ಚಿತ್ರದುರ್ಗ: ನಾನು ಕೂಡ ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದೇನೆ. ಅಂತಹ ಸ್ಥಾನವನ್ನು ನಿಭಾಯಿಸುವ ಶಕ್ತಿ ಭಗವಂತ ನೀಡಿದ್ದಾನೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಚಿತ್ರದುರ್ಗದ ಮೊಳಕಾಲ್ಮೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ನಾನು ಜನರಿಂದ ಮೇಲೆ ಬಂದಿರುವನು. ಕೇವಲ ರಾಜಕಾರಣ ಮಾಡಿಕೊಂಡು ಬಂದವನಲ್ಲ ಎನ್ನುವ ಮೂಲಕ ಮತ್ತೆ ಡಿಸಿಎಂ ಆಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಕೊರೊನಾ ನಡುವೆ ಶಾಲಾ-ಕಾಲೇಜುಗಳ ಆರಂಭದ ಬಗ್ಗೆ ಇನ್ನು ಕೇಂದ್ರದಿಂದ ಯಾವುದೇ ಸೂಚನೆ ಬಂದಿಲ್ಲ. ಅದನ್ನು ಸಿಎಂ ಯಡಿಯೂರಪ್ಪ ಮತ್ತು ಶಿಕ್ಷಣ ಸಚಿವರು ತೀರ್ಮಾನಿಸುತ್ತಾರೆ. ನಮಗೆ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆ ಮುಖ್ಯ. ಅದನ್ನು ನೋಡಿಕೊಂಡು ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.
ಶಿರಾ ಮತ್ತು ಆರ್.ಅರ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜನರು ಬಿಜೆಪಿ ಕೈ ಹಿಡಿಯುತ್ತಾರೆ ಎಂಬ ನಂಬಿಕೆ ಇದೆ ಎಂದು ಶ್ರೀರಾಮುಲು. ಸುರೇಶ್ ಅಂಗಡಿ ಸಿಎಂ ಆಗಬೇಕೆಂದಿದ್ದ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ. ಅವರ ಕುಟುಂಬ, ಕಾರ್ಯಕರ್ತರು ನೋವಿನಲ್ಲಿದ್ದಾರೆ. ಸುರೇಶ್ ಅಂಗಡಿ ನಮ್ಮ ಪಕ್ಷಕ್ಕೆ ಶಕ್ತಿ ಅಗಿದ್ದರು ಎಂದಷ್ಟೇ ಶ್ರೀರಾಮುಲು ಪ್ರತಿಕ್ರಿಯಿಸಿದರು.
ಭೂ ಸುಧಾರಣಾ ಕಾಯ್ದೆಯ ಸುಗ್ರೀವಾಜ್ಞೆ ಬಗ್ಗೆ ಓದಿಕೊಂಡು ನಂತರ ಮಾಡನಾಡಬೇಕು. ಕಾಂಗ್ರೆಸ್‍ನ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಮಾಡಿರುವ ಆರೋಪಗಳೆಲ್ಲವೂ ಬೆಸ್‍ಲೆಸ್. ಆರೋಪಗಳ ಬಗ್ಗೆ ಕಾನೂನು ರೀತಿಯಲ್ಲಿ ಅವರು ಮಾತನಾಡಲಿ. ನಾನೂ ಕೂಡ ಡಿ.ಕೆ ಶಿವಕುಮಾರ್ ಮೇಲೆ ಆರೋಪ ಮಾಡಲು ಗೊತ್ತು. ಆದರೆ ದಾಖಲೆ ಇಟ್ಟುಕೊಂಡು ಮಾತನಾಡಬೇಕು ಎಂದು ಶ್ರೀರಾಮುಲು ಕಿಡಿಕಾರಿದ್ದಾರೆ.
ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಶುಭವೂ ಅಥವಾ ಅಶುಭವೆಂದು ನಿಮಗೆ ಗೋತ್ತೇ..
ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಒಳ್ಳೆದಾ ಅಥವಾ ಕೆಟ್ಟದಾ.?? ಹಾಗಾದರೆ ಇದಕ್ಕೆ ಇರುವ ಪರಿಹಾರಗಳ ಮೂಲಕ ನಿಮ್ಮ ಜೀವನ ಬದಲಾಗಬಹುದು. ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್...








