ನಾನು ಬಂದಿರೋದು ಮುಸ್ಲಿಂ ನಾಯಕತ್ವ ಸ್ಥಾಪನೆಗೆ : ಓವೈಸಿ
ನವದೆಹಲಿ : ನಾನು ಇಲ್ಲಿ ಬಂದಿರೋದು ಮುಸ್ಲಿಂ ನಾಯಕತ್ವದ ಸ್ಥಾಪನೆಗೆ. ಉತ್ತರ ಪ್ರದೇಶದ ಚುನಾವಣೆಯಲ್ಲಿ ನಾನೇನು ಕಿಂಗ್ ಮೇಕರ್ ಮತ್ತು ಗೇಮ್ ಬ್ರೇಕರ್ ಅಲ್ಲವೇ ಅಲ್ಲ ಎಂದು ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಉತ್ತರ ಪ್ರದೇಶ ಚುನಾವಣೆ ಕುರಿತಾಗಿ ಖಾಸಗಿ ವಾಹಿನಿಯ ಸಂವಾದಲ್ಲಿ ಮಾತನಾಡಿದ ಅಸಾದುದ್ದೀನ್ ಓವೈಸಿ, ಉತ್ತರ ಪ್ರದೇಶದಲ್ಲಿ ನನ್ನ ಗುರಿಯೇ ಬೇರೆಯಾಗಿದೆ.
ಇಲ್ಲಿ ಮುಸ್ಲಿಂ ಸಮುದಾಯದಲ್ಲಿ ನಾಯಕತ್ವ ಸ್ಥಾಪನೆಗೆ ಬಂದಿದ್ದೇನೆ. ಇಲ್ಲಿ ನಾನು ಬಂದಿರೋದು ನಾಯಕನಾಗಲು ಅಲ್ಲ.
ನಾವು ಕಳೆದ 65 ವರ್ಷಗಳಿಂದ ಸೆಕ್ಯೂಲರ್ ಹೆಸರಿನ ಪಾರ್ಟಿಯಲ್ಲಿ ಫುಟ್ಬಾಲ್ ಆಗಿದ್ದೇವೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, ಬಿಜೆಪಿಯವರು ಹಿಂದೂ ಸಹೋದರರಿಗೆ ನಮ್ಮ ಭಯ ತೋರಿಸುತ್ತಾರೆ.
ಇದೇ ರೀತಿ ಹಲವರು ತಮ್ಮ ಲಾಭಕ್ಕಾಗಿ ರಾಜಕೀಯದಾಟ ಆಡುತ್ತಿದ್ದಾರೆ. ಹಾಗಾಗಿ ಇಲ್ಲಿ ನಮ್ಮ ಸಮುದಾಯಕ್ಕೆ ನಾಯಕತ್ವದ ಅಗತ್ಯವಿದೆ ಎಂದು ಅಭಿಪ್ರಾಯಟ್ಟಿದ್ದಾರೆ.









