ಬೆಂಗಳೂರು: ಮದುವೆಯಾದ ಹೆಂಡತಿಗೆ ಮೊದಲ ರಾತ್ರಿಯೇ ಸೈಕೋ ಗಂಡನೊರ್ವ ನೀಲಿಚಿತ್ರ ತೋರಿಸಿ ಕಿರುಕುಳ ನೀಡಿದ್ದು, ಗಂಡನ ವಿರುದ್ಧ ಹೆಂಡತಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಬೆಂಗಳೂರಿನ ಚಾಮರಾಜಪೇಟೆ ನಿವಾಸಿ ಹರ್ಷವರ್ಧನ್ ಮದುವೆಯಾದ ಮೊದಲ ರಾತ್ರಿ ತನ್ನ ಹೆಂಡತಿಗೆ ಪೋರ್ನ್ ವೀಡಿಯೋವೊಂದನ್ನ ತೋರಿಸಿ ಅದೇ ರೀತಿ ಸೆಕ್ಸ್ ಮಾಡೋಣ ಎಂದು ಚಿತ್ರಹಿಂಸೆ ನೀಡಿದ್ದಾನಂತೆ. ಪತಿಯ ಈ ನಡವಳಿಕೆಯಿಂದ ಗಾಬರಿಯಾದ ಪತ್ನಿ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಆಗ ಎರಡೂ ಕುಟುಂಬದವರು ಮಾತುಕತೆ ನಡೆಸಿ ಹರ್ಷವರ್ಧನನ್ನ ಸಮಾಧಾನಗೊಳಿಸಿದ್ದರಂತೆ. ಆದ್ರೆ ಇದಾದ ಬಳಿಕ ಹರ್ಷವರ್ಧನ್ ಮತ್ತೊಂದು ರೀತಿಯಲ್ಲಿ ಚಿತ್ರ ಹಿಂಸೆ ನೀಡಲು ಪ್ರಾರಂಭಿಸಿದ್ದಾನೆ. ಇದರಿಂದ ಬೇಸತ್ತ ಪತ್ನಿ ಗಂಡನ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ
2018ರಲ್ಲಿ ಈ ಮಹಿಳೆ ಜೊತೆ ಹರ್ಷವರ್ಧನ್ ವಿವಾಹವಾಗಿತ್ತು.. ಮದುವೆ ವೇಳೆ ಮಹಿಳೆಯ ಪೋಷಕರು ಲಕ್ಷಾಂತರ ರೂಪಾಯಿಗಳ ಒಡವೆ ನೀಡಿ ಮದುವೆ ಮಾಡಿಕೊಟ್ಟಿದ್ದರು. ಹರ್ಷವರ್ಧನ್ ಉತ್ತಮ ಕೆಲಸದಲ್ಲಿ ಇರೋದಾಗಿ ಹೇಳಿ ಮದುವೆಯಾಗಿದ್ದ ಎನ್ನಲಾಗಿದೆ. ಆದರೆ ಎಲ್ಲೂ ಕೆಲಸಕ್ಕೆ ಹೋಗದ ಹರ್ಷವರ್ಧನ್ ಸುಮ್ಮನೆ ಕಾಲಹರಣ ಮಾಡ್ತಿದ್ದನಂತೆ. ಅಲ್ಲದೆ ಹಣಕ್ಕಾಗಿ ದಿನಂಪ್ರತಿ ಪೀಡುಸುತ್ತಿದ್ದನಂತೆ. ಈ ಮಧ್ಯೆ ಪತ್ನಿಯ ಆಫೀಸ್ ಗೆ ಹೋಗಿ ಆಕೆಯ ಸ್ಯಾಲರಿ ಅಡ್ವಾನ್ಸ್ ಹಣವನ್ನೂ ಈತ ಪಡೆದಿದ್ದಾನಂತೆ. ಇದರಿಂದ ತಾಳ್ಮೆ ಕಳೆದುಕೊಂಡ ಹರ್ಷವರ್ಧನ್ ನ ಪತ್ನಿಯ ಕುಟುಂಬದವರು ಹರ್ಷ ವರ್ಧನ್ ಮತ್ತು ಆತನ ಕುಟುಂಬದ ಮೇಲೆ ಪೊಲೀಸರಿಗೆ ದೂರು ನೀಡಿದ್ದಾರೆ.








