ಶಿವಮೊಗ್ಗ : ಈಶ್ವರಪ್ಪ ಆರ್ ಎಸ್ ಎಸ್ ಪ್ರೇರಣೆಯಂತೆ ಹೇಳಿಕೆ ನೀಡಿದ್ದಾರೆ ಎಂಬ ಸಂಸದ ಅಸಾದುದ್ದೀನ್ ಓವೈಸಿ ಹೇಳಿಕೆಗೆ ಸಚಿವ ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ನಾನು ಈ ದೇಶದ ಮಣ್ಣಿನ ಮಗ ಎಂದು ತಿರುಗೇಟು ನೀಡಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಸಂಸದ ಅಸಾದುದ್ದೀನ್ ಓವೈಸಿಯವರದ್ದು ಹಿಂದೂ ವಿರೋಧಿ ರಕ್ತ. ಅವರಿಗೆ ಹಿಂದೂ ಶ್ರದ್ಧಾ ಕೇಂದ್ರಗಳ ಬಗ್ಗೆ ಅವರಿಗೆ ಉತ್ತಮ ಭಾವನೆ ಇಲ್ಲ. ನನ್ನ ಹೇಳಿಕೆಯನ್ನು ಅಸಾದುದ್ದೀನ್ ಓವೈಸಿ ರಾಜಕೀಯವಾಗಿ ತಿರುಗಿಸಿದ್ದಾರೆ. ಈಶ್ವರಪ್ಪ ಆರ್ ಎಸ್ ಎಸ್ ಪ್ರೇರಣೆಯಂತೆ ಹೇಳಿಕೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಮುಂದೆ ಧರ್ಮ ಸಂಸತ್ ಹಾಗೂ ಬಿಜೆಪಿಯಲ್ಲೂ ಈ ಬಗ್ಗೆ ನಿರ್ಣಯವಾಗುತ್ತದೆ ಎಂದಿದ್ದಾರೆ. ನಾನು ಈ ದೇಶದ ಮಣ್ಣಿನ ಮಗ. ಸ್ವಾತಂತ್ರ‍್ಯ ಭಾರತದಲ್ಲಿದ್ದು, ನನ್ನ ಭಾವನೆ ಹೇಳಿದ್ದೇನೆ ಎಂದು ತಿರುಗೇಟು ನೀಡಿದರು.
ದೇಶಕ್ಕೆ ಸ್ವಾತಂತ್ರ‍್ಯ ಬಂದಿದೆ. ಅದು ಕಟ್ಟಡ, ರಸ್ತೆ, ಚರಂಡಿ ನಿರ್ಮಾಣಕ್ಕೆ ಅಷ್ಟೇ ಅಲ್ಲ. ಮನಮ್ಮ ಸ್ವಾಭಿಮಾನದ ಶ್ರದ್ಧಾ ಕೇಂದ್ರಗಳಿಗೆ ಮುಕ್ತಿ ಸಿಗಬೇಕು. ಆಗ ಮಾತ್ರ ಸ್ವಾತಂತ್ರ‍್ಯ ಸಿಕ್ಕಂತೆ. ಕಾಶಿ ಹಾಗೂ ಮಥುರಾದಲ್ಲಿ ಮುಕ್ತವಾದ ಮಂದಿರವನ್ನು ನಿರ್ಮಾಣವಾಗಬೇಕು ಎಂಬುದು ನನ್ನ ಭಾವನೆ. ಅದೇ ಕಾರಣಕ್ಕೆ ನನ್ನ ಭಾವನೆಯನ್ನು ನಾನು ಬಹಿರಂಗವಾಗಿ ವ್ಯಕ್ತಪಡಿಸಿದ್ದೇನೆ ಎಂದು ಈಶ್ವರಪ್ಪ ಹೇಳಿದರು.








