ಹುಬ್ಬಳ್ಳಿ ( Hubli ) ನೇಣು ಬಿಗಿದು ಪತ್ನಿಯನ್ನ ಕೊಂದ ಪತಿ
ಹುಬ್ಬಳ್ಳಿ : ಪತ್ನಿಯ ಮೇಲಿನ ಅನುಮಾನದಿಂದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನ ಕೊಲೆ ಮಾಡಿ ನೇಣು ಹಾಕಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆಡಿದೆ.
ರೇಣುಕಾ ಕೊಲೆಯಾದ ಮಹಿಳೆಯಾಗಿದ್ದು, ಮಹಾದೇವಪ್ಪ ಕೊಲೆ ಆರೋಪಿಯಾಗಿದ್ದಾನೆ.
ಹುಬ್ಬಳಿಯ ಲಿಂಗರಾಜನಗರದ ಬಳಿ ಇರುವ ಹನುಮಂತನಗರ ಬಡಾವಣೆಯಲ್ಲಿ ವಾಸವಿದ್ದ ಮಹಾದೇವಪ್ಪ, ಮೊದಲ ಗಂಡನನ್ನು ಬಿಟ್ಟು ಬಂದಿದ್ದ ಕೋಲ್ಕತಾ ಮೂಲದ ಮಹಿಳೆ ರೇಣುಕರನ್ನು ಕಳೆದ ವರ್ಷ ಮದುವೆಯಾಗಿದ್ದನು.
ಆದರೆ ಪತ್ನಿಯ ಮೇಲೆ ಸದಾ ಸಂಶಯ ವ್ಯಕ್ತಪಡಿಸುತ್ತಿದ್ದ ಪತಿ ಮಹಾದೇವಪ್ಪ ಇಂದು ಬೆಳಗ್ಗೆ ಪತ್ನಿಯನ್ನು ಮನೆಯಲ್ಲೇ ನೇಣು ಬಿಗಿದು ಕೊಲೆ ಮಾಡಿದ್ದಾನೆ.
ಬಳಿಕ ಕೊಲೆ ಮಾಡಿದ ನಂತರ ಪತ್ನಿ ರೇಣುಕಾ ನೇಣು ಹಾಕಿಕೊಂಡಿದ್ದಾಳೆಂದು ಬಿಂಬಿಸುವ ಪ್ರಯತ್ನವನ್ನ ಮಾಡಿದ್ದಾನೆ.
ಇನ್ನು ಪೊಲೀಸರ ವಿಚಾರಣೆ ವೇಳೆ ಮಹಾದೇವಪ್ಪ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಸದ್ಯ ಮಹದೇವಪ್ಪ ವಿದ್ಯಾನಗರ ಪೊಲೀಸರ ವಶದಲ್ಲಿದ್ದು, ತನಿಖೆ ಮುಂದುವರಿಸಿದ್ದಾರೆ.










