`ಬಲಿ ಪಶು ಆಗಿದ್ದೇನೆ’ ಎಂದು ಪರೋಕ್ಷವಾಗಿ ಒಪ್ಪಿಕೊಂಡ ರಾಗಿಣಿ
ಬೆಂಗಳೂರು : ರಾಗಿಣಿ ದ್ವಿವೇದಿ ಯಾರು..? ಏನು..? ಅನ್ನೋದು ಜನರಿಗೆ ಗೊತ್ತು. ಸ್ವಲ್ಪ ಉಸಿರಾಡಲು ಸಮಯ ನೀಡಿದ್ರೆ ಎಲ್ಲದರ ಕುರಿತು ಮಾತನಾಡುತ್ತೇನೆ ಎಂದು ನಟಿ ರಾಗಿಣಿ ದ್ವಿವೇದಿ ಹೇಳಿದ್ದಾರೆ.
ಸದ್ಯ ಜೈಲಿನಿಂದ ಹೊರ ಬಂದಿರುವ ನಟಿ ರಾಗಿಣಿ ಇಂದು ಸಿಟಿ ಸಿವಿಲ್ ಕೋರ್ಟ್ ಎನ್ ಡಿಪಿಎಸ್ ಕೋರ್ಟ್ ಗೆ ಹಾಜರಾಗಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟ್ ಪ್ರಕ್ರಿಯೆ ಇದ್ದ ಕಾರಣ ಬಂದಿದ್ದೆ, ತನಿಖೆಗೆ ಸಹಕರಿಸುತ್ತೇವೆ.
ಸಾಮಾನ್ಯ ವಿಚಾರಣೆಗೆ ಹಾಜರಾಗಿದ್ದೆ. ನನಗೆ ವ್ಯವಸ್ಥೆ ಮೇಲೆ ನಂಬಿಕೆ ಇದೆ. ಬೇರೆಯವರ ಬಗ್ಗೆ ನಾನು ಈಗ ಮಾತಾಡಲ್ಲ. ನಾನು ತಪ್ಪು ಮಾಡಿಲ್ಲ ಎಂದು ವಿವರಣೆ ಕೊಡುವ ಅಗತ್ಯ ಇಲ್ಲ.
ಕನ್ನಡ ಚಿತ್ರೋದ್ಯಮಕ್ಕೆ ಬಂದು 12 ವರ್ಷ ಆಗಿದೆ. ನನಗೆ ಉಸಿರಾಡಲು ಸಮಯ ಕೊಡಿ, ಒಂದಷ್ಟು ವಿಚಾರಗಳನ್ನ ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಪ್ರಕರಣದಲ್ಲಿ ಸಂಜನಾ ಮತ್ತು ರಾಗಿಣಿ ಬಲಿಪಶು ಆದ್ರಾ ಪ್ರಶ್ನೆಗೆ ಉತ್ತರಿಸಿದ ರಾಗಿಣಿ, ಹೌದು.. ನಾನು ಕನ್ನಡ ಸಿನಿಮಾರಂಗದಲ್ಲಿ ಕಳೆದ 12 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ನಾನು ಏನು ಅನ್ನೋದು ಎಲ್ಲರಿಗೂ ಗೊತ್ತಿದೆ. ಪ್ರಕರಣದಲ್ಲಿ ನಾನು ಮುಗ್ಧೆ ಎಂದರು.