ಮೈಸೂರು: ನಾನು ಯಾವತ್ತೂ ಜಮೀರ್ (Zameer Ahmed) ನನ್ನು ಕುಳ್ಳ ಎಂದು ಕರೆದಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಾರೆ.
ಮೈಸೂರಿನಲ್ಲಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದು ಮಾತನಾಡಿದ ಅವರು, ನನ್ನ ಹಾಗೂ ಜಮೀರ್ ಸ್ನೇಹ ಕೇವಲ ರಾಜಕೀಯವಾಗಿ ಮಾತ್ರ ಇರುವುದು. ಬಸವರಾಜ್ ಹೊರಟ್ಟಿ ಅವರು ಹಿಂದೆ ಏ ಕುಮಾರ್ ಎಂದಿದ್ದಕ್ಕೆ ಅವರನ್ನೇ ಈತ ಹೊಡೆಯಲು ಹೋಗಿದ್ದ. ಹೊರಟ್ಟಿ ಅವರು ಈಗಲೂ ಇದ್ದಾರೆ ಅವರನ್ನೇ ಕೇಳಿ ಬೇಕಾದರೆ.ಕರಿಯಾ, ಕುಳ್ಳ ಎಂದು ಮಾತಾಡಿಸಿ ಕೊಳ್ಳುವ ಸಂಸ್ಕೃತಿಯಿಂದ ಬಂದವ ನಾನಲ್ಲ. ಅವರ ಮಾತುಗಳು ಅವರ ಸಂಸ್ಕೃತಿ ತೋರಿಸುತ್ತದೆ ಎಂದು ಗುಡುಗಿದ್ದಾರೆ.
ಸಿಎಂ ಹಾಗೂ ಡಿಸಿಎಂ ಈ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ. ಇದು ಅನಾಗರಿಕ ಸರ್ಕಾರ. ಇವರೆಲ್ಲ ಯಾರು? ಎಲ್ಲಿದ್ದರು ಎಲ್ಲಿದ್ದರು ಎಂಬುವುದು ಗೊತ್ತು. ದುಡ್ಡಿನ ಮದದಿಂದ ಈ ರೀತಿ ಮಾತಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚನ್ನಪಟ್ಟಣದ ಜನ ಆಶೀರ್ವಾದ ಮಾಡಿದ್ದಾರೆ. ಉತ್ತಮವಾದ ರೀತಿಯಲ್ಲಿ ಗೆಲ್ಲುತ್ತೇವೆ. ರಾಜಕೀಯ ಏನ್ ನಡೆದಿದೆ ಎಂಬುವುದನ್ನು ಯೋಗೇಶ್ವರ್ ವಿಮರ್ಶೆ ಮಾಡಿದ್ದಾರೆ ಎಂದು ಹೇಳಿದ್ದಾರೆ.