ನನಗೂ ವಯಸ್ಸಾಯ್ತು, ಈಗ ರಾಜಕಾರಣ ಕಷ್ಟ : ಜಿ.ಡಿ.ದೇವೇಗೌಡ
ಮೈಸೂರು : ಈ ರಾಜಕಾರಣ ಕಷ್ಟ, ನನಗೂ 75 ವರ್ಷ ವಯಸ್ಸಾಯ್ತು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಜೆಡಿಎಸ್ ಪಕ್ಷ ಸಂಘಟಕರ ಪಟ್ಟಿಯಿಂದ ಅವರಿಗೆ ಕೋಕ್ ನೀಡಿದ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಹೆಚ್ ಡಿ ಕುಮಾರಸ್ವಾಮಿ ಖುದ್ದು ಅವರೇ ಮೈಸೂರಿಗೆ ಬಂದು ಪಕ್ಷದಿಂದ ಹೊರಗೆ ಹಾಕುತ್ತೇನೆ ಅಂತ ಹೇಳಿದ್ದಾರೆ.
ಅಂದ್ರೆ ಎಲ್ಲವೂ ಮುಗಿಯಿತು ಅಂತ ಅರ್ಥ ಅಲ್ಲವೇ..? ಪಟ್ಟಿಯ ಬಗ್ಗೆ ಹೇಳುವುದಕ್ಕೆ ಏನಿದೆ..? ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೇ ನನ್ನ ಮಾತು ನಡೆಯುತ್ತಿರಲಿಲ್ಲ.
ಈಗ ಕೇವಲ ಶಾಸಕ, ನನ್ನ ಈಗ್ಯಾರು ನನ್ನ ಮಾತು ಕೇಳ್ತಾರೆ. ಕುಮಾರಸ್ವಾಮಿ ಅವರು ಮೈಸೂರು ಹೈಕಮಾಂಡ್ ಹೇಳಿದಂತೆ ಎಲ್ಲವನ್ನೂ ಮಾಡ್ತಾರೆ ಎಂದು ಪರೋಕ್ಷವಾಗಿ ಸಾ ರಾ ಮಹೇಶ್ ವಿರುದ್ಧ ಕಿಡಿಕಾರಿದರು.
ಇನ್ನು ನಾನು ಜನತಾ ದಳದ ಶಾಸಕ, ಸಚಿವನಾಗಬೇಕು ಎಂಬ ಆಸೆ ಇದ್ದರೆ ಎಚ್.ವಿಶ್ವನಾಥ್, ನಾರಾಯಣ ಗೌಡ ಪಕ್ಷ ಬಿಟ್ಟು ಹೋದಾಗಲೇ ನಾನು ಬೀಡಬಹುದಿತ್ತು.
ಆದರೆ ಕುಮಾರಸ್ವಾಮಿಯನ್ನು ನಾನೇ ಮುಖ್ಯಮಂತ್ರಿ ಮಾಡಿ, ನಾನೇ ಪದಚ್ಯುತಿ ಮಾಡ್ತೀನಾ ಎಂದು ಪ್ರಶ್ನಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









