ನನ್ನ ಜನರ ನೋವನ್ನು ನೋಡಲು ನಾನು ಟ್ರಂಪ್ ಅಲ್ಲ – ಮಹಾರಾಷ್ಟ್ರ ಸಿಎಂ
ಮುಂಬೈ, ಜುಲೈ 22: ಅತ್ಯಂತ ಹೆಚ್ಚು ಕೊರೊನಾ ಸೋಂಕಿಗೆ ಒಳಗಾದ ಮಹಾರಾಷ್ಟ್ರದಲ್ಲಿ ಕೊರೋನವೈರಸ್ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ರಾಜ್ಯದ ಜನರು ತಮ್ಮ ಕಣ್ಣ ಮುಂದೆ ನೋವನ್ನು ಅನುಭವಿಸುವುದನ್ನು ನೋಡಲಾಗುತ್ತಿಲ್ಲ ಎಂದು ಹೇಳಿದ್ದಾರೆ.
ಶಿವಸೇನೆ ಸಂಸದ ಮತ್ತು ವಕ್ತಾರ ಸಂಜಯ್ ರಾವತ್ ಅವರೊಂದಿಗಿನ ಸಂದರ್ಶನದಲ್ಲಿ ಠಾಕ್ರೆ,” ನನ್ನ ಜನರು ನನ್ನ ಕಣ್ಣ ಮುಂದೆ ನೋವನ್ನು ಅನುಭವಿಸುವುದನ್ನು ನೋಡಲು ನಾನು ಡೊನಾಲ್ಡ್ ಟ್ರಂಪ್ ಅಲ್ಲ” ಎಂದು ಹೇಳಿದರು.
ಶಿವಸೇನೆಯ ಮುಖವಾಣಿ ಸಾಮ್ನಾ ದಲ್ಲಿ ಜುಲೈ 25 ಮತ್ತು 26 ರಂದು ಪ್ರಸಾರವಾಗಲಿರುವ ಸಂದರ್ಶನದ ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್-19 ಪ್ರಕರಣಗಳನ್ನು ಹೊಂದಿರುವ ಅಮೆರಿಕದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಮಹಾರಾಷ್ಟ್ರದ ಜನಪ್ರಿಯ ಸ್ನ್ಯಾಕ್ ‘ವಾಡಾ ಪಾವ್’ ಮತ್ತೆ ಮುಂಬೈ ಬೀದಿಗಳಲ್ಲಿ ಯಾವಾಗ ಸಿಗುತ್ತದೆ ಎಂದು ರಾವತ್ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಠಾಕ್ರೆ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಟೀಸರ್ ನಲ್ಲಿ, ಠಾಕ್ರೆ ರಾಜ್ಯದಲ್ಲಿ ಲಾಕ್ ಡೌನ್ ಇನ್ನೂ ಜಾರಿಯಲ್ಲಿದೆ ಎಂದು ಹೇಳಿದ್ದು, ಸರ್ಕಾರವು ಕೆಲವು ನಿರ್ಬಂಧಗಳನ್ನು ಸಡಿಲಿಕೆ ಮಾಡಲು ಪ್ರಾರಂಭಿಸಿದೆ ಎಂದು ಹೇಳಿದ್ದಾರೆ. ಮಹಾರಾಷ್ಟ್ರದ ಜನರು ಈಗ ಲಾಕ್ ಡೌನ್ ನಿಂದ ಬೇಸರಗೊಂಡಿದ್ದಾರೆ ಎಂದು ರಾವತ್ ಹೇಳಿದ ನಂತರ ಮುಖ್ಯಮಂತ್ರಿಯವರ ಈ ಹೇಳಿಕೆ ಬಂದಿದೆ.
ಸೋಂಕಿನ ಎರಡನೇ ಅಲೆಗೆ ಹೆದರಿರುವ ಠಾಕ್ರೆ ರಾಜ್ಯದಲ್ಲಿ ನಿರ್ಬಂಧಗಳನ್ನು ಸಡಿಲಿಸುವಲ್ಲಿ ಒಲವು ತೋರುತ್ತಿಲ್ಲ.