ತುಮಕೂರು, ಮೇ 14 : ಜಲ ಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಚರ್ಚಾತ್ಮಕ ಹೇಳಿಕೆಯೊಂದನ್ನು ನೀಡಿ ರಾಜಕೀಯ ವಲಯದಲ್ಲಿ ಸಂಚಲನ ಉಂಟುಮಾಡಿದ್ದಾರೆ.
ತುಮಕೂರಿನಲ್ಲಿ ಸಚಿವ ರಮೇಶ್ ಜಾರಕಿಹೊಳಿ ಅವರು ನಾನು ಮತ್ತು ಕೆ.ಎನ್.ರಾಜಣ್ಣ ಸೇರಿಕೊಂಡು ಮೈತ್ರಿ ಸರ್ಕಾರವನ್ನು ಉರುಳಿಸಿದೆವು ಎಂದು ಹೇಳಿಕೆಯನ್ನು ನೀಡಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವನ್ನು ಬೀಳಿಸಲು ತಮಗೆ ಒಂದು ಉದ್ದೇಶವಿತ್ತು ಎಂದಿರುವ ರಮೇಶ್ ಜಾರಕಿಹೊಳಿ ಮೈತ್ರಿ ಸರ್ಕಾರದ ಪತನಕ್ಕೆ ನನ್ನ ಜೊತೆ ಕಾಂಗ್ರೆಸ್ ಮಾಜಿ ಶಾಸಕ ಮತ್ತು ಅಫೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿರುವ ಕೆ.ಎನ್.ರಾಜಣ್ಣ ಅವರು ಕೈಜೋಡಿಸಿದರು ಎಂದು ಹೇಳಿಕೆಯನ್ನು ನೀಡಿದ್ದಾರೆ. ಲೋಕಸಭಾ ಚುನಾವಣೆ ವೇಳೆಯಲ್ಲಿ ಮೈತ್ರಿ ಸರ್ಕಾರವನ್ನು ಪತನ ಮಾಡುವ ಬಗ್ಗೆ ರಾಜಣ್ಣ ಅವರು ತನ್ನ ಬಳಿ ಹೇಳಿದ್ದರು ಎಂಬುದಾಗಿ ರಮೇಶ್ ಜಾರಕಿಹೊಳಿಯವರು ಹೇಳಿದ್ದಾರೆ
ಕೆ.ಎನ್.ರಾಜಣ್ಣ ಅವರನ್ನು ನಾನು ಮೈತ್ರಿ ಸರ್ಕಾರದ ಪತನದ ನಂತರ ಬಿಜೆಪಿಗೆ ಸೇರ್ಪಡೆ ಆಗುವಂತೆ ಕೇಳಿಕೊಂಡೆ ಆದರೆ ಅವರು ಬರಲಿಲ್ಲ ಎಂದ ಜಾರಕಿಹೊಳಿ ಮೊದಲಿನಿಂದ ನಾನು ಕೂಡ ಕಾಂಗ್ರೆಸ್ನಲ್ಲಿ ಇದ್ದವನಾದರೂ ಈಗ ಬಿಜೆಪಿಗೆ ಸೇರಿಲ್ಲವೆ? ಆದರೆ ರಾಜಣ್ಣ ಅವರು ಮಾತ್ರ ಅದೇಕೋ ಬಿಜೆಪಿಗೆ ಬರಲು ಮನಸ್ಸು ಮಾಡಲಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ಕೊಟ್ಟಿದ್ದಾರೆ. ಜಾರಕಿಹೊಳಿಯವರ ಈ ಹೇಳಿಕೆಗೆ ಯಾವ ರೀತಿಯ ಪ್ರತಿಕ್ರಿಯೆಗಳು ಬರಲಿವೆ ಎಂದು ಕಾದು ನೋಡ ಬೇಕಾಗಿದೆ.
ಗಂಭೀರ್ ಟೀಂ ಇಂಡಿಯಾ ಕೋಚ್ ಆಗಿ ಹೆಚ್ಚು ಕಾಲ ಉಳಿಯಲ್ಲ: ಸೈಮನ್
ನ್ಯೂಜಿಲೆಂಡ್ನ ಮಾಜಿ ಕ್ರಿಕೆಟಿಗ ಸೈಮನ್ ಡೌಲ್, ಗೌತಮ್ ಗಂಭೀರ್ ಟೀಂ ಇಂಡಿಯಾ ಕೋಚ್ ಆಗಿ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಗ್ರೆಗ್ ಚಾಪೆಲ್ಗಿಂತ ಕಡಿಮೆ ಅವಧಿಯಲ್ಲಿ...