್ನ ನೋಡುತ್ತಾ ಪ್ರೇಯಸಿ ಬಗ್ಗೆ ಯೋಚಿಸೋದು.. ಪ್ರೇಯತಮೆ ತನ್ನ ಪ್ರಿಯಕರನ್ನ ಚಂದ್ರನಲ್ಲಿ ನೋಡಿಕೊಳ್ಳುತ್ತಾ ಕಾಲ ಕಳೆಯುತ್ತಾರೆ. ಇದಲ್ಲದೆ ಸಾಮಾನ್ಯವಾಗಿ ಎಲ್ಲರಿಗೂ ಚಂದ್ರನ ಮೇಲೆ ವಿಶೇಷ ಪ್ರೀತಿ. ಚಂದ್ರನ ಬಗ್ಗೆ ವಿಶೇಷವಾದ ಆಸಕ್ತಿ ಹೊಂದಿರುತ್ತಾರೆ. ಇದಕ್ಕಾಗಿಯೇ ನಮ್ಮ ಸಿನಿಮಾದಲ್ಲಿ ಚಂದ್ರನನ್ನು ಹುಡುಗೊರೆಯಾಗಿ ಕೇಳುವುದು.. ಚಂದ್ರನ ಮೇಲೆ ಹಾಡುಗಳು ಬಂದಿವೆ.
ಚಂದ್ರನ ಮೇಲಿರುವ ವಿಶೇಷ ಆಕರ್ಷಣೆ, ಆಸಕ್ತಿ ಯಿಂದಲೇ ಅನೇಕರಿಗೆ ಚಂದ್ರನಲ್ಲಿ ಜಾಗ ಖರೀದಿ ಮಾಡಬೇಕು ಎಂದು ಕನಸಿರುತ್ತದೆ. ಆದರೆ, ಈ ಕನಸು ರಾಜಸ್ಥಾನದ ದಂಪತಿ ಜೀವನದಲ್ಲಿ ನನಸಾಗಿದೆ.
ಹೌದು..! ರಾಜಸ್ಥಾನ ಮೂಲದ ಧಮೇರ್ಂದ್ರ ಅನಿಜಾ ಎಂಬುವರು ತಮ್ಮ 8ನೇ ವಿವಾಹ ವಾರ್ಷಿಕೋತ್ಸವ ದಿನದಂದು ಪತ್ನಿ ಸಪ್ನಾ ಅನಿಜಾಗೆ ಚಂದ್ರನ ನೆಲದಲ್ಲಿ ಖರೀದಿಸಿದ ಮೂರು ಎಕರೆ ಭೂಮಿ ಉಡುಗೊರೆಯಾಗಿ ನೀಡಿದ್ದಾರೆ. ಇದು ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ. ಧಮೇರ್ಂದ್ರ ಅವರು ಈ ಭೂಮಿಯನ್ನ ಅಮೆರಿಕದ ನ್ಯೂಯಾರ್ಕ್ ನಗರದ ಲೂನಾ ಸೊಸೈಟಿ ಇಂಟರ್‍ನ್ಯಾಷನಲ್ ಎಂಬ ಸಂಸ್ಥೆಯ ಮೂಲಕ ಖರೀದಿಸಿದ್ದಾರೆ.
ಈ ಕುರಿತು ಮಾತನಾಡಿದ ಧಮೇರ್ಂದ್ರ ಡಿಸೆಂಬರ್ 24ರಂದು ನಮ್ಮ ವಿವಾಹ ವಾರ್ಷಿಕೋತ್ಸವ. ನಾನು ಅವಳಿಗೆ ಏನಾದರೂ ವಿಶೇಷವಾದದ್ದನ್ನು ಮಾಡಲು ಬಯಸಿದ್ದೆ. ಅದರಂತೆ ನಾನು ಚಂದ್ರನ ಮೇಲೆ ಭೂಮಿ ಖರೀದಿಸಿ ನೀಡಿದ್ದೇನೆ” ಸಂತಸ ಹಂಚಿಕೊಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









