ಬೆಂಗಳೂರು: ನಾನು ಹೇಳುವುದಾದರೆ ನೇರವಾಗಿಯೇ ಹೇಳುತ್ತೇನೆ. ಆದರೆ, ಕಲಾವಿದನ ಫ್ಯಾನ್ಸ್ ಗೆ ಏನೂ ಅಂದಿಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿನಿಮಾಗೆ ಬರೋಲ್ಲ, ಸಿನಿಮಾ ನೋಡಲ್ಲ ಎನ್ನುತ್ತಲೇ ಗತ್ತು-ಗಾಂಭೀರ್ಯದಿಂದ ನುಗ್ಗಲಿಲ್ವಾ ಎರಡು ಸಿನಿಮಾ ಎನ್ನುವ ಮೂಲಕ ದರ್ಶನ್ (Darshan) ಅಭಿಮಾನಿಗಳಿಗೂ ನಟ ದೀಪ್ (Sudeep) ಟಾಂಗ್ ಕೊಟ್ಟಿದ್ದಾರೆ. ಸಿನಿಮಾ ನೋಡಿ ಎಂದು ಭಿಕ್ಷೆ ಬೇಡುವುದು ಸರಿಯಲ್ಲ. ಎಲ್ಲರೂ ಬಂದು ಕನ್ನಡ ಸಿನಿಮಾ ನೋಡಬೇಕು ಎಂದು ಹೇಳಿದ್ದೇನೆ ಅಂದಿದ್ದಾರೆ.
ಅಲ್ಲದೇ, ನಾನು ಕಲಾವಿದನ ಅಭಿಮಾನಿಗಳ ಕುರಿತು ಮಾತನಾಡಿಲ್ಲ ಎಂದು ದರ್ಶನ್ ಅಭಿಮಾನಿಗಳಿಗೆ ಸ್ಪಷ್ಟವಾಗಿ ಹೇಳಿದ್ದಾರೆ.
ಬಳ್ಳಾರಿ ಜೈಲಿಗೆ ದರ್ಶನ್ ರನ್ನು ಶಿಫ್ಟ್ ಮಾಡಿರುವ ಕುರಿತು ಪ್ರಶ್ನಿಸಿದಾಗ, ದರ್ಶನ್ ಅವರಿಗೆ ಅಂತಾ ಫ್ಯಾನ್ಸ್ ಇದ್ದಾರೆ. ಕುಟುಂಬ ಇದೆ. ಯಾರಿಗೂ ನೋವು ಕೊಡುವುದಕ್ಕೆ ಇಷ್ಟ ಪಡುವುದಿಲ್ಲ. ಈ ದೇಶದಲ್ಲಿ ಇದೇವಿ ಅಂದ್ರೆ ಕಾನೂನಿನ ಮೇಲೆ ನಂಬಿಕೆ ಇಡಬೇಕು. ಕಾನೂನು, ಸರ್ಕಾರದ ಮೇಲೆ ನಂಬಿಕೆಯಿದೆ. ನಿಮ್ಮ ಮಾಧ್ಯಮಗಳ ಮೂಲಕವೇ ನಮಗೆ ವಿಚಾರ ಗೊತ್ತಾಗ್ತಿರೋದು. ಆಗಬೇಕಾಗಿರೋದು ಆಗುತ್ತೆ. ಕೋರ್ಟ್ ಅಂತಾ ಇರುತ್ತೆ ಎಂದು ಹೇಳಿದ್ದಾರೆ.








