ಅವಕಾಶ ಸಿಕ್ಕರೆ ನಾನು ಕೂಡ ಸಿಎಂ ಆಗಬಹುದು : ಉಮೇಶ್ ಕತ್ತಿ Umesh Kaththi
ವಿಜಯಪುರ : ರಾಜ್ಯ ರಾಜಕಾರಣದಲ್ಲಿ ಸದ್ಯ ಮುಖ್ಯಮಂತ್ರಿ ಸ್ಥಾನದ ಬಗ್ಗೆಯೇ ಚರ್ಚೆ ನಡೆಯುತ್ತಿದೆ.
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಯಲ್ಲಿ ಮುಂದಿನ ಮುಖ್ಯಮಂತ್ರಿ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.
ಈ ಮಧ್ಯೆ ಸಚಿವ ಉಮೇಶ್ ಕತ್ತಿ, ಅವಕಾಶ, ದೈವಬಲ, ಜನಬಲವಿದ್ದರೆ ಎರಡೂವರೆ ವರ್ಷಗಳ ಬಳಿಕ ನಾನು ಕೂಡ ಮುಖ್ಯಮಂತ್ರಿಯಾಗಬಹುದು ಎಂದು ಹೇಳಿದ್ದಾರೆ.
ನಾಯಕತ್ವ ಬದಲಾವಣೆ ಬಗ್ಗೆ ಸೋಮವಾರ ವಿಜಯಪುರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರು 50 ವರ್ಷದಿಂದ ರಾಜಕೀಯದಲ್ಲಿದ್ದ ಸದೃಢವಾದ ಆಡಳಿತ ನೀಡುತ್ತಿದ್ದಾರೆ.
ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಬಲರಾಗಿದ್ದು, ಮುಖ್ಯಮಂತ್ರಿ ಖುರ್ಚಿ ಖಾಲಿಯಿಲ್ಲ ಎಂದರು.
ಇನ್ನು ನಾನು 8 ಬಾರಿ ಶಾಸಕನಾಗಿದ್ದು ಸಿಎಂ ಆಗಲು ಎಲ್ಲ ಅರ್ಹತೆಯಿದೆ. ಜನ ಹಾಗೂ ದೈವಬಲವಿದ್ದರೆ ಅಥವಾ ಅವಕಾಶ ಸಿಕ್ಕರೆ ನಾನೂ ಕೂಡ ಮುಖ್ಯಮಂತ್ರಿಯಾಗಬಹುದು ಎಂದು ಸಚಿವ ಉಮೇಶ ಕತ್ತಿ ಹೇಳಿದರು.