ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ, ಕರ್ನಾಟಕದಲ್ಲಿಯೇ ನಾನು ಹ್ಯಾಪಿ : ಸಿದ್ದರಾಮಯ್ಯ Siddaramaiah saaksha tv
ಹುಬ್ಬಳ್ಳಿ : ಪೆಟ್ರೋಲ್, ಡಿಸೇಲ್ ದರ ಹೆಚ್ಚಳ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ದರ ಹೆಚ್ಚಳ ಬಿಸಿ ನಿಮಗೆ ತಟ್ಟಿಲ್ವಾ..? ಮನಮೋಹನ ಸಿಂಗ್ ಪ್ರಧಾನಿ ಆಗಿದ್ದಾಗ ಡಿಸೇಲ್ ಬೆಲೆ 47 ರೂಪಾಯಿ.
ಡಿಸೇಲ್ ಮೇಲಿನ ಟಾಕ್ಸ್ 3.45 ಪೈಸೆ ಇತ್ತು, ಇದೀಗ 31.84 ಪೈಸೆ ಆಗಿದೆ. ಮೂಲ ಬೆಲೆ 39 ರಿಂದ 40 ಇದೆ, ಟ್ಯಾಕ್ಸ್ 60 ರೂಪಾಯಿ ಮೇಲೆ ಇದೆ.
ಟ್ಯಾಕ್ಸ್ ಹಾಕೋದನ್ನು ಕಡಿಮೆ ಮಾಡಿ, 10 ರೂಪಾಯಿ ಕಡಿಮೆ ಮಾಡಿ. ಜಿ.ಎಸ್.ಟಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ.
ಜಿ.ಎಸ್.ಟಿ ಬಂದ ಮೇಲೆ ಸ್ಟೇಟ್ ಅಟಾರ್ನಿ ಎಲ್ಲ ಹೋಗಿದೆ. ಆರ್ಥಿಕ ಪರಿಸ್ಥಿತಿ ಎಂದರೇನು ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಸೋನಿಯಾ ಗಾಂಧಿ ಎಐಸಿಸಿ ಪೂರ್ಣಾವಧಿ ಅಧ್ಯಕ್ಷೆ ಆಗುವ ವಿಚಾರವಾಗಿ ಮಾತನಾಡಿ, ಎಲೆಕ್ಷನ್ ಘೋಷಣೆ ಮಾಡಿದ್ದಾರೆ.
ರಾಹುಲ್ ಗಾಂಧಿ ಕೂಡ ತಮ್ಮ ಅಭಿಪ್ರಾಯ ಹೇಳಿದ್ದಾರೆ. ರಾಹುಲ್ ಗಾಂಧಿ ಅಧ್ಯಕ್ಷರಾಗಲಿ ಎಂದು ನಾನೂ ಹೇಳಿದ್ದೇನೆ.
ಬಹಳ ಜನ ಮೆಂಬರ್ ಗಳು ಹೇಳಿದ್ದಾರೆ, ನಾನು ಕೂಡ ನನ್ನ ಅಭಿಪ್ರಾಯ ಹೇಳಿದ್ದೇನೆ. ಸಿಡಬ್ಲ್ಯೂಸಿ ಮೆಂಬರ್ ಆಗಿದ್ದಾಗಲೂ ಹೇಳಿದ್ದೆ, ಈಗಲೂ ಹೇಳಿದ್ದೇನೆ.
ರಾಷ್ಟ್ರ ರಾಜಕೀಯಕ್ಕೆ ಅವರು ಕರೆದರು ಹೋಗಲ್ಲ, ಆ ಚರ್ಚೆಯೂ ಆಗಿಲ್ಲ. ನನಗೆ ಅದರ ಬಗ್ಗೆ ಆಸಕ್ತಿಯೂ ಇಲ್ಲ, ರಾಜ್ಯದಲ್ಲಿಯೇ ಮುಂದುವರೆಯುತ್ತೇನೆ.
ನನಗೆ ಈಗ 74 ವರ್ಷ, ಸಾಕು ಕರ್ನಾಟಕದಲ್ಲಿಯೇ ನಾನು ಹ್ಯಾಪಿ ಎಂದು ಹೇಳಿದರು.









