ನಾನು ಹಿಂದೂ, ಹಿಂದುತ್ವವಾದಿ ಅಲ್ಲ : ರಾಹುಲ್ ಗಾಂಧಿ Rahul Gandhi saaksha tv
ಜೈಪುರ : ನಾನು ಹಿಂದೂ ಆದ್ರೆ ಹಿಂದುತ್ವವಾದಿ ಅಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಬೆಲೆ ಏರಿಕೆಯನ್ನು ವಿರೋಧಿಸಿ ರಾಜಸ್ಥಾನದ ಜೈಪುರದಲ್ಲಿ ಕಾಂಗ್ರೆಸ್ ಬೃಹತ್ ರ್‍ಯಾಲಿ ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ರಾಹುಲ್ ಗಾಂಧಿ, ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸದ್ಯ ದೇಶದಲ್ಲಿ ಹಿಂದೂ ಮತ್ತು ಹಿಂದುತ್ವದ ಬಗ್ಗೆ ಘರ್ಷಣೆ ನಡೆಯುತ್ತಿದೆ. ಇದು ಒಂದು ಪದವಲ್ಲ.
ಈ ಎರಡೂ ಪದಗಳಿಗೂ ಬೇರೆ ಬೇರೆ ಅರ್ಥವಿದೆ ಎಂದ ರಾಹುಲ್ ಗಾಂಧಿ, ಹಿಂದೂ ಸತ್ಯವನ್ನು ಹುಡುಕುವ ಕೆಲಸ ಮಾಡುತ್ತದೆ.
ಹಿಂದುತ್ವವಾದಿ ಅಧಿಕಾರವನ್ನು ಹುಡುಕುವ ಕಾರ್ಯವನ್ನು ಮಾಡುತ್ತದೆ ಎಂದು ಹೇಳಿದರು.
ಅಲ್ಲದೇ ನಾನೂ ಹಿಂದೂ, ಆದ್ರೆ ಹಿಂದುತ್ವವಾದಿ ಅಲ್ಲ ದು ರಾಹುಲ್ ಗಾಂಧಿ ನುಡಿದರು.
ಇನ್ನು ಈ ರ್‍ಯಾಲಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕರಾದ ಅಶೋಕ್ ಗೆಹ್ಲೋಟ್, ಮಲ್ಲಿಕಾರ್ಜುನ ಖರ್ಗೆ, ಅದಿರ್ ರಂಜನ್ ಚೌಧರಿ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.









