ಬೆಂಗಳೂರು: ನಿನ್ನೆ ನಡೆದ ಸಚಿವ ಸಂಪುಟ ವಿಸ್ತರಣೆ ಬಳಿಕ ಅತೃಪ್ತರ ಅಸಮಾಧಾನ ಕಟ್ಟೆಯೊಡೆದಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನೇ ಅತೃಪ್ತರು ಟಾರ್ಗೆಟ್ ಮಾಡಿ ಹೇಳಿಕೆ ನೀಡುತ್ತಿದ್ದಾರೆ.
ಅತೃಪ್ತರ ಆರೋಪಗಳಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಇನ್ನು ಉಳಿದ ಎರಡೂವರೆ ವರ್ಷಗಳ ಅವಧಿಗೂ ನಾನೇ ಸಿಎಂ. ಈ ವಿಚಾರವಾಗಿ ಯಾರಲ್ಲೂ ಗೊಂದಲಬೇಡ ಎಂದು ಹೇಳುವ ಮೂಲಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ವಿರೋಧಿ ಬಣಕ್ಕೆ ತಿರುಗೇಟು ನೀಡಿದ್ದಾರೆ.
ಸಂಕ್ರಾಂತಿ ಬಳಿಕ ಯಡಿಯೂರಪ್ಪ ಪತನ ಆರಂಭವಾಗಲಿದೆ, ಸ್ವಯಂಕೃತ ಅಪರಾಧಗಳಿಂದ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎಂದು ಬಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿಯೇ ಆರೋಪಿಸಿದ್ದರು.
ನಮ್ಮ ಕಷ್ಟ-ನಷ್ಟಗಳನ್ನು ಆಲಿಸುತ್ತಿದ್ದ ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತಕುಮಾರ್ ಇಲ್ಲದೇ ಇರುವುದು ಬಿಜೆಪಿಯಲ್ಲಿ ಈಗ ಎದ್ದು ಕಾಣುತ್ತಿದೆ. ರೀ.. ಯಡಿಯೂರಪ್ಪನವರೇ..ಮಂತ್ರಿಮಂಡಲ ವಿಸ್ತರಣೆಯಲ್ಲಿ ಸಚಿವರ ಆಯ್ಕೆ ಪ್ರಕ್ರಿಯೆಯ ಮಾನದಂಡಗಳೇನು ಎಂದು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಪ್ರಶ್ನಿಸಿದ್ದರು.
ಇಂದು ದೆಹಲಿಗೆ ತೆರಳಿರುವ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕೂಡ, ತಮಗೆ ಸಚಿವ ಸ್ಥಾನ ನೀಡದ್ದರ ಬಗ್ಗೆ ಹೈಕಮಾಂಡ್‍ಗೆ ದೂರು ನೀಡುತ್ತೇನೆ. ಬ್ಲಾಕ್‍ಮೇಲ್ ಮಾಡಿ ಮೆಗಾಸಿಟಿ ವಂಚನೆ ಕೇಸ್‍ನಲ್ಲಿ ಆರೋಪಿಯಾಗಿರುವವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಳನ್ನು ಗಮನಿಸುತ್ತಿರುವ ಸಿಎಂ ಯಡಿಯೂರಪ್ಪ, ಅಸಮಾಧಾನ ಇರುವವರು ಹೇಳಿಕೆ ಕೊಡುವ ಬದಲು ಹೈಕಮಾಂಡ್‍ಗೆ ದೂರು ಕೊಡಲಿ. ನಾನೇನು ಹೆದರಲ್ಲ, ಜಗ್ಗಲ್ಲ ಈ ಅವಧಿ ಮುಗಿಯುವವರೆಗೂ ನಾನೇ ಸಿಎಂ ಆಗಿರ್ತೆನೆ, ಯಾರಿಗೂ ಡೌಟ್ ಬೇಡ ಎನ್ನುವ ಮೂಲಕ ತಮ್ಮ ಖುರ್ಚಿ ಸೇಫ್ ಎಂಬ ಸಂದೇಶವನ್ನು ಅತೃಪ್ತ ಬಣಕ್ಕೆ ರವಾನಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel