ಭಾರತ ಮತ್ತು ಪ್ರಧಾನಿ ಮೋದಿ ಅವರಿಂದ ನನಗೆ ಉತ್ತಮ ಬೆಂಬಲವಿದೆ – ಟ್ರಂಪ್ ವಿಶ್ವಾಸ
ವಾಷಿಂಗ್ಟನ್, ಸೆಪ್ಟೆಂಬರ್05: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ-ಅಮೆರಿಕನ್ನರು ತನಗೆ ಮತ ಚಲಾಯಿಸಲಿದ್ದಾರೆ ಎಂದು ಶುಕ್ರವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನನಗೆ ಭಾರತ ಮತ್ತು ಪ್ರಧಾನಿ ಮೋದಿ ಅವರಿಂದ ಉತ್ತಮ ಬೆಂಬಲವಿದೆ. ಭಾರತೀಯ ಜನರು ಟ್ರಂಪ್‌ಗೆ ಮತ ಹಾಕುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಅಮೆರಿಕ ಅಧ್ಯಕ್ಷ ರಿಪಬ್ಲಿಕನ್ ಪಕ್ಷದ ಟ್ರಂಪ್ ಅಭಿಯಾನದಲ್ಲಿ ‘ಇನ್ನೂ ನಾಲ್ಕು ವರ್ಷಗಳು’ ಎಂಬ ವೀಡಿಯೊ ಬಿಡುಗಡೆ ಸಂದರ್ಭದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು
ಟ್ರಂಪ್ ಪ್ರಧಾನಿ ಮೋದಿ ಅವರೊಂದಿಗಿನ ಸಂಬಂಧದ ಬಗ್ಗೆಯೂ ಮಾತನಾಡಿದ್ದು, ಪ್ರಧಾನಿ ಮೋದಿ ನನ್ನ ಸ್ನೇಹಿತ ಮತ್ತು ಅವರು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಅದೇನು ಸುಲಭದ ಕಾರ್ಯವಲ್ಲ.ಆದರೆ ಮೋದಿ ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ.
ಕಳೆದ ಸೆಪ್ಟೆಂಬರ್‌ನಲ್ಲಿ ಹೂಸ್ಟನ್‌ನಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಅವರು ತಮ್ಮ ಐತಿಹಾಸಿಕ ಭಾಷಣವನ್ನು ನೆನಪಿಸಿಕೊಂಡರು, ಪಿಎಂ ಮೋದಿಯವರನ್ನು ಅವರು ಶ್ರೇಷ್ಠ ನಾಯಕ ಮತ್ತು ಶ್ರೇಷ್ಠ ವ್ಯಕ್ತಿ ಎಂದು ಶ್ಲಾಘಿಸಿದರು.
ಈ ವರ್ಷದ ಫೆಬ್ರವರಿಯಲ್ಲಿ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರೊಂದಿಗೆ ಭಾರತಕ್ಕೆ ಭೇಟಿ ನೀಡಿದ ಎರಡು ದಿನಗಳ ಭೇಟಿಯ ಬಗ್ಗೆಯೂ ಅವರು ಮಾತನಾಡಿದರು. ನಾನು ಸಹ ಸಾಂಕ್ರಾಮಿಕ ಹರಡುವ ಸ್ವಲ್ಪ ಮೊದಲು ಭಾರತಕ್ಕೆ ಹೋಗಿದ್ದೆ. ಅದು ನಮಗೆ ಅವಿಸ್ಮರಣೀಯ ಕ್ಣಣ. ಅಲ್ಲಿನ ಜನರು ತುಂಬಾ ನಂಬಿಕಸ್ಥರು ಎಂದು ನಾವು ನೋಡಿದ್ದೇವೆ ಎಂದರು.