ADVERTISEMENT
Friday, February 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಆಫ್ರಿಕಾದ ವಿಲಕ್ಷಣ ಚುಕ್ಕೆ ಕತ್ತೆ ಕಿರುಬ ಎಂಬ ಗಂಡಿನ ನಕಲಿ ವೇಷಧಾರಿ ಜೀವಿಯ ಈ ವಿಶೇಷತೆ ಗೊತ್ತಾ?

admin by admin
November 16, 2021
in Newsbeat, Saaksha Special, ಎಸ್ ಸ್ಪೆಷಲ್
hyena saakshatv
Share on FacebookShare on TwitterShare on WhatsappShare on Telegram

ಆಫ್ರಿಕಾದ ವಿಲಕ್ಷಣ ಚುಕ್ಕೆ ಕತ್ತೆ ಕಿರುಬ ಎಂಬ ಗಂಡಿನ ನಕಲಿ ವೇಷಧಾರಿ
ಜೀವಿಯ ಈ ವಿಶೇಷತೆ ಗೊತ್ತಾ?

ಜಗತ್ತಿನಾದ್ಯಂತ ಹೈನಾದ ಒಂಬತ್ತು ಜಾತಿ/ಪ್ರಬೇಧಗಳಿದ್ದು, ನಮ್ಮ ದೇಶದಲ್ಲಿ Striped Hyena
ಅಥವಾ ಪಟ್ಟೆ ಕತ್ತೆ ಕಿರುಬವನ್ನು ನೋಡಬಹುದು. ಈಗ ನಾನು ಬರೆಯುತ್ತಿರುವುದು ಆಫ್ರಿಕಾದ ಕತ್ತೆ
ಕಿರುಬ (Spotted Hyena) ಬಗ್ಗೆ.

Related posts

No more worries about debt problems. For these three days, go and see him. Even the burden of debt that bothers you the most will disappear.

ಇನ್ನು ಸಾಲದ ಸಮಸ್ಯೆಗಳ ಚಿಂತೆ ಬೇಡ. ಈ ಮೂರು ದಿನ, ಹೋಗಿ ಅವನನ್ನು ನೋಡಿ. ಹೆಚ್ಚು ತೊಂದರೆ ಕೊಡುವ ಸಾಲದ ಹೊರೆಯೂ ಮಾಯವಾಗುತ್ತದೆ.

February 13, 2026
the elite badminton team prasanna yedekeri

ಜಾಹೀರಾತು ಲೋಕದ ಜಾದುಗಾರನ ‘ದಿ ಎಲೈಟ್ ಬ್ಯಾಡ್ಮಿಂಟನ್ ಕ್ಲಬ್ ‘ಸಿಎಂ ಕಪ್‌ನಲ್ಲೂ ಮೋಡಿ ಮಾಡುತ್ತಾ..?

February 13, 2026

hyena africa saakshatvನಮ್ಮ ಪ್ರಯಾಣ ಈಗ ಆಫ್ರಿಕಾ ಕಡೆಗೆ. ಆಫ್ರಿಕಾ ಎಂದೊಡನೆ ಹೇಳಬೇಕಿಲ್ಲ, ಅದು ವನ್ಯಜೀವಿಗಳ ತವರು, ಕೃಗರ್, ಸರಂಗೇಟಿಯಂತ ದೊಡ್ಡ ದೊಡ್ಡ ರಾಷ್ಟ್ರೀಯ ಉದ್ಯಾನವನಗಳು ಅಲ್ಲಿವೆ, ಆಫ್ರಿಕಾ ಆನೆ, ಜೀರಾಫೆ, ಹಿಪ್ಪೊಗಳ ಸಮೂಹವನ್ನೇ ನೋಡಬಹುದು. ನವೆಂಬರ್ ತಿಂಗಳಲ್ಲಿ ಮಳೆಗಾಲ ಶುರುವಾದಂತೆ ವೈಲ್ಡ್ ಬೀಸ್ಟ್ ನಂತಹ ಸಸ್ಯಹಾರಿಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ಹೊಸದಾಗಿ ಹುಟ್ಟುವ ಹುಲ್ಲನ್ನು ಅರಸುತ್ತಾ ಸಾಗುವ ಮಹಾ ವಲಸೆ (Great migration) ನೋಡಬಹುದು, ಆಫ್ರಿಕಾ ಎಂದೊಡನೆ ಅದು ಪ್ರಾಣಿಗಳ ಸ್ವರ್ಗ ಎನ್ನುವ ಕಲ್ಪನೆ ಮನಸ್ಸಲ್ಲಿ ಮೂಡುತ್ತದೆ.

ಇಂತಹ ಪ್ರಾಣಿಗಳ ಸ್ವರ್ಗದಲ್ಲಿ ಚುಕ್ಕೆ ಕತ್ತೆ ಕಿರುಬ (Spotted Hyena) ಎಂಬ ವಿಲಕ್ಷಣ ಪ್ರಾಣಿ ಇದೆ. ನೋಡಲು ಅಸಹ್ಯ ಎನಿಸುವ ಮೈಕಟ್ಟು, ಮನುಷ್ಯ ನಕ್ಕಂತೆ ಹೊರಡುವ ಧ್ವನಿ, ಸಿಂಹಗಳನ್ನು ಹೆದರಿಸಿ ಅವುಗಳ ಬೇಟೆ ಕಸಿಯಬಲ್ಲ ಸಾಮರ್ಥ್ಯ ಹೊಂದಿರುವ ಇವು ಜಾಡಮಾಲಿಗಳಂತೆ (scavenger) ಕಂಡರೂ ಸ್ವತಃ ಬೇಟೆಯಾಡಬಲ್ಲವು. ಈ ಜಾತಿಯಲ್ಲಿ ಹೆಣ್ಣು ಕತ್ತೆ ಕಿರುಬವನ್ನ ಗಂಡುಬೀರಿ ಎನ್ನಬಹುದು. ಯಾಕೆಂದರೆ ಗಂಡಸ್ತನ ನಿರ್ಧರಿಸಬಲ್ಲ ಟೆಸ್ಟೋಸ್ಟೆರಾನ್ ಹಾರ್ಮೋನು ಇವಳಲ್ಲಿ ಗಂಡಿಗಿಂತ 3 ಪಟ್ಟು ಅಧಿಕ, ಹಾಗಾಗಿ ಮಾಂಸಖಂಡಗಳೂ ಬಲಿಷ್ಠ, ಗಂಡಿಗಿಂತಲೂ ಬಲಶಾಲಿ ಹಾಗು ಗಾತ್ರದಲ್ಲಿ ದೊಡ್ಡವಳು, ಇಡೀ ಗುಂಪನ್ನು ಆಳುವುದು ಹೆಣ್ಣು; ಇವಳು ಹೆಚ್ಚು
ಆಕ್ರಮಣಕಾರಿಯೂ ಹೌದು.

ವಿಚಿತ್ರ ಸಂಗತಿಯೆಂದರೆ ಹೆಣ್ಣು ಹಯಿನಾಗಳಿಗೆ ಸುಮಾರು 15-20 ಸೆಂಮೀ ಉದ್ದವಿರುವ ಹಾಗು ನಿಮಿರುವ ಸಾಮರ್ಥ್ಯ ಇರುವ ಗಂಡಿನ ಜನನಾಂಗವಿದ್ದು ಇದಕ್ಕೆ Pseudopenis or Penile- Clitoris ಎನ್ನುತ್ತಾರೆ. ಕನ್ನಡದಲ್ಲಿ ಇದಕ್ಕೆ ಹುಸಿ ಶಿಶ್ನ ಎನ್ನಬಹುದು. ವಾಸ್ತವದಲ್ಲಿ ಇದು ಹೆಣ್ಣಿನ ಚಂದ್ರನಾಡಿ ಅಥವಾ ಭಗಾಂಕುರದ ಮುಂದುವರೆದ ಭಾಗವಾಗಿದ್ದು ಶಿಶ್ನದಂತೆ ಕಾಣುತ್ತದೆ. ಇದು ಹೆಣ್ಣಿನ ಜನನಾಂಗಕ್ಕೆ ಸಂಪರ್ಕ ಹೊಂದಿದ್ದು ಮರಿಗಳನ್ನು ಹಾಕುವಾಗ ಜನನ ಕಾಲುವೆಯಂತೆ ಕೆಲಸ ಮಾಡುತ್ತದೆ.ಹಾಗಾಗಿ ಇದು ನಿಜವಾದ ಶಿಶ್ನವಲ್ಲ. ಸಾಮಾನ್ಯವಾಗಿ ಸಸ್ತನಿಗಳಲ್ಲಿ ಗಂಡುಗಳು ವೃಷಣಗಳನ್ನು ಹೊಂದಿರುತ್ತವೆ, ಇವು ಸಂತಾನೋತ್ಪತ್ತಿಗೆ ಬಹುಮುಖ್ಯ. ಎರಡು ಬೀಜಗಳು ಚರ್ಮದ ಚೀಲದೊಳಗೆ ಶಿಶ್ನದ ಅಡಿಭಾಗದಲ್ಲಿ ಇರುತ್ತವೆ. ಇದು ಗಂಡಿಗೆ ಸಾಮಾನ್ಯ ಆದರೆ ಹೆಣ್ಣು ಚುಕ್ಕೆ ಕತ್ತೆ ಕಿರುಬಗಳಲ್ಲಿಯೂ ವೃಷಣದ ರಚನೆ ಇದೆ. ಇದು ಕೊಬ್ಬಿನಿಂದ ಕೂಡಿದ ಚೀಲವಾಗಿದ್ದು ಅಸಲಿ ವೃಷಣವಲ್ಲ. ಇಲ್ಲಿ ಬಹಳ ಮುಖ್ಯವಾದ ಸಮಸ್ಯೆ ಎಂದರೆ ಹೈನಾಗಳಲ್ಲಿ ಗಂಡು ಹೆಣ್ಣನ್ನು ಗುರುತಿಸುವುದು. ಬಾಹ್ಯ ರಚನೆಯಿಂದ ಗಂಡು ಹೆಣ್ಣನ್ನು ಗುರುತಿಸುವುದು ತುಂಬಾ ಕಷ್ಟ. ಪರಿಣಿತರು ಶಿಶ್ನದ ಮುಂದೊಗಲನ್ನು ಗಮನಿಸಿ ನಿಖರವಾಗಿ ಗಂಡು ಹೆಣ್ಣನ್ನು ಗುರುತಿಸುತ್ತಾರೆ.

ಮಿಲನ ತುಂಬಾ ಕಷ್ಟ: ಈ ಜಾತಿಯ ಹಯಿನಾಗಳಲ್ಲಿ ಮಿಲನ ಕ್ರಿಯೆ ಸುಲಭವಲ್ಲ, ಗಂಡು ಹೆಣ್ಣು ಕೂಡುವಾಗ ಹೆಣ್ಣಿನ ಹುಸಿ ಶಿಶ್ನವು ನಾವು ಕಾಲು ಚೀಲ ಮಡಚಿದಂತೆ ಮಡಚಿ ದೇಹದೊಳಗೆ ಸೇರಬೇಕು, ಆಗ ಮಾತ್ರ ಮಿಲನ ಕ್ರಿಯೆ ನಡೆಸಲು ಸಾಧ್ಯ. ನಿಮಿರುವ ಸಾಮರ್ಥ್ಯ ಇರುವ ಹುಸಿ ಶಿಶ್ನವನ್ನು ಹೊಂದಿದ ಎರಡು ಹೆಣ್ಣುಗಳು ಕೂಡ ಮಿಲನ ಕ್ರಿಯೆ ನಡೆಸುವುದಿಲ್ಲ, ಇವುಗಳಲ್ಲಿ ಸಲಿಂಗಕಾಮ ಇಲ್ಲ, ಮಿಲನಕ್ಕೆ ಹೆಣ್ಣು ಗಂಡಿನ ಅಗತ್ಯವಿದೆ. ಗಂಡಿನಂತೆ ವೇಷ ಧರಿಸಿದ್ದರೂ ಗರ್ಭಧಾರಣೆ ಹೆಣ್ಣಿಗೆ ಬಲು ಕಷ್ಟ, ಮರಿ ಹಾಕುವಾಗ ಹುಸಿ ಶಿಶ್ನದ ಕಾಲುವೆಯಲ್ಲಿ (Pseudopenis canal) ಮರಿಗಳು ಸಿಲುಕಿ ಉಸಿರು ಕಟ್ಟಿ ಸಾಯುತ್ತವೆ, ಕೆಲವು ಸಲ ತಾಯಿಯೂ ಸಾಯುತ್ತದೆ.

ಸಿಂಹಗಳಿಗೆ ಆಗಾಗ ತೊಂದರೆ ಕೊಡುವ ಇವುಗಳು ಮಾಂಸಹಾರಿಗಳ ಬೇಟೆಯನ್ನು ಕಸಿದು ತಿನ್ನುತ್ತವೆ, ಗಟ್ಟಿ ಎಲುಬನ್ನು ಕಡಿದು ಪುಡಿಮಾಡಬಲ್ಲವು. ಆವಾಸ ನಾಶ, ಉರುಳುಗಳು, ವಿನೋದದ ಬೇಟೆ, ವಿಷಪ್ರಾಶನ ಇವುಗಳಿಗೆ ಕಂಟಕವಾಗಿದೆ.

ಕೃಪೆ : ಹಿಂದವೀ ಸ್ವರಾಜ್ಯ

-ನಾಗರಾಜ್ ಬೆಳ್ಳೂರು, ವನ್ಯಜೀವಿ ಪರಿಸರ ಬರಹಗಾರ
ನಿಸರ್ಗ ಕನ್ಜರ್ವೇಷನ್ ಟ್ರಸ್ಟ್

Tags: #saakshatvAnimalhyenaPseudopenisPseudopenis canalSouth AfricaSpotted HyenaStriped Hyena
ShareTweetSendShare
Join us on:

Related Posts

No more worries about debt problems. For these three days, go and see him. Even the burden of debt that bothers you the most will disappear.

ಇನ್ನು ಸಾಲದ ಸಮಸ್ಯೆಗಳ ಚಿಂತೆ ಬೇಡ. ಈ ಮೂರು ದಿನ, ಹೋಗಿ ಅವನನ್ನು ನೋಡಿ. ಹೆಚ್ಚು ತೊಂದರೆ ಕೊಡುವ ಸಾಲದ ಹೊರೆಯೂ ಮಾಯವಾಗುತ್ತದೆ.

by admin
February 13, 2026
0

ಇನ್ನು ಸಾಲದ ಸಮಸ್ಯೆಗಳ ಚಿಂತೆ ಬೇಡ. ಈ ಮೂರು ದಿನ, ಹೋಗಿ ಅವನನ್ನು ನೋಡಿ. ಹೆಚ್ಚು ತೊಂದರೆ ಕೊಡುವ ಸಾಲದ ಹೊರೆಯೂ ಮಾಯವಾಗುತ್ತದೆ. ಇಂದು ನಾವು ಕೀ...

the elite badminton team prasanna yedekeri

ಜಾಹೀರಾತು ಲೋಕದ ಜಾದುಗಾರನ ‘ದಿ ಎಲೈಟ್ ಬ್ಯಾಡ್ಮಿಂಟನ್ ಕ್ಲಬ್ ‘ಸಿಎಂ ಕಪ್‌ನಲ್ಲೂ ಮೋಡಿ ಮಾಡುತ್ತಾ..?

by admin
February 13, 2026
0

ಪ್ರಸನ್ನ ಎಡಿಕೇರಿ..! ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ದಿ ಎಲೈಟ್ ಬ್ಯಾಡ್ಮಿಂಟನ್ ತಂಡದ ಮಾಲೀಕ. ಐಎಎಸ್ ಅಧಿಕಾರಿ ಡಾ.ಸೆಲ್ವ ಕುಮಾರ್ ಅವರು ದಿ ಎಲೈಟ್ ಬ್ಯಾಡ್ಮಿಂಟನ್ ತಂಡವನ್ನು...

ಗನ್ ಹಿಡಿದು ‘ಕೈ’ ಮುಖಂಡ ಡ್ಯಾನ್ಸ್… ಕ್ರಮ ನಿಶ್ಚಿತ ಎಂದ ಗೃಹ ಸಚಿವ ಪರಮೇಶ್ವರ್

ಗನ್ ಹಿಡಿದು ‘ಕೈ’ ಮುಖಂಡ ಡ್ಯಾನ್ಸ್… ಕ್ರಮ ನಿಶ್ಚಿತ ಎಂದ ಗೃಹ ಸಚಿವ ಪರಮೇಶ್ವರ್

by Shwetha
February 13, 2026
0

ಗನ್ ಹಿಡಿದು ‘ದುರಂಧರ್’ ಚಿತ್ರದ ಶೈಲಿಯಲ್ಲಿ ನೃತ್ಯ ಮಾಡಿದ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್...

ಫೆ. 19ಕ್ಕೆ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿ ಸಭೆ… ಮಹತ್ವದ ರಾಜಕೀಯ ಚರ್ಚೆಗೆ ಸಜ್ಜು

ಫೆ. 19ಕ್ಕೆ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿ ಸಭೆ… ಮಹತ್ವದ ರಾಜಕೀಯ ಚರ್ಚೆಗೆ ಸಜ್ಜು

by Shwetha
February 13, 2026
0

ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿ ಸಭೆ ಫೆಬ್ರವರಿ 19ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಮುಂದಿನ ರಾಜಕೀಯ ಹಾಗೂ ಸಂಘಟನಾತ್ಮಕ ತಂತ್ರಗಳನ್ನು ರೂಪಿಸಲು ಈ ಸಭೆ ಮಹತ್ವ...

ರಾಜಕೀಯದ ರಣಕಣದಿಂದ ಬಣ್ಣದ ಲೋಕಕ್ಕೆ ಹಾರಿದ ಜೆಡಿಎಸ್ ನಾಯಕ: ನಿರ್ಮಾಪಕನಾಗಿ ಸಾರಾ ಮಹೇಶ್ ಗ್ರ್ಯಾಂಡ್ ಎಂಟ್ರಿ

ರಾಜಕೀಯದ ರಣಕಣದಿಂದ ಬಣ್ಣದ ಲೋಕಕ್ಕೆ ಹಾರಿದ ಜೆಡಿಎಸ್ ನಾಯಕ: ನಿರ್ಮಾಪಕನಾಗಿ ಸಾರಾ ಮಹೇಶ್ ಗ್ರ್ಯಾಂಡ್ ಎಂಟ್ರಿ

by Shwetha
February 13, 2026
0

ರಾಜಕೀಯ ಮತ್ತು ಸಿನಿಮಾ, ಇವೆರಡೂ ಕ್ಷೇತ್ರಗಳು ಸದಾ ಒಂದಕ್ಕೊಂದು ಬೆಸೆದುಕೊಂಡೇ ಸಾಗಿವೆ. ತಮಿಳುನಾಡು, ಆಂಧ್ರಪ್ರದೇಶ ಮಾತ್ರವಲ್ಲದೆ ಕರ್ನಾಟಕದಲ್ಲಿಯೂ ಸಿನಿಮಾ ರಂಗದ ಗಣ್ಯರು ರಾಜಕೀಯಕ್ಕೆ ಬರುವುದು ಹಾಗೂ ರಾಜಕೀಯ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram