ಭಾರತದ ಮಾಜಿ ಫುಟ್ಬಾಲ್ ಆಟಗಾರ ಮೆಹ್ತಾಬ್ ಹುಸೇನ್ ಅವರು ಬಿಜೆಪಿ ಸೇರಿ ಕೇವಲ 24 ಗಂಟೆ ಕಳೆಯುವ ವೇಳೆಗೆ ರಾಜಕೀಯದಿಂದ ಹೊರಗುಳಿದಿದ್ದಾರೆ. ಫುಟ್ಬಾಲ್‍ನಲ್ಲಿ ಮಿಡ್ ಫೀಲ್ಡ್ ಜನರಲ್ ಆಗಿ ಹೆಚ್ಚು ಖ್ಯಾತಿ ಪಡೆದಿರುವ ಪಶ್ಚಿಮ ಬಂಗಾಳದ ಮೆಹ್ತಾಬ್ ಹುಸೇನ್ ಇತ್ತೀಚೆಗಷ್ಟೇ ಬಿಜೆಪಿಗೆ ಸೇರುವ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ರು. ಆದ್ರೀಗ 24 ಗಂಟೆ ಕಳೆಯುವ ವೇಳೆಗೆ ರಾಜಕೀಯದಿಂದ ದೂರವಾಗಿದ್ದು, ಅವರ ನಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಸ್ಪಷ್ಟನೆ ನಿಡಿರುವ ಮೆಹ್ತಾಬ್ ರಾಜಕೀಯಕ್ಕೆ ಸೇರಿದ ನನ್ನ ನಿರ್ಧಾರದಿಂದ ಕುಟುಂಬಸ್ಥರು ಮತ್ತು ಆಪ್ತರು ಆತಂಕ ವ್ಯಕ್ತಪಡಿಸಿದ್ದರು. ಹೀಗಾಗಿಯೇ ನಾನು ರಾಜಕೀಯದಿಂದ ಹೊರಗುಳಿದಿದ್ದೇನೆ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ ಹುಸೇನ್ ರಾಜಕೀಯದಿಂದ ದೂರವಾಗಲು ತೃಣಮೂಲ ಕಾಂಗ್ರೆಸ್ ನಿಂದ ಬಂದ ಬೆದರಿಕೆಗಳೇ ಕಾರಣ ಎಂದು ಬಿಜೆಪಿ ಕಾರ್ಯದರ್ಶಿ ಸಯಂತನ್ ಬಸು ಆರೋಪಿಸಿದ್ದಾರೆ.
ದಿನ ಭವಿಷ್ಯ (11-02-2026) Daily Horoscope. ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
ದಿನ ಭವಿಷ್ಯ: 11-02-2026 ಮೇಷ ರಾಶಿ ಇಂದು ನಿಮಗೆ ಮಿಶ್ರ ಫಲಗಳು ದೊರೆಯಲಿವೆ. ಕೆಲಸದ ಸ್ಥಳದಲ್ಲಿ ಒತ್ತಡವಿದ್ದರೂ ಅದನ್ನು ನಿಭಾಯಿಸುವ ಶಕ್ತಿ ನಿಮಗೆ ಇರುತ್ತದೆ. ಆರ್ಥಿಕವಾಗಿ ಸ್ವಲ್ಪ...








