ಬೆಂಗಳೂರು : ಹೊಸ ಪ್ರತಿಭೆಗಳಿಗೆ, ವಿಭಿನ್ನ ಕಥೆಗಳಿಗೆ ಕೇರ್ ಅಪ್ ಅಡ್ರೆಸ್ ಸ್ಯಾಂಡಲ್ ವುಡ್. ಇಲ್ಲಿ ಹೊಸ ಕಥೆ, ಕಾನ್ಸೆಪ್ಟ್ ಗಳೊಂದಿಗೆ ಸಿನಿಮಾಗಳು ರೆಡಿಯಾಗುತ್ತಲೇ ಇರುತ್ತವೆ. ಅದರಂತೆ “ಒಬ್ಬರಿಗೊಬ್ಬರು ಪರಿಚಯವಿಲ್ಲದ ಒಂದಿಷ್ಟು ಪಾತ್ರಗಳ ನಡುವೆ ನಡೆಯುವ ರೋಚಕ ಕಥಾ ಹಂದರ ಹೊಂದಿರುವ ಸಿನಿಮಾವೊಂದು ಚಂದನವನದಲ್ಲಿ ಸೆಟ್ಟೇರಿದೆ. ಈ ಚಿತ್ರದಲ್ಲಿ ಗುಳ್ಟು ಸಿನಿಮಾ ಖ್ಯಾತಿಯ ನವೀನ್ ಶಂಕರ್ ನಾಯಕನಾಗಿ ನಟಿಸುತ್ತಿದ್ದಾರೆ. ಅಲ್ಲದೆ ಸ್ಯಾಂಡಲ್ ವುಡ್ ಶಾಕುಂತಲೆ ಐಶಾನಿ ಶೆಟ್ಟಿ ನಾಯಕಿಯಾಗಿ ನವೀನ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.
https://saakshatv.com/according-to-media-reports-tamil-director-direct-yash-movie/
ಇನ್ನೂ ಈ ಚಿತ್ರವನ್ನು ಟಾಲಿವುಡ್ ಸ್ಟಾರ್ ಡೈರೆಕ್ಟರ್ ಪೂರಿ ಜಗನಾಥ್ ಗರಡಿಯಲ್ಲಿ ಪಳಗಿರುವ ಶ್ರೀಧರ್ ಷಣ್ಮುಖ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಹೈಪರ್ ಲಿಂಕ್ ಶೈಲಿಯ ಸಿನಿಮಾ ಆಗಿದ್ದು, ಕ್ರೈಮ್, ಹಾಸ್ಯ, ದುಃಖ, ಪ್ರೀತಿ ಹೀಗೆ ಎಲ್ಲಾ ತರದ ಭಾವನೆಗಳ ಮೇಲೆ ಸಿನಿಮಾ ಸಾಗುತ್ತೆ ಎನ್ನುತ್ತಾರೆ ನಿರ್ದೇಶಕರು.
ಇನ್ನೂ ಈ ಚಿತ್ರವನ್ನು ಓಂಕಾರ್ ನಿರ್ಮಾಣ ಮಾಡ್ತಿದ್ದು, ವೀರೇಂದ್ರ ಕಂಚನ್, ಪ್ರಶಾಂತ್ , ರಘು ಕುಂದರ್, ಶೇಷಪ್ಪ ಸಹ ನಿರ್ಮಾಪಕರಾಗಿದ್ದಾರೆ.
ಅದ್ದೂರಿ ಸೆಟ್ & ಲೋಕೇಶನ್ ಗಳಲ್ಲಿ ಚಿತ್ರದ ಚಿತ್ರೀಕರಣ ಮುಗಿದಿದ್ದು, ಹಾಡುಗಳ ಚಿತ್ರೀಕರಣಕ್ಕೆ ಚಿತ್ರತಂಡ ತಯಾರಿ ನಡೆಸುತ್ತಿದೆ. ಮಂಗಳೂರು ಸುತ್ತ ಮುತ್ತ ಒಂದು & ಬೆಂಗಳೂರಿನಲ್ಲಿ ಎರಡೂ ಹಾಡುಗಳನ್ನು ಚಿತ್ರೀಕರಿಸಲು ಪ್ಲಾನ್ ಮಾಡಿಕೊಂಡಿದೆ ಚಿತ್ರ ತಂಡ.
ಅಂದಹಾಗೆ ಧರಣಿ ಮಂಡಲ ಮಧ್ಯದೊಳಗೆ” ಚಿತ್ರದ ಟೈಟಲ್ ಪೆÇೀಸ್ಟರ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಲಾಂಚ್ ಮಾಡಿ ಚಿತ್ರ ತಂಡಕ್ಕೆಶುಭ ಹಾರೈಸಿದ್ದರು.
ಇನ್ನು ಚಿತ್ರದ ಮುಖ್ಯ ತಾರಾಗಣದಲ್ಲಿ ನವೀನ ಶಂಕರ್, ಐಶಾನಿ ಶೆಟ್ಟಿ, ಯಶ್ ಶೆಟ್ಟಿ, ಸಿದ್ದು ಮೂಲಿಮನಿ, ಓಂಕಾರ್, ಪ್ರಕಾಶ್ ತುಮ್ಮಿನಾಡ್, ನಿತೇಶ್, ಸುಧಾ ಬೆಳವಾಡಿ, ಶಾಂಭವಿ, ಸಿದ್ದರಾಜ್ ಕಲ್ಯಾಣ್ ಕರ್ ಇದ್ದಾರೆ. ಚಿತ್ರಕ್ಕೆ ಕೀರ್ತನ್ ಪೂಜಾರಿ ಛಾಯಗ್ರಹಣ, ರೋಣದ ಬಕ್ಕೇಶ್ ಮತ್ತು ಕಾರ್ತಿಕ್ ಚೆನ್ನೋಜಿರಾವ್ ಸಂಗೀತ ನೀಡುತ್ತಿದ್ದಾರೆ. ಗೌಸ್ ಪೀರ್ ,ಶಿವಕುಮಾರ್ ಶೆಟ್ಟಿ ಮತ್ತು ಅಭಿನಂದನ್ ದೇಶ್ ಪ್ರಿಯಾ, ಸಾಹಿತ್ಯ ಬರೆದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel













