ನಾನು ಹೊನ್ನಾಳಿಯ ಅಂಜದ ಗಂಡು : ಎಂ.ಪಿ.ರೇಣುಕಾಚಾರ್ಯ
ಬೆಂಗಳೂರು : ನಾನು ಹೊನ್ನಾಳಿಯ ಅಂಜದ ಗಂಡು, ಯಾರಿಗೂ ಹೆದರುವವನು ಅಲ್ಲ ಎಂದು ಶಾಸನ ಬಸನಗೌಡ ಪಾಟೀಲ್ ಯತ್ನಾಳ್ ಗೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.
ಸಿಎಂ ಬಗ್ಗೆ, ಪಕ್ಷ ನಾಯಕತ್ವದ ಬಗ್ಗೆ ಪದೇ ಪದೇ ಹೇಳಿಕೆಗಳನ್ನ ಕೊಡುತ್ತಿರುವ ಬಸನಗೌಡ ಪಾಟೀಳ್ ಯತ್ನಾಳ್ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ರೇಣುಕಾಚಾರ್ಯ,ವಿನಾ ಕಾರಣ ಪಕ್ಷ ನಾಯಕರ ಬಗ್ಗೆ ಮಾತನಾಡಬಾರದು.
ಪಕ್ಷ ತಾಯಿ ಸಮಾನ. ನಾನು ತಾಯಿಯನ್ನು ಗೌರವಿಸುತ್ತೇನೆ. ಯಡಿಯೂರಪ್ಪ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಹೋರಾಟದಿಂದಲೇ ಬಂದು ಈಗ ಮುಖ್ಯಮಂತ್ರಿ ಆಗಿದ್ದಾರೆ ಎಂದು ಹೇಳಿದರು.
ಏನಾದರೂ ಕಳೆದಿದೆಯಾ? ಅಷ್ಟ ಐಶ್ವರ್ಯ ಕರುಣಿಸುವ ಈ ಶಕ್ತಿ ಪೀಠದಲ್ಲಿ ಪ್ರಾರ್ಥಿಸಿ ಅಪಾರ ನೆಮ್ಮದಿ ಜಯಪ್ರಾತ್ತಿ!!!!
ನಾನು ಹೆದರೋ ಮಗನಲ್ಲ ಎಂಬ ಯತ್ನಾಳ್ ಹೇಳಿಗೆ ಪ್ರತಿಕ್ರಿಯಿಸಿ, ‘ನಾನು ಹೊನ್ನಾಳಿಯ ಮಧ್ಯಕರ್ನಾಟಕ ಭಾಗದವನು. ಉತ್ತರ ಕರ್ನಾಟಕವನ್ನು ಗೌರವಿಸುತ್ತೇನೆ. ನಾನು ಹೊನ್ನಾಳಿಯ ಅಂಜದ ಗಂಡು.
ನಾಲ್ಕು ಬಾರಿ ಶಾಸಕನಾಗಿದ್ದೇನೆ. ನಾನು ಮಂತ್ರಿಯಾಗಿದ್ದಾಗ ಸಾಕಷ್ಟು ಕೆಲಸ ಮಾಡಿದ್ದೇನೆ. ಯಾರಿಗೂ ಹೆದರುವವನು ಅಲ್ಲ. ಯಾರನ್ನೂ ಹೆದರಿಸಿಲ್ಲ.
ಹೊನ್ನಾಳಿಯ ಹೊಡೆತ ಇಡೀ ರಾಜ್ಯಕ್ಕೆ ಗೊತ್ತು. ವರ್ಷಕ್ಕೆ ಎರಡು ಬಾರಿ ಕುಸ್ತಿ ನಡೆಯುತ್ತದೆ ಎಂದು ಎಚ್ಚರಿಕೆ ನೀಡಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel