ಬೆಂಗಳೂರು : ರಾಜರಾಜೇಶ್ವರಿ ನಗರ ಉಪಚುನಾವಣಾ ಕಣ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳು ಅಭ್ಯರ್ಥಿ ಆಯ್ಕೆ ವಿಚಾರವಾಗಿ ತಲೆಕೆಡಿಸಿಕೊಂಡಿವೆ.
ಈ ಮಧ್ಯೆ ನಾನೇ ಆರ್ ಆರ್ ನಗರ ಚುನಾವಣಾ ಅಭ್ಯರ್ಥಿ. ಚುನಾವಣೆಯ ಜವಾಬ್ದಾರಿಯೂ ನನ್ನದೇ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಆರ್.ಆರ್.ನಗರ ಕ್ಷೇತ್ರ ಉಪ ಚುನಾವಣೆ ವಿಚಾರವಾಗಿ ಮಾತನಾಡಿದ ಸಂಸದರು, ಆರ್ ಆರ್ ನಗರ ಚುನಾವಣಾ ಅಭ್ಯರ್ಥಿ ನಾನೇ.
ನನಗೆ ವೋಟ್ ಹಾಕಿ ಅಂತ ಕೇಳುತ್ತೇನೆ. ಡಿ.ಕೆ ಶಿವಕುಮಾರ್ ನಾಯಕತ್ವದಲ್ಲಿ ಚುನಾವಣೆ ನಡೆಸ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ : ಸಿ.ಟಿ.ರವಿ ಸ್ವಯಂ ಪ್ರೇರಿತರಾಗಿ ರಾಜೀನಾಮೆ ಕೊಡ್ತಾರೆ : ಕಟೀಲ್
ಕಾಂಗ್ರೆಸ್ ಟಿಕೆಟ್ ಯಾರಿಗೆ ಎಂಬ ವಿಚಾರವಾಗಿ ಮಾತನಾಡಿದ ಡಿ.ಕೆ.ಸುರೇಶ್, ಕೆಲವರಿಗೆ ವ್ಯಕ್ತಿ ಮುಖ್ಯ, ಆದರೆ ನಮಗೆ ಪಕ್ಷ ಮುಖ್ಯ. ಆರೇಳು ಜನ ಆಕಾಂಕ್ಷಿಗಳಿದ್ದಾರೆ.
ಪಕ್ಷ ರಾಮಲಿಂಗಾರೆಡ್ಡಿಗೆ ಸಂಪೂರ್ಣ ಜವಾಬ್ದಾರಿ ಕೊಟ್ಟಿದೆ. ಅವರಿಗೆ ಆಕಾಂಕ್ಷಿಗಳ ಪಟ್ಟಿವನ್ನೂ ಕೊಡಲಾಗಿದೆ.
ಬಿಜೆಪಿ ಯಾವ ಅಭ್ಯರ್ಥಿಯೇ ಹಾಕಲಿ, ನಾವು ಹಸ್ತದ ಅಭ್ಯರ್ಥಿಗೆ ಮತಹಾಕಿ ಅಂತ ಕೇಳ್ತೇವೆ. ಕಾದು ನೋಡಿ ಯಾರು ಬೇಕಾದರೂ ಆಗಬಹುದು ಎಂದಿದ್ದಾರೆ.








