ಸ್ವಲ್ಪ ಮನಸು, ಸ್ವಲ್ಪ ತಾಳ್ಮೆ ಇರುತ್ತಿದ್ರ್ರೆ ರಿಷಬ್ ಪಂತ್‍ಗೆ ಮತ್ತೊಂದು ಶತಕ ದಾಖಲಿಸಬಹುದಿತ್ತು.. ಯಾಕೋ ಏನೋ ಭೋಜನ ವಿರಾಮದ ನಂತ್ರ ಪಂತ್ ಸ್ವಲ್ಪ ನಿಧಾನಗತಿಯ ಬ್ಯಾಟಿಂಗ್‍ಗೆ ಮುಂದಾದ್ರು. ಇನ್ನೊಂದೆಡೆ ಗಿಲ್ ಅಬ್ಬರಿಸುತ್ತಿದ್ದಾಗ ಪಂತ್ ಕೂಡ ತನ್ನ ನೈಜ ಆಟದ ಕಡೆಗೆ ಗಮನಹರಿಸಲಿಲ್ಲ ಅಂತ ಅನ್ಸುತ್ತೆ. ಆದ್ರೂ ಎರಡನೇ ಟೆಸ್ಟ್ ಪಂದ್ಯದಲ್ಲಿ ರಿಷಬ್ ಪಂತ್ ಆಕರ್ಷಕ 65 ರನ್ ಸಿಡಿಸಿದ್ರು.
ಒಂದಂತೂ ನಿಜ, ರಿಷಬ್ ಪಂತ್ ಇಂಗ್ಲೀಷ್ ಬೌಲರ್‍ಗಳನ್ನು ಸಾಕಷ್ಟು ಕನ್‍ಫ್ಯೂಸ್ ಮಾಡುತ್ತಿದ್ದರು. ಮಾಮೂಲಿ ರಿಷಬ್ ಪಂತ್ ಅಂದ್ರೆ ಹೊಡಿಬಡಿ ಆಟವೇ ಬಂಡವಾಳ. ಆದ್ರೆ ಪಂತ್ ಪಕ್ವವಾಗುತ್ತಿದ್ದಾರೆ. ಪಂದ್ಯದ ಗತಿ ಹಾಗೂ ನೋಡಿಕೊಂಡು ಆಡುತ್ತಿದ್ದಾರೆ. ಪ್ರತಿ ಎಸೆತವನ್ನು ಬೌಂಡರಿ, ಸಿಕ್ಸರ್‍ಗಟ್ಟಬೇಕು ಅನ್ನೋ ಸಿದ್ದಾಂತವನ್ನು ತಿದ್ದಿಕೊಂಡಿದ್ದಾರೆ. ಬೌಂಡರಿ – ಸಿಕ್ಸರ್‍ಗಳು ಬಂದ್ರೆ ಮುಂದಿನ ಎಸೆತವನ್ನು ಅಷ್ಟೇ ತಾಳ್ಮೆಯಿಂದ ಆಡುತ್ತಿದ್ದಾರೆ. ಪ್ರತಿ ಎಸೆತಗಳನ್ನು ಎಡವಟ್ಟಾಗಿ ಆಡುತ್ತಿಲ್ಲ. ಪಂತ್ ಮಟ್ಟಿಗೆ ಇದು ಒಳ್ಳೆಯ ಬೆಳವಣಿಗೆ.. ಆದ್ರೆ ಕೆಲವೊಂದು ಬಾರಿ ಪಂತ್‍ಗೆ ಇದೇ ಮುಳುವಾಗುತ್ತೆ ಅನ್ಸುತ್ತೆ. ಯಾಕಂದ್ರೆ ಭೋಜನ ವಿರಾಮಕ್ಕೂ ಮುನ್ನ ಪಂತ್ ಉತ್ತಮ ಲಯದಲ್ಲಿದ್ದರು. ಆದ್ರೆ ನಂತರ ಊಟ ಜಾಸ್ತಿ ಆಯ್ತೋ ಏನೋ ಗೊತ್ತಿಲ್ಲ.. ತಾಳ್ಮೆ ಹಾಗೂ ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಒತ್ತುಕೊಟ್ರು. ಹೀಗಾಗಿ ಪಂತ್ ನೈಜ ಆಟವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗಲಿಲ್ಲ.
ಆದ್ರೂ ರಿಷಬ್ ಪಂತ್ ಆಕರ್ಷಕ ಅರ್ಧಶತಕ ಸಿಡಿಸಿದ್ದು ಅಲ್ಲದೆ ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ. ಟೆಸ್ಟ್ ಸರಣಿಯೊಂದರಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ್ದ ದಾಖಲೆ ರಿಷಬ್ ಪಂತ್ ಹೆಸರಿಗೆ ಸೇರಿಕೊಂಡಿದೆ.
ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‍ನಲ್ಲಿ ರಿಷಬ್ ಪಂತ್ ಈ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧ ರಿಷಬ್ ಪಂತ್ 24 ಸಿಕ್ಸರ್‍ಗಳನ್ನು ದಾಖಲಿಸಿದ್ದಾರೆ. ಈ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್‍ನ ಬೆನ್ ಸ್ಟ್ರೋಕ್ಸ್ ದಾಖಲಸಿದ್ದ 21 ಸಿಕ್ಸರ್‍ಗಳ ದಾಖಲೆಯನ್ನು ಪಂತ್ ಅಳಿಸಿ ಹಾಕಿದ್ದಾರೆ. ಹಾಗೇ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್‍ನ ವಿವಿಯನ್ ರಿಚಡ್ರ್ಸ ದಾಖಲೆಯೂ ಅಳಿಸಿ ಹೋಗಿದೆ.
ಒಂದು ರೀತಿಯಲ್ಲಿ ರಿಷಬ್ ಪಂತ್ ಅಂದ್ರೆ ಊಹೆಗೂ ನಿಲುಕದ ಆಟಗಾರ. ಅವರ ಆಟವನ್ನು ಅರ್ಥಮಾಡಿಕೊಳ್ಳುವುದು ತುಂಬಾನೇ ಕಷ್ಟ..ಯಾವಾಗ ಹೇಗೆ ಹೊಡೆಯುತ್ತಾರೆ..? ಯಾವಾಗ ಔಟಾಗ್ತಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಆದ್ರೆ ಬ್ಯಾಟಿಂಗ್ ಕೌಶಲ್ಯವನ್ನು ತನ್ನದೇ ಆದ ರೀತಿಯಲ್ಲಿ ಮೈಗೂಡಿಸಿಕೊಂಡಿದ್ದಾರೆ. ತಾಂತ್ರಿಕತೆ, ಆತ್ಮವಿಶ್ವಾಸ, ಆಡಿಯೇ ಆಡ್ತೀನಿ ಅನ್ನೋ ಮನೋಭಾವನೆಯನ್ನು ಬೆಳೆಸಿಕೊಂಡಿದ್ದಾರೆ. ಹೀಗಾಗಿಯೇ ವಿಶ್ವ ಕ್ರಿಕೆಟ್‍ನಲ್ಲಿ ರಿಷಬ್ ಪಂತ್ ಎಂಬ ಹೆಸರು ರಾರಾಜಿಸುತ್ತಿದೆ. ಸದ್ಯದ ಮಟ್ಟಿಗೆ ಅತ್ಯಂತ ಅಪಾಯಕಾರಿ ಬ್ಯಾಟರ್ ಯಾರು ಅಂದ್ರೆ ಮೊದಲು ಕೇಳಿಬರುವ ಹೆಸರು ರಿಷಬ್ ಪಂತ್ ಎಂಬುದರಲ್ಲಿ ಎರಡು ಮಾತಿಲ್ಲ.








