ನನಗೆ ಸಣ್ಣತನದ ರಾಜಕಾರಣ ಗೊತ್ತಿಲ್ಲ : ಸಿ.ಟಿ.ರವಿ
ಚಿಕ್ಕಮಗಳೂರು : ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅತ್ತೆ ಸಿಟ್ಟನ್ನು ಬೆಕ್ಕಿನ ಮೇಲೆ ತೋರಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ವಿರುದ್ಧ ಫುಲ್ ಗರಂ ಆದ್ರು.
ನಾನು ಅಧಿಕಾರ ಬಿಟ್ಟು ಪಕ್ಷದ ಕೆಲಸಕ್ಕೆ ಹೋಗಿದ್ದೇನೆ. ಅಧಿಕಾರದ ಸ್ವಾರ್ಥ ಇದ್ದಿದ್ದರೆ ಮಂತ್ರಿಯಾಗಿಯೇ ಇರುತ್ತಿದ್ದೆ. ಅವರು ಅನುದಾನ ಕೊಟ್ಟಿಲ್ಲ ಎಂದು ಹೇಳುತ್ತಿದ್ದಾರೆ.
ಅನುದಾನವನ್ನು ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಕೇಳಲಿ. ಆದರೆ ನನ್ನ ಹೆಸರನ್ನು ಏಕೆ ಬಳಸುತ್ತಿದ್ದಾರೆ ನನಗೆ ಅರ್ಥ ಆಗುತ್ತಿಲ್ಲ ಎಂದರು.
ಇನ್ನು ನಾನು ಮಂತ್ರಿಯಾಗಿದ್ದಾಗ ಅತೀ ಹೆಚ್ಚು ಅತಿವೃಷ್ಠಿಯ ಅನುದಾನ ಕುಮಾರಸ್ವಾಮಿಗೆ ನೀಡಿದ್ದೇನೆ. ಅದರ ಅಂಕಿ-ಅಂಶ ತೆಗೆಸಿ ಕೊಡಿಸುತ್ತೇನೆ.
ಅತೀ ಹೆಚ್ಚು ಅನುದಾನ ಮೂಡಿಗೆರೆ ಹಾಗೂ ಶೃಂಗೇರಿಗೆ ನೀಡಲಾಗಿದ್ದು, ನಂತರ ಚಿಕ್ಕಮಗಳೂರಿಗೆ ನೀಡಲಾಗಿದೆ. ನಾನು ಹೇಳಿದ್ದು ಸುಳ್ಳಾದರೆ ಆಮೇಲೆ ಪ್ರಶ್ನೆ ಮಾಡಲಿ ಎಂದು ಸವಾಲ್ ಹಾಕಿದರು.
ನನಗೆ ಸಣ್ಣತನದ ರಾಜಕಾರಣ ಮಾಡಿ ಗೊತ್ತಿಲ್ಲ. ಅವರಿಗೆ ಕ್ಷೇತ್ರದ ವ್ಯಾಪ್ತಿಯೇ ಗೊತ್ತಿಲ್ಲ. ನನಗಿದ್ದ ಸಣ್ಣ ಖಾತೆಯಲ್ಲಿ ನನ್ನ ಶಕ್ತಿ ಮೀರಿ ಅವರಿಗೆ ಎಲ್ಲಾ ಕಡೆ ಕೊಡುವ ಕೆಲಸ ಮಾಡಿದ್ದೇನೆ.
ಅತಿವೃಷ್ಟಿ ಮೂಡಿಗೆರೆ ಕ್ಷೇತ್ರಕ್ಕೆ ಹೆಚ್ಚು ಹೋಗದಿದ್ದರೆ ನಾನು ರಾಜೀನಾಮೆ ಕೊಡುತ್ತೇನೆ ಎಂದು ತಿಳಿಸಿದರು.









