ರೈತರ ಪರವಾಗಿ ನಾನು ಜೈಲಿಗೆ ಹೋಗಲು ಸಿದ್ಧ : ಸಿದ್ದರಾಮಯ್ಯ
ಬೆಂಗಳೂರು : ರೈತರ ಪರವಾಗಿ ನಾನು ಜೈಲಿಗೆ ಹೋಗಲು ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಫ್ರೀಡಂ ಪಾರ್ಕ್ ನಲ್ಲಿ ರಾಜಭವನ ಮುತ್ತಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಅರಾಜಕತೆ ಸೃಷ್ಠಿಯಾಗಿದೆ.
ರೈತರ ವಿರುದ್ಧದ ಕಾಯ್ದೆ ಯಾಕೆ ತಂದಿದ್ದೀರಿ.? 58 ದಿನಗಳಿಂದ ರೈತರು ಪ್ರತಿಭಟನೆ ಮಾಡಿದ್ದಾರೆ. ಮನುಷ್ಯತ್ವ ಇದ್ರೆ ಹೋರಾಟ ಹತ್ತಿಕ್ಕಬಾರದು.
ಕೃಷಿ ಕಾಯ್ದೆಗಳು ರೈತರಿಗೆ ಮಾರಕವಾಗಿದೆ. ರೈತರ ಬೇಡಿಕೆ ನ್ಯಾಯಯುತವಾಗಿದೆ ಎಂದು ಹೇಳಿದರು.
ಇದೇ ವೇಳೇ ರೈತರ ಪರವಾಗಿ ನಾನು ಜೈಲಿಗೆ ಹೋಗಲು ಸಿದ್ಧ ಎಂದ ಸಿದ್ದರಾಮಯ್ಯ, ನಮ್ಮ ಹೋರಾಟ ರಾಜಭವನಕ್ಕೆ ಮುತ್ತಿಗೆ ಆಗಿದೆ.
ನಮ್ಮ ಹೋರಾಟ ಭಾಷಣಕ್ಕೆ ಸೀಮಿತ ಅಲ್ಲ. ರಾಜಭವನಕ್ಕೆ ನಾವು ಮುತ್ತಿಗೆ ಹಾಕುತ್ತೇವೆ. ನಮ್ಮ ಹೋರಾಟ ಈಗ ಪ್ರಾರಂಭ ಆಗಿದೆ. ರೈತರ ಪರವಾಗಿ ಜೈಲಿಗೆ ಹೋಗಲು ಸಹ ಸಿದ್ಧ ಎಂದು ಪುನರುಚ್ಚರಿಸಿದರು.
ವೇದಿಕೆ ಭಾಷಣ ಬಳಿಕ ಕಾಂಗ್ರೆಸ್ ನಾಯಕರು ರಾಜಭವನದತ್ತ ಹೊರಟರು. ಈ ವೇಳೆ ಅವರನ್ನು ಪೊಲೀಸರು ತಡೆದಿದ್ದು, ವಶಕ್ಕರ ಪಡೆದಿದ್ದಾರೆ.









